Karnataka Times
Trending Stories, Viral News, Gossips & Everything in Kannada

Bajaj Pulsar 220 F: ಬಜಾಜ್ ಪಲ್ಸರ್ 220 ಎಫ್ ಪ್ರಿಯರಿಗೆ ಸಿಹಿಸುದ್ದಿ, ಮತ್ತೆ ಅತೀ ವಿಶೇಷತೆ ಜೊತೆ ಮಾರುಕಟ್ಟೆಗೆ

Advertisement

ಅತಿ ದೊಡ್ಡ ವಾಹನ ತಯಾರಿಕಾ ಸಂಸ್ಥೆಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಅತ್ಯುತ್ತಮ ಬೈಕ್ ಗಳನ್ನು ನೀಡಿರುವ ಕಂಪನಿ ಬಜಾಜ್ (Bajaj) ಗ್ರಾಹಕರಿಗೆ ಬಜಾಜ್ ಕಂಪನಿ (Bajaj Company) ಯ ದ್ವಿಚಕ್ರ ವಾಹನಗಳ (Two-Wheelers) ಮೇಲೆ ನಂಬಿಕೆ ಜಾಸ್ತಿ. ಹಾಗಾಗಿಯೇ ಬಜಾಜ್ ಬೈಕ್ (Bajaj Bike) ಗಳು ಇನ್ನಷ್ಟು ಹೊಸ ಹೊಸ ವಿನ್ಯಾಸ ಹಾಗೂ ಉತ್ತಮ ಕಾರ್ಯಕ್ಷಮತೆಯ ಜೊತೆಗೆ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿವೆ. ಅವುಗಳಲ್ಲಿ ಈ ವರ್ಷ ಬಿಡುಗಡೆ ಮಾಡಿರುವ ಪಲ್ಸರ್ 220 ಎಫ್ (Pulsar 220 F) ಕೂಡ ಒಂದು. ಇದರ ಎಕ್ಸ್ ಶೋರೂಮ್ ಬೆಲೆ ನೋಡುವುದಾದರೆ 1.37 ಲಕ್ಷ ರೂಪಾಯಿಗಳು. ಕಳೆದ ವರ್ಷ ಏಪ್ರಿಲ್ 2022 ರಲ್ಲಿ ಕಂಪನಿ ಮೋಟರ್ ಸೈಕಲ್ ತಯಾರಿಕೆಯನ್ನು ಸ್ಥಗಿತಗೊಳಿಸಿತು. ನವೀಕರಣಗಳೊಂದಿಗೆ ಮತ್ತೆ ಈ ಬೈಕ್ ಗಳ ತಯಾರಿಕೆ ಆರಂಭವಾಗಿದೆ. ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಮತ್ತೆ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದಾಗಿ ಕಂಪನಿ ಘೋಷಿಸಿದೆ. ಅದೃಷ್ಟ ಒಂದು ರೂಪಾಂತರ ಮಾತ್ರ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಪಲ್ಸರ್ 220 ಎಫ್ (Pulsar 220 F) ಟಿವಿಎಸ್ ಅಪಾಚಿ ಆರ್ ಟಿ ಆರ್ 200 4 ವಿ (TVS Apache RTR 200 4V) ಬೈಕ್ ಹಾಗೂ ಬಜಾಜ್ ನ ಪಲ್ಸರ್ ಎಫ್ 250 (Bajaj Pulsar F250) ಜೊತೆ ನೇರವಾಗಿ ಸ್ಪರ್ಧಿಸಬಹುದು ಇನ್ನು ಶೀಘ್ರದಲ್ಲಿಯೇ ದೇಶಾದ್ಯಂತ ಡೀಲರ್ಶಿಪ್ ಗಳು ಕೂಡ ಲಭ್ಯವಾಗಲಿದೆ.

