Automatic Cars: ಗೇರ್ ಬದಲಾಯಿಸುವ ಚಿಂತೆ ಬಿಟ್ಟುಬಿಡಿ; ಕೇವಲ 5.5 ಲಕ್ಷಕ್ಕೆ ಸಿಗುತ್ತಿರುವ ಬೆಸ್ಟ್ ಆಟೊಮ್ಯಾಟಿಕ್ ಕಾರುಗಳು ಇಲ್ಲಿವೆ
ಹೆಚ್ಚುತ್ತಿರುವ ಟ್ರಾಫಿಕ್ ನಿಂದಾಗಿ ಆಗಾಗ ಗೇರ್ ಬದಲಾಯಿಸಿಕೊಂಡು ವಾಹನ ಚಲಾಯಿಸುವುದು ಅಂದ್ರೆ ಚಾಲಕರಿಗೆ ಬಹಳ ದೊಡ್ಡ ತಲೆನೋವು. ಮೊದಲೇ ಕೆಲಸದ ಸುಸ್ತು ಇನ್ನು ಕಾರನ್ನು ಓಡಿಸುವಾಗ ಟ್ರಾಫಿಕ್ನಿಂದ ಮತ್ತೆ ಮತ್ತೆ ಗೇರ್ ಬದಲಾಯಿಸುವುದು ಕೂಡ ಕಷ್ಟದ ಕೆಲಸವೇ. ಅದಕ್ಕಾಗಿ ಈಗಾಗಲೇ ಹಲವಾರು ಮೋಟಾರ್ ಕಂಪನಿಗಳು ಸ್ವಯಂ ಚಾಲಿತಕಾರಗಳಿಗೆ ಹೆಚ್ಚು ಉತ್ತೇಜನ ನೀಡುತ್ತಿವೆ. ಆದರೆ ಸ್ವಯಂ ಚಾಲಿತ ಗೇರ್ ಹೊಂದಿರುವ ಕಾರುಗಳ ಬೆಲೆ ದುಬಾರಿ.
ಮಾರುಕಟ್ಟೆಯಲ್ಲಿ ಆಟೋಮ್ಯಾಟಿಕ್ ಗೇರ್ ಇರುವ ಕಾರುಗಳ ಬೇಡಿಕೆ ಹೆಚ್ಚು, ದುಬಾರಿಯೂ ಹೌದು. ಆದರೆ ಇತ್ತೀಚಿಗೆ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿರುವ ಕಡಿಮೆ ವೆಚ್ಚದ ಆಟೋಮ್ಯಾಟಿಕ್ ಕಾರುಗಳು (Automatic Cars) ಮಾರುಕಟ್ಟೆಯಲ್ಲಿ ಲಭ್ಯ. ಜನರು ಆರಾಮವಾಗಿ ಆಟೊಮ್ಯಾಟಿಕ್ ಗೇರ್ ಬಾಕ್ಸ್ ಇರುವಂತಹ ಕಾರುಗಳನ್ನ ಅಗ್ಗದ ಬೆಲೆಗೆ ಕೊಂಡುಕೊಳ್ಳಬಹುದು ಆ ಕಾರುಗಳ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.
Maruti Suzuki Alto K10:
ದೇಶದ ಸ್ವಯಂ ಚಾಲಿತ ಕಾರುಗಳಲ್ಲಿ ಅತ್ಯಂತ ಅಗ್ಗದ ಕಾರು ಇದು. ಇದರ ಎಕ್ಸ್ ಶೋರೂಮ್ ಬೆಲೆ (ಆಲ್ಟೊ ಕೆ10 ವಿ ಎಕ್ಸ್ ಐ ಎ ಜಿ ಎಸ್ ರೂಪಾಂತರ) 5.59 ಲಕ್ಷ ರೂಪಾಯಿಗಳು. 65.7 ಬಿಎಚ್ ಪಿ ಗರಿಷ್ಠ ಶಕ್ತಿ ಉತ್ಪಾದಿಸುವ, 1.0 ಲೀಟರ್ 3 ಸಿಲೆಂಡರ್ ನೈಸರ್ಗಿಕ ಅಸ್ಪಿರೇಟೆಡ್ ಪೆಟ್ರೋಲ್ ಇಂಜಿನ್ ಅಳವಡಿಸಲಾಗಿದೆ.
