Luxury Car: ಕೇವಲ 12 ಲಕ್ಷದ ಈ ಬೆಂಕಿ ಕಾರಿಗೆ ಜನ ಮುಗಿಬೀಳೋದು ಖಚಿತ! ಯಾವ ಕಂಪೆನಿಯದ್ದು ಗೊತ್ತಾ?
ಭಾರತದಲ್ಲಿ ಬೆಳೆಯುತ್ತಿರುವಂತಹ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಪ್ರತಿಯೊಬ್ಬರು ಕೂಡ ತಮ್ಮ ಕಾರುಗಳನ್ನು ಲಾಂಚ್ ಮಾಡುವಂತಹ ಪ್ರಯತ್ನದಲ್ಲಿ ಇರುತ್ತಾರೆ. ಅದೇ ಸಾಲಿಗೆ ಈಗ Citroen ಇಂಡಿಯಾ ಕಂಪನಿ ಕೂಡ ಸೇರಿದ್ದು ಭಾರತದ ಮಾರುಕಟ್ಟೆಗೆ Citroen C4 ಕಾರ್ ಅನ್ನು ಲಾಂಚ್ ಮಾಡಬೇಕು ಎನ್ನುವ ಸಿದ್ಧತೆಯಲ್ಲಿ ಇದ್ದು ಈಗಾಗಲೇ ಈ ಕಾರಿನ ಟೆಸ್ಟಿಂಗ್ ಕೂಡ ಪ್ರಾರಂಭವಾಗಿದೆ ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿರುವಂತಹ ಫೋಟೋಗಳ ಮೂಲಕ ತಿಳಿದು ಬಂದಿದೆ.
ಈ ಬಾರಿ ಈ ಕಾರನ್ನು ಸಾಕಷ್ಟು ಅಡ್ವಾನ್ಸ್ ಟೆಕ್ನಾಲಜಿಯ ಜೊತೆಗೆ ಸ್ಟೈಲಿಶ್ ಡಿಸೈನ್ ಗಳಿಂದಲೂ ಕೂಡ ಇಂದಿನ ಜಮಾನಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಪರಿಚಯಿಸಲು ಕಂಪನಿ ಹೊರಟಿದೆ. ಹಾಗಿದ್ದರೆ ಬನ್ನಿ ಇಷ್ಟೊಂದು ಸದ್ದು ಮಾಡುತ್ತಿರುವ Citroen C4 ಕಾರಿನ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.
Citroen C4 ಜೊತೆಗೆ ನಿಮಗೆ C4X ಎನ್ನುವಂತಹ ದೊಡ್ಡ ಮಾಡಲ್ ಅನ್ನು ಕೂಡ ನೀವು ಕಾಣಬಹುದಾಗಿದೆ. ಈ ಕಾರಿನ ಉದ್ದ 4600 ಮಿಲಿ ಮೀಟರ್ ಇದೆ. ಬೇಸಿಕ್ ಸ್ಟೈಲ್ ಅನ್ನು ಅಳವಡಿಸಲಾಗಿದ್ದರು ಕೂಡ ನೋಡೋದಕ್ಕೆ ಖಂಡಿತವಾಗಿ ಲೇಟೆಸ್ಟ್ ಡಿಸೈನ್ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಪ್ರತಿಯೊಂದು ಕಂಫರ್ಟ್ ಫೀಚರ್ಸ್ಗಳನ್ನು ಕೂಡ ನೀವು ಈ ಕಾರಿನಲ್ಲಿ ಕಾಣಬಹುದಾಗಿದ್ದು ಫ್ಯಾಮಿಲಿ ಗ್ರಾಹಕರಿಗೆ ಇದು ಹೇಳಿ ಮಾಡಿಸಿದ ಕಾರ್ ಆಗಿದೆ. ಫ್ಲಶ್ ಫಿಟೆಡ್ ಹೆಡ್ ಲ್ಯಾಂಪ್, Dual Rectangular ಲೈಟ್ಗಳನ್ನು ಕೂಡ ನೀವಿಲ್ಲಿ ಕಾಣಬಹುದಾಗಿದೆ. ಒಟ್ಟಾರೆಯಾಗಿ Citroen C4 ಕಾರನ್ನು ಎಲೆಕ್ಟ್ರಿಕ್ ಡೀಸೆಲ್ ಹಾಗೂ ಪೆಟ್ರೋಲ್ ವೇರಿಯಂಟ್ ಗಳಲ್ಲಿ ಕೂಡ ನೀವು ಕಾಣಬಹುದಾಗಿದೆ.
Citroen C4 ಪೋರ್ಟ್ ಪೋಲಿಯೋದಲ್ಲಿ ನಾಲ್ಕು ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವಂತಹ ಸಾಧ್ಯತೆ ಹೆಚ್ಚಾಗಿದೆ. ಕಾರಿನ ಕುರಿತಂತೆ ಇನ್ನೂ ಕೂಡ ಹೆಚ್ಚಿನ ಅಧಿಕೃತ ಮಾಹಿತಿಗಳು ಕಂಪೆನಿ ಬಿಟ್ಟು ಕೊಟ್ಟಿಲ್ಲ ಆದರೆ ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ Citroen C4 Luxury Car ಸರಿಸುಮಾರು 12 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಮಾರಾಟ ಆಗಬಹುದು ಎನ್ನುವಂತಹ ಮಾಹಿತಿಗಳು ಸಿಕ್ಕಿವೆ. ಮುಂದಿನ ದಿನಗಳಲ್ಲಿ ಕಂಪನಿ ಇದರ ಕುರಿತಂತೆ ಹೆಚ್ಚಿನ ಮಾಹಿತಿಗಳನ್ನು ನೀಡಿದಾಗ ಅಷ್ಟೇ ನಾವು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.