Karnataka Times
Trending Stories, Viral News, Gossips & Everything in Kannada

ನಿಮ್ಮ ಬಳಿ ಎಷ್ಟೇ ಹಳೆಯ ಸ್ಕೂಟರ್ ಇದ್ದರೂ ಗುಡ್ ನ್ಯೂಸ್! ಇನ್ಮೇಲೆ ಅದು ನೀಡಲಿದೆ 100Km ಮೈಲೇಜ್

advertisement

ಸದ್ಯದ ಮಟ್ಟಿಗೆ ಪೆಟ್ರೋಲ್ ಬೆಲೆ (Petrol Price) ಏರಿಕೆ ಕಾಣುತ್ತಿರುವುದರಿಂದಾಗಿ ಜನರು ಎಲೆಕ್ಟ್ರಿಕ್ ಸೇರಿದಂತೆ ಬೇರೆ ಬೇರೆ ರೀತಿಯ ಪರ್ಯಾಯ ಇಂಧನವನ್ನು ಬಳಸಿಕೊಳ್ಳುವಂತಹ ದ್ವಿಚಕ್ರ ವಾಹನಗಳ ಹುಡುಕಾಟದಲ್ಲಿ ಇದ್ದಾರೆ ಎಂದು ಹೇಳಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಪ್ರಪಂಚದ ಮೊದಲ ಸಿಎನ್‌ಜಿ ಚಾಲಿತ ಬೈಕ್ ಅನ್ನು ಲಾಂಚ್ ಮಾಡೋದಕ್ಕೆ ಬಜಾಜ್ ಸಂಸ್ಥೆ ಸಿದ್ದವಾಗಿ ನಿಂತಿದೆ ಅನ್ನುವಂತಹ ವಿಚಾರ ನಿಮಗೆಲ್ಲರಿಗೂ ತಿಳಿದಿರುವುದಾಗಿದೆ.

ಅಳವಡಿಸಿಕೊಳ್ಳಿ ಸಿಎನ್‌ಜಿ ಕಿಟ್ ಸಿಗುತ್ತೆ ಭರ್ಜರಿ ಮೈಲೇಜ್:

 

Image Source: BikeWale

 

ಇನ್ನು ಮಾರುಕಟ್ಟೆಯಲ್ಲಿ ಯಾವುದೇ ಸಿಎನ್ಜಿ ದ್ವಿಚಕ್ರ ವಾಹನಗಳನ್ನು ನೀವು ಕಾಣೋದಕ್ಕೆ ಸಾಧ್ಯವಿಲ್ಲ ಆದರೆ ಈ ಕಿಟ್ (CNG Kit) ಅನ್ನು ಅಳವಡಿಸಿಕೊಂಡರೆ ಖಂಡಿತವಾಗಿ ನಿಮ್ಮ ಸ್ಕೂಟರ್ 100 ಕಿಲೋಮೀಟರ್ಗಳ ಮೈಲೇಜ್ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಹೇಳಲಾಗುತ್ತದೆ.

ಸಾಮಾನ್ಯವಾಗಿ ಪೆಟ್ರೋಲ್ ಬೆಲೆ (Petrol Price) ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೆಲವೊಂದು ಕಡೆಗಳಲ್ಲಿ ಪ್ರತಿ ಲೀಟರ್ಗೆ 110 ಇದೆ. ಇನ್ನೂ ಇದರಲ್ಲಿ ಒಂದು ಸ್ಕೂಟರ್ ಸಾಮಾನ್ಯವಾಗಿ ಕೇವಲ 40 ರಿಂದ 45km ಮೈಲೇಜ್ ನೀಡಿದರೆ ಈಗ ಹೆಚ್ಚು ಅಂತ ಹೇಳಬಹುದು. ಆದರೆ ಒಂದು ಸಿಎನ್‌ಜಿ ಕಿಟ್ ಅನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಒಂದು ಕೆಜಿಗೆ 100 ಕಿಲೋಮೀಟರ್ಗಳ ವರೆಗೆ ಸ್ಕೂಟರ್ ನಲ್ಲಿ ಮೈಲೇಜ್ ಪಡೆದುಕೊಳ್ಳಬಹುದಾಗಿದೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

