Karnataka Times
Trending Stories, Viral News, Gossips & Everything in Kannada

CNG Fuel: ವಾಹನಗಳಿಗೆ CNG ತುಂಬಿಸುವವರಿಗೆ ಕಹಿಸುದ್ದಿ, ಮದ್ಯಮವರ್ಗಕ್ಕೆ ಮತ್ತೊಂದು ಹೊರೆ

ಸಾರ್ವಜನಿಕರಿಗೆ ಹಣದುಬ್ಬರದ ಬಿಸಿ ತಾಗಲಿದೆ, ಈಗಾಗಲೇ ದಾಖಲೆಯ ಮಟ್ಟದಲ್ಲಿ ಹಣದುಬ್ಬರ ಪರಿಸ್ಥಿತಿಯನ್ನು ಜನ ಎದುರಿಸುತ್ತಿದ್ದಾರೆ ಇದರ ಜೊತೆಗೆ ಸಿಎನ್ ಜಿ (CNG) ದರವು ಕೂಡ ಜಾಸ್ತಿಯಾಗಲಿದ್ದು ಮಧ್ಯಮ ವರ್ಗದ ಜನರ ಜೇಬಿಗೆ ಕತ್ತರಿ ಬೀಳಲಿದೆ. ನೈಸರ್ಗಿಕ ಅನಿಲ (Natural Gas) ಹಾಗೂ ಸಿಎನ್‌ಜಿ ಬೆಲೆ (CNG Rate) ಹೆಚ್ಚಳವಾದರೆ ವಾಹನ ಚಲಾವಣೆ ಹಾಗೂ ಅಡುಗೆ ಇಂಧನ ದುಬಾರಿಯಾಗುವುದು ಮಾತ್ರವಲ್ಲ ವಿದ್ಯುತ್ ರಸಗೊಬ್ಬರಗಳ ಉತ್ಪಾದನೆಯ ಮೇಲು ಕೂಡ ಇದು ಪರಿಣಾಮ ಬೀರಲಿದೆ. ಗೃಹವು ಉಪಯೋಗಿ ವಿದ್ಯುತ್ ಬಳಕೆಯಿಂದ ಹಿಡಿದು ಕೃಷಿಯ ವರೆಗೂ ಹಣದುಬ್ಬರದ ಭೀಕರ ಪರಿಣಾಮ ಎದುರಿಸಬೇಕಾಗಬಹುದು. ಗೇಲ್ ಇಂಡಿಯಾ ಪೈಪ್ ಲೈನ್ (GAIL India Pipeline) ಸುಂಕ ಈಗಾಗಲೇ ಹೆಚ್ಚಿಸಿದೆ ಕೆಲವು ಮಾಹಿತಿಯ ಪ್ರಕಾರ ಪೆಟ್ರೋಲಿಯಂ (Petroleum) ಮತ್ತು ನೈಸರ್ಗಿಕ ಅನಿಲ ನಿರ್ವಹಣಾ ಮಂಡಳಿ (GAIL) ನೈಸರ್ಗಿಕ ಅನಿಲ ಪೈಪ್ ಲೈನ್ (Pipe Line) ಗಳ ಸುಂಕವನ್ನು ಪ್ರತಿ MMBTU ದರವನ್ನು 58.61 ರೂಪಾಯಿ ಹೆಚ್ಚಿಸಿದ್ದು ಇದು ಮೊದಲ ಸುಂಕಕ್ಕಿಂತ 45% ಹೆಚ್ಚಾಗಿದೆ. ಈ ಹೊಸ ಬೆಲೆ ಇದೆ ಬರುವ ಏಪ್ರಿಲ್ 1, 2023ರಿಂದ ಅನ್ವಯವಾಗಲಿದೆ ಎಂದು ಕಂಪನಿ ತಿಳಿಸಿದೆ.

Advertisement

ಮಾಹಿತಿಯ ಪ್ರಕಾರ ಸುಂಕ ಹೆಚ್ಚಳದಿಂದ ಪ್ರಯೋಜನವು ಇದೇ ತೊಂದರೆಯೂ ಇದೆ. ಸುಂಕ ಹೆಚ್ಚಳದಿಂದ ಕೆಲವು ಜನರಿಗೆ ಪ್ರಯೋಜನವು ಸಿಗಲಿದೆ ಅದೇ ಸಮಯದಲ್ಲಿ ಇನ್ನೂ ಕೆಲವರಿಗೆ ತೊಂದರೆಯೂ ಆಗುವ ನಿರೀಕ್ಷೆ ಇದೆ ಎಂದು ಮಹಾನಗರ ಗ್ಯಾಸ್ ಲಿಮಿಟೆಡ್ (GAS LIMITED) ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಸಿಂಘಾಲ್ (Ashok Singhal) ಹೇಳಿದ್ದಾರೆ.

Advertisement

ಇನ್ನಷ್ಟು ಹೆಚ್ಚಳವಾಗಲಿದೆ ಆಟೋದರ:

Advertisement

ಸಿ ಎನ್ ಜಿ ಬೆಲೆ (CNG Price) ಏರಿಕೆ ಆದರೆ ಮೊದಲು ಆಟೋ ಮತ್ತು ಟ್ಯಾಕ್ಸಿಯ ದರ ಹೆಚ್ಚಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಸಾರಿಗೆ ಪ್ರಯಾಣ ದುಬಾರಿ ಆಗಲಿದೆ ಅದೇ ರೀತಿ 2030ರ ವೇಳೆಗೆ ನೈಸರ್ಗಿಕ ಅನಿಲದ ಬಳಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಸರ್ಕಾರ. ನೈಸರ್ಗಿಕ ಅನಿಲದ ಉಪಲಬ್ದತೆಯನ್ನು 6.2% ನಿಂದ 15% ಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.

Leave A Reply

Your email address will not be published.