Karnataka Times
Trending Stories, Viral News, Gossips & Everything in Kannada

ಮೇ ತಿಂಗಳಲ್ಲಿ ಈ ಕಾರನ್ನು ಖರೀದಿಸಿರುವುದು ಕೇವಲ 6 ಮಂದಿ ಮಾತ್ರ! ಕಡಿಮೆ ಬೆಲೆ ಇನೋವಾ ಲುಕ್

advertisement

ಭಾರತದ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಮಾರುತಿ ಸುಜುಕಿ ಸಂಸ್ಥೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅತ್ಯಂತ ನಂಬಿಕಸ್ತ ಕಂಪನಿ ಎಂದು ಹೇಳಬಹುದಾಗಿದೆ. ಕೇವಲ ಇಷ್ಟು ಮಾತ್ರವಲ್ಲ ಅತ್ಯಂತ ಕಡಿಮೆ ಬೆಲೆಗೆ ಕಾರುಗಳನ್ನ ಮಾರಾಟ ಮಾಡುವಂತಹ ಕಂಪನಿಗಳಲ್ಲಿ ಕೂಡ ಮಾರುತಿ ಸುಜುಕಿ (Maruti Suzuki) ಕಂಪನಿಯ ಕಾರುಗಳು ಕಾಣಿಸಿಕೊಳ್ಳುತ್ತವೆ. ಆದರೆ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿರುವುದು ಮಾರುತಿ ಸುಜುಕಿ ಸಂಸ್ಥೆಯ ಲಕ್ಷುರಿಯಸ್ ಕಾರಿನ ಬಗ್ಗೆ.

ಮಾತಾಡ್ತಿರೋದು Maruti Suzuki XL6 ಕಾರಿನ ಬಗ್ಗೆ. ಈ ಕಾರು ನೋಡೋದಕ್ಕೆ ಚೆಂದ ಇದೆ ಒಳಗಡೆ ಫೀಚರ್ಸ್ ಕೂಡ ಪ್ರೀಮಿಯಂ ಆಗಿದೆ ಆದರೆ ಮಾರಾಟ ಆಗ್ತಿಲ್ಲ ಅನ್ನೋದೇ ಕಂಪನಿಯ ಅಧಿಕಾರಿಗಳಿಗೆ ಇರುವಂತಹ ತಲೆಬಿಸಿ ಎಂದು ಹೇಳಬಹುದಾಗಿತ್ತು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

Maruti Suzuki XL6:

 

Image Source: CarWale

 

Maruti Suzuki XL6 ಕಾರಿನ ಮಾರಾಟದ ಬಗ್ಗೆ ನಾವು ಮಾತನಾಡಲು ಹೊರಟಿರೋದು ದೇಶಿಯ ಮಾರುಕಟ್ಟೆಯಲ್ಲಿ ಅಲ್ಲ ಬದಲಾಗಿ ಭಾರತದಿಂದ ಬೇರೆ ದೇಶಕ್ಕೆ ಎಕ್ಸ್ಪೋರ್ಟ್ ಆಗುವಂತಹ ಕಾರುಗಳ ಬಗ್ಗೆ. ಇದೇ ವರ್ಷದ ಮೇ ತಿಂಗಳಿನಲ್ಲಿ ಈ ಕಾರು ಮಾರಾಟ ಆಗಿರೋದು ಭಾರತ ದೇಶದಲ್ಲಿ 3241 ಯೂನಿಟ್ ಗಳು. ಆದರೆ ಬೇರೆ ದೇಶಕ್ಕೆ ಎಕ್ಸ್ ಪೋರ್ಟ್ ಆಗಿರೋದು ಕೇವಲ ಆರು ಮಾತ್ರ.

advertisement

Maruti Suzuki XL6 ಕಾರಿನ ಬಗ್ಗೆ ಮಾತನಾಡುವುದಾದರೆ ಲೀಟರ್ ಕೆ 15 ಸಿ ಡುಯಲ್ ಪೆಟ್ರೋಲ್ ಇಂಜಿನ್ ಅನ್ನು ಇದರಲ್ಲಿ ಅಳವಡಿಸಿರುವುದನ್ನು ನೀವು ಕಾಣಬಹುದಾಗಿದೆ. ಆರು ಸ್ಪೀಡ್ ಗೇರ್ ಬಾಕ್ಸ್ ಗಳನ್ನು ಕೂಡ ಕಾರಿನಲ್ಲಿ ಅಳವಡಿಸಲಾಗಿದೆ.

ಈ ಕಾರಿನಲ್ಲಿ ನೀವು ಮೂರು ವೇರಿಯಂಟ್ಗಳನ್ನು ಖರೀದಿ ಮಾಡಬಹುದಾಗಿದ್ದು ಅದರಲ್ಲಿ ಒಂದು ಸಿಎನ್‌ಜಿ ವೇರಿಯಂಟ್ ನಲ್ಲಿ ಕೂಡ ಸಿಗುತ್ತದೆ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳಬಹುದು. ಇರಲಿ ನಾಲ್ಕು ಸ್ಟ್ಯಾಂಡರ್ಡ್ ವರ್ಷನ್ ಹಾಗೂ ಆರು ಪ್ರೀಮಿಯಂ ವರ್ಷನ್ ಏರ್ ಬ್ಯಾಗ್ ಗಳನ್ನು ಕೂಡ ನೀವು ಕಾಣಬಹುದಾಗಿದ್ದು ಸುರಕ್ಷತೆ ವಿಚಾರದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

 

Image Source: autoX

 

360 ಡಿಗ್ರಿ ಕ್ಯಾಮೆರಾ, 7 ಇಂಚ್ ಇನ್ಫೋಟೈನ್ಮೆಂಟ್ ಟಚ್ ಸ್ಕ್ರೀನ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಕೂಡ ಇದೆ, ಸುಜುಕಿ ಕನೆಕ್ಟೆಡ್ ಟೆಕ್ನಾಲಜಿ, ವಯರ್ಲೆಸ್ ಚಾರ್ಜರ್ ಸೇರಿದಂತೆ ಸಾಕಷ್ಟು ಅಡ್ವಾನ್ಸ್ ಫೀಚರ್ಗಳನ್ನು ನೀವು ಕಾಣಬಹುದಾಗಿದೆ.

ಇನ್ನು ಬೆಲೆಯ ವಿಚಾರಕ್ಕೆ ಬಂದರೆ ಭಾರತದ ಮಾರುಕಟ್ಟೆಯಲ್ಲಿ ಇದು 11 ರಿಂದ 14.77 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಕಾಣಿಸಿಕೊಳ್ಳುತ್ತದೆ. ವಿದೇಶಿ ಮಾರುಕಟ್ಟೆಯಲ್ಲಿ ಯಾವ ಕಾರಣಕ್ಕಾಗಿ ಇದು ಸೇಲ್ ಆಗ್ತಿಲ್ಲ ಅನ್ನೋದೇ ಕಂಪನಿಯ ತಲೆ ಬಿಸಿಯಾಗಿದೆ.

advertisement

Leave A Reply

Your email address will not be published.