advertisement

ಅಂದರೆ ನೀವು ನಿಮ್ಮ ಸ್ಕೂಟರ್ ಗೆ ಸಿಎನ್‌ಜಿ ಕಿಟ್ (CNG Kit) ಅಳವಡಿಸಿಕೊಂಡರೆ ಪ್ರತಿ ಕಿಲೋಮೀಟರ್ ಅನ್ನು 70 ಪೈಸೆ ರೂಪಾಯಿಗಳ ಖರ್ಚಿನಲ್ಲಿ ಓಡಾಡಿಸಬಹುದಾಗಿದೆ. ಸಿ ಎನ್ ಜಿ ಕಿಟ್ ಮೇಕರ್ ಕಂಪನಿ ಆಗಿರುವಂತಹ LOVATO ನಿಮ್ಮ ಸ್ಕೂಟರ್ ಗೆ ಸಿಎನ್‌ಜಿ ಕಿಟ್ ಒದಗಿಸುವಂತಹ ಕೆಲಸವನ್ನು ಮಾಡುತ್ತದೆ. ಇದರ ಖರ್ಚು ಸರಿ ಸುಮಾರು 18 ಸಾವಿರ ರೂಪಾಯಿ ಆಗಿರುತ್ತದೆ.

 

Image Source: carandbike

ಈ ಖರ್ಚನ್ನು ನೀವು ಒಂದು ವರ್ಷಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಸಂಪೂರ್ಣವಾಗಿ ವಸೂಲು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇದನ್ನ ಇನ್ಸ್ಟಾಲ್ ಮಾಡೋದಕ್ಕೆ ಕೇವಲ ನಾಲ್ಕು ಗಂಟೆಗಳ ಸಮಯ ಬೇಕಾಗುತ್ತದೆ ಹಾಗೂ ಪೆಟ್ರೋಲ್ ಮತ್ತು ಸಿಎನ್ಜಿ ಎರಡು ವಿಧಾನವನ್ನು ಬಳಸುವಂತಹ ಸ್ವಿಚ್ ಅನ್ನು ಕೂಡ ನೀವು ಇದರಲ್ಲಿ ಪಡೆದುಕೊಳ್ಳಬಹುದಾಗಿದೆ. ಇದರಿಂದ ಮೈಲೇಜ್ ಪಡೆದುಕೊಂಡಷ್ಟು ಕೇವಲ ಲಾಭ ಮಾತ್ರ ಅಲ್ಲ ನಷ್ಟ ಕೂಡ ಇದೆ ಅನ್ನೋದನ್ನ ತಿಳಿದುಕೊಳ್ಳಬೇಕಾಗಿರುತ್ತದೆ.

ಸಿಎನ್‌ಜಿ ಕಿಟ್ ಅಳವಡಿಸಿಕೊಳ್ಳುವುದರಿಂದ ಆಗುವ ನಷ್ಟಗಳು:

ಸಿಎನ್‌ಜಿ ಕಿಟ್ (CNG Kit) ಅನ್ನು ಅಳವಡಿಸಿದ ನಂತರ ಅದರಲ್ಲಿ ಒಂದೇ ಬಾರಿ ತುಂಬಿಸುವುದಕ್ಕೆ ಸಾಧ್ಯ ಆಗೋದಕ್ಕೆ ಕೇವಲ 1.2 ಕೆಜಿ ಮಾತ್ರ. ಹೀಗಾಗಿ ಇದರಿಂದ ಒಂದು ಬಾರಿಗೆ ನೀವು 120 ರಿಂದ 130 ಕಿಲೋಮೀಟರ್ಗಳ ವರೆಗೆ ಮಾತ್ರ ಹೋಗಲು ಸಾಧ್ಯವಿರುತ್ತದೆ. ಇನ್ನು ಗ್ಯಾಸ್ ಸ್ಟೇಷನ್ ಅಷ್ಟೊಂದು ಸುಲಭದಲ್ಲಿ ಎಲ್ಲೂ ಕೂಡ ಸಿಗುವುದಿಲ್ಲ ಹೀಗಾಗಿ ಇದು ಕೂಡ ಸ್ವಲ್ಪ ಮಟ್ಟಿಗೆ ತಲೆ ಕೆಡಿಸಿಕೊಳ್ಳಬೇಕಾಗಿರುವಂತಹ ವಿಚಾರವಾಗಿದ್ದು ಪ್ರಮುಖವಾಗಿ ಇದನ್ನು ಅಳವಡಿಸುವುದರಿಂದಾಗಿ ವಾಹನದ ಪಿಕಪ್ ಕೂಡ ಸಾಕಷ್ಟು ಗಣನೀಯವಾಗಿ ಕಡಿಮೆಯಾಗುತ್ತದೆ.

advertisement

Leave A Reply

Your email address will not be published.