Bajaj Pulsar 220 F ನಲ್ಲಿ ಹೊಸತೇನಿದೆ:

ಕಂಪನಿ ಕಳೆದ ವರ್ಷ ಪಲ್ಸರ್ ತಯಾರಿಕೆಯನ್ನು ಸ್ಥಗಿತಗೊಳಿಸಿತು. ಆದರೆ ಈಗ ಹೊಸ ವಿನ್ಯಾಸದಲ್ಲಿ ಪಲ್ಸರ್ 220 ಎಫ್ (Pulsar 220 F) ರೋಡಿಗಿಳಿಯಲಿದೆ. ಕ್ಲಿಪ್ ಆನ್ ಹ್ಯಾಂಡಲ್ ಬಾರ್ ಗಳು ಹಿಂಭಾಗದ ಎರಡು ಪೀಸ್ ಗ್ರಾಬ್ ರೈಲ್, ಸ್ಪ್ಲಿಟ್ ಸ್ವೀಟ್ ಮೊದಲಾದವು ಹಳೆಯ ರೂಪಾಂತರದಲ್ಲಿ ಇರುವಂತೆಯೇ ಇದೆ. ಇನ್ನು ಇಂಜಿನ್ (Engine) ನೋಡುವುದಾದರೆ 220 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಫ್ಯುಯಲ್ ಇಂಜೆಕ್ಟೆಡ್ ಇಂಜಿನ್ ಅನು ಈ ಬೈಕ್ ನಲ್ಲಿ ಅಳವಡಿಸಲಾಗಿದೆ. 8500 ಆರ್ ಪಿ ಎಮ್ ನಲ್ಲಿ ಟ್ವೆಂಟಿ ಬಿ ಎಚ್ ಪಿ ಪವರ್ ನೀಡಿದರೆ, 7000 ಆರ್ ಪಿ ಎಮ್ ನಲ್ಲಿ 18. 5 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ 5 ಸ್ಪೀಡ್ ಗೇರ್ ಬಾಕ್ಸ್ ಜೋಡಿಸಲಾಗಿದ್ದು ಹೊಸ ಆರ್‌ಡಿಇ ನೋರ್ಮ್ಸ್ ಪ್ರಕಾರ ಇಂಜಿನ್ ಅನ್ನು ಡಿಸೈನ್ ಮಾಡಲಾಗಿದೆ.

Bajaj Pulsar 220 F ವೈಶಿಷ್ಟ್ಯತೆಗಳು:

ಟ್ಯಾಕೋಮೀಟರ್ ಗಾಗಿ ಅನಲಾಗ್ ಡಯಲ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕಂಸೋಲ್ ಈ ಬೈಕ್ ನಲ್ಲಿ ಕಾಣಬಹುದು ಇದರ ಜೊತೆಗೆ ಇಂಧನ ಮಟ್ಟದ ಸೂಚಕ ಸ್ಪೀಡೋಮೀಟರ್ (Speedometer) ಮೊದಲಾವುಗಳನ್ನು ಡಿಜಿಟಲ್ ಸ್ಕ್ರೀನ್ (Digital Screen) ಮೇಲೆ ಕಾಣಬಹುದು. ಟೆಲಿಸ್ಕೋಪಿಕ್ ಫ್ರಂಟ್ ಫೋಕ್ಸ್ ಹಾಗೂ ಹಿಂಭಾಗದಲ್ಲಿ ಡುಯಲ್ ಗ್ಯಾಸ್ ಚಾರ್ಜ್ ಶಾಕ್ ಒಬ್ಸರ್ವ್ ಇದೆ ಇನ್ನು ಈ ಬೈಕ್ ನಿಯಂತ್ರಿಸಲು ಡಿಸ್ಕ್ ಬ್ರೇಕ್ ಗಳನ್ನು ಮುಂಭಾಗದಲ್ಲಿ ಹಾಗೂ ಹಿಂಭಾಗದಲ್ಲಿ ಸಿಂಗಲ್ ಚಾನೆಲ್ ಎಬಿಎಸ್ ಜೊತೆಗೆ ನೀಡಲಾಗಿದೆ. 17 ಇಂಚಿನ ಅಲಾಯಿ ವೀಲ್ಸ್ ಜೋಡಿಸಲಾಗಿದ್ದು ಹಳೆಯ ಮಾದರಿಗಿಂತ 3000 ದುಬಾರಿ ಆಗಬಹುದು.

Leave A Reply

Your email address will not be published.