RE Classic 350: 2023 ರ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಕಲರ್ ಫುಲ್ ವೇರಿಯಂಟ್ ಗಳು; ಹಾಗೂ ಬೆಲೆ ಇಲ್ಲಿವೆ.
ದೇಶದಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ಹಾಗೂ ಅತಿ ವೇಗವಾಗಿ ಸೇಲ್ ಆಗುವ ಬೈಕ್ ಗಳಲ್ಲಿ ರಾಯಲ್ ಎನ್ ಫೀಲ್ಡ್ ಕೂಡ ಒಂದು. ನೀವು ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 (RE Classic 350) ಖರೀದಿ ಮಾಡಲು ಬಯಸಿದರೆ ಅದರ ಬೆಲೆ, ಫೀಚರ್ ಗಳಾ ಬಗ್ಗೆ ಗೊಂದಲ ಇರಬಹುದು ಚಿಂತೆ ಬೇಡ ಈ ಬೈಕ್ ನ್ ಸಂಪೂರ್ಣ ಡೀಟೇಲ್ಸ್ ಇಲ್ಲಿದೆ.
RE Classic 350 ವೇರಿಯಂಟ್ ಗಳು:
ಈಗಾಗಲೇ ಜನರಲ್ಲಿ ಚಿರಪರಿಚಿತವಾಗಿರುವ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಇದೀಗ 2 ಹೊಸ ರೂಪಾಂತರಗಳಲ್ಲಿ ಬರುತ್ತಿದೆ. ಸಿಂಗಲ್ ಚಾನೆಲ್ ಎ ಬಿ ಎಸ್ ಮತ್ತು ಡ್ಯುಯಲ್ ಚಾನೆಲ್ ಈ ಎರಡು ರೂಪಾಂತರಗಳನ್ನು ಕಾಣಬಹುದು. ಇನ್ನು ವಿಶೇಷವಾಗಿ ಸಿಂಗಲ್ ಚಾನೆಲ್ ಎ ಬಿ ಎಸ್ ನಲ್ಲಿ ಆರು ಬಣ್ಣಗಳ ಆಯ್ಕೆಯನ್ನು ಇಲ್ಲಿ ನೀಡಲಾಗಿದೆ. ಅದೇ ರೀತಿ ಡ್ಯುಯಲ್ ಚಾನೆಲ್ ನಲ್ಲಿ 9 ಬಣ್ಣದ ಆಯ್ಕೆಗಳು ಗ್ರಾಹಕರಿಗೆ ಸಿಗಲಿದೆ. ಇನ್ನು ನೀವು ಆಯ್ದುಕೊಳ್ಳುವ ಬಣ್ಣದ ಮೇಲೆ ಬೈಕ್ ನ ಬೆಲೆಯೂ ಬದಲಾಗುತ್ತೆ ಎಂಬುದನ್ನು ಗಮನಿಸಿ.
ಸಿಂಗಲ್ ಚಾನೆಲ್ ಎ ಬಿ ಎಸ್ ವೇರಿಯಂಟ್:
ಈ ವೇರಿಯಂಟ್ ನಲ್ಲಿ ಆರು ಬಣ್ಣಗಳ ಆಯ್ಕೆ ಇರುತ್ತದೆ. ಇನ್ನು ಇದರ ಬೆಲೆಯ ಬಗ್ಗೆ ಗಮನಹರಿಸುವುದಾದರೆ, (ಎಕ್ಸ್ ಶೋ ರೂಂ ಬೆಲೆ)
- ರೆಡ್ಡಿಚ್ ರೆಡ್ ಕಲರ್ ವೇರಿಯೆಂಟ್ ಬೆಲೆ ರೂ.1,90,092.
- ರೆಡ್ಡಿಚ್ ಗ್ರೇ ಬೆಲೆ ರೂ.1,90,092.
- ರೆಡ್ಡಿಚ್ ಸೇಜ್ ಗ್ರೀನ್ ಬೆಲೆ ರೂ.1,90,092.
- ಹ್ಯಾಲ್ಸಿಯಾನ್ ಬ್ಲ್ಯಾಕ್ ಬೆಲೆ ರೂ.1,92,890.
- ಹ್ಯಾಲ್ಸಿಯಾನ್ ಗ್ರೀನ್ ಬೆಲೆ ರೂ.1,92,890.
- ಹ್ಯಾಲ್ಸಿಯಾನ್ ಗ್ರೇ ರೂ. 1,92,890.
ಡ್ಯುಯಲ್ ಚಾನೆಲ್ ಎಬಿಎಸ್ ವೇರಿಯಂಟ್:
9 ಬಣ್ಣಗಳಲ್ಲಿ ಡ್ಯುಯಲ್ ಚಾನೆಲ್ ವೇರಿಯಂಟ್ ಬಿಡುಗದೆ ಮಾಡಲಾಗಿದೆ. ಇನ್ನು ಇದರ ಬೆಲೆ ನೋಡುವುದಾದರೆ, (ಎಕ್ಸ್ ಶೋ ರೂಮ್ ಗಳ ಬೆಲೆ)
- ಹ್ಯಾಲ್ಸಿಯಾನ್ ಕಪ್ಪು -ರೂ 1,98,971.
- ಹ್ಯಾಲ್ಸಿಯಾನ್ ಗ್ರೀನ್ -ರೂ 1,98,971.
- ಹಾಲ್ಸಿಯಾನ್ ಗ್ರೇ ರೂ – 1,98,971.
- ಸಿಂಗಲ್ ಡೆಸರ್ಟ್ ಸ್ಯಾಂಡ್ -ರೂ 2,10,385.
- ಸಿಂಗಲ್ ಮಾರ್ಷ್ ಗ್ರೇ -2,10,385.
- ಡಾರ್ಕ್ ಸ್ಟೆಲ್ತ್ ಬ್ಲ್ಯಾಕ್-ರೂ.2,17,588.
- ಡಾರ್ಕ್ ಗನ್‌ಮೆಟಲ್ ಗ್ರೇ-ರೂ.2,17,588.
- ಕ್ರೋಮ್ ರೆಡ್- ರೂ.2,21,297.
- ಕ್ರೋಮ್ ಕಂಚಿನ ಬೆಲೆ -ರೂ.2,21,297 ಹೆಚ್ಚಿನ ದರದ ಮಾಹಿತಿಗಾಗಿ ಹತ್ತಿರದ ಶೋರೋಂ ಗೆ ಭೇಟಿ ನೀಡಿ.