Maruti Suzuki S-Presso:
ಎಸ್ ಯು ವಿ ಸ್ಟೈಲಿಂಗ್ ನಲ್ಲಿ ಬರುವ ಅತ್ಯುತ್ತಮ ಹ್ಯಾಚ್ ಬ್ಯಾಕ್ ಕಾರ್ ಇದಾಗಿದೆ. ಇದು ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಎರಡನೇ ಅಗ್ಗದ ಸ್ವಯಂ ಚಾಲಿತ ಕಾರು ಎನಿಸಿಕೊಂಡಿದೆ. ಎಸ್ ಪ್ರೆಸ್ಸೋ ದ ವಿ ಎಕ್ಸ್ ಐ (o) AGS ವೇರಿಯಂಟ್ ನ ಎಕ್ಸ್ ಶೋರೂಮ್ ಬೆಲೆ ರೂ.5. 75 ಲಕ್ಷಗಳು. ಇದರಲ್ಲಿ ಆಲ್ಟೊ ಕೆ10 ನಂತೆ 1.0 ಲೀಟರ್ ಹಾಗೂ ಮೂರು ಸಿಲಿಂಡರಿನ ಎಂಜಿನ್ ಅಳವಡಿಸಲಾಗಿದೆ.
Renault Kwid:
ಫ್ರೆಂಚ್ ವಾಹನ ತಯಾರಿಕರು ವಿಶೇಷವಾಗಿ ಈ ವಾಹನ ತಯಾರಿಸಿದ್ದು ಸ್ವಯಂ ಚಾಲಿತ ಗೇರ್ ಬಾಕ್ಸ್ ಅಳವಡಿಸಲಾಗಿದೆ. ಆಸ್ಪಿರೇಟೆಡ್ ಪೆಟ್ರೋಲ್ ಇಂಜಿನ್ ಹೊಂದಿದ್ದು 67 ಬಿಎಚ್ ಪಿ ಹಾಗೂ 91 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇನ್ನು RXT 1.0 EASY -R ರೂಪಾಂತರದ ಎಕ್ಸ್ ಶೋರೂಮ್ ಬೆಲೆ 6.12 ಲಕ್ಷದಿಂದ ಆರಂಭ.
Maruti Suzuki Celerio:
ಸ್ವಯಂ ಚಾಲಿತ ಗೇರ್ ಬಾಕ್ಸ್ ಹೊಂದಿರುವ ಮಾರುತಿ ಸುಜುಕಿ ಸೆಲೆರಿಯೊ ಭಾರತದಲ್ಲಿ ಹೆಚ್ಚು ಫೇಮಸ್ ಆಗಿದೆ. ಇದು 1.0 ಲೀಟರ್ 3 ಸಿಲೆಂಡರ್ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದೆ. 65.7 ಬಿ ಎಚ್ ಪಿ ಶಕ್ತಿ ಹಾಗೂ 89ಎನ್ ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಇದರ ಬೆಲೆ ನೋಡುವುದಾದರೆ ಎಕ್ಸ್ ಶೋರೂಮ್ ಬೆಲೆ ರೂಪಾಯಿ 6.37 ಲಕ್ಷಗಳಿಂದ ಆರಂಭ.
Maruti Suzuki Wagon R:
ಮಾರುತಿ ಸುಜುಕಿ ಮೋದಲಿಗಿಂತ ಹೆಚ್ಚು ಕಾರ್ಯಕ್ಷಮತೆಯೊಂದಿಗೆ ಹೊಸ ಪ್ಲಾಟ್ ಫಾರ್ಮ್ ನಲ್ಲಿ ನಿರ್ಮಿತವಾಗಿದೆ. 1.0 ಲೀಟರ್ 3 ಸಿಲೆಂಡರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಇನ್ನು ಈ ಕಾರಿನಲ್ಲಿಯೂ ಕೂಡ 65.7 ಬಿ ಹೆಚ್ ಪಿ ಹಾಗೂ 89ಎನ್ ಎಂ ಟಾರ್ಕ್ ಉತ್ಪಾದಿಸುವ ಎಂಜಿನ್ ಇದೆ. ಇನ್ನು ಸ್ವಯಂ ಚಾಲಿತ ರೂಪಾಂತರದ ಬೆಲೆ 6.53 ಲಕ್ಷ ರೂಪಾಯಿಗಳು.