Karnataka Times
Trending Stories, Viral News, Gossips & Everything in Kannada

7 Seater Car: ಈ 7 ಸೀಟರ್ ಕಾರಿನ ಮುಂದೆ ಕ್ರೆಟಾ ನೆಕ್ಸಾನ್ ಲೆಕ್ಕಕ್ಕಿಲ್ಲ, ಅತೀ ಕಡಿಮೆ ಬೆಲೆಗೆ ಲಭ್ಯ

Advertisement

ಇದು ಜನ ಹೆಚ್ಚಾಗಿ ಎಸ್ ಯುವಿ ಕಾರ್ (SUV Car) ಗಳನ್ನೇ ಖರೀದಿಸಲು ಇಷ್ಟಪಡುತ್ತಾರೆ ಹಾಗಾಗಿ ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹಾಗೂ ಉತ್ಪಾದನೆ ಎರಡು ಹೆಚ್ಚಾಗಿವೆ. ದೀರ್ಘಕಾಲದವರೆಗೆ ಜನರನ್ನ ಆಕರ್ಷಿಸುತ್ತಿರುವ ಎಸ್ ಯುವಿ (SUV) ಗಳಲ್ಲಿ ಮಹೀಂದ್ರ ಸ್ಕಾರ್ಪಿಯೊ ಕೂಡ ಒಂದು.

ಮಾರುಕಟ್ಟೆಗೆ ಹಲವಾರು ಹೊಸ ಬಗೆಯ ಕಾರುಗಳು ಹೊಸ ವಿನ್ಯಾಸದೊಂದಿಗೆ ಬಂದಿದ್ದರು ಕೂಡ ಜನರ ಮನಸ್ಸಿನಲ್ಲಿ ಸ್ಕಾರ್ಪಿಯೋ (Scorpio) ಬಗ್ಗೆ ಇರುವ ಆಳವಾದ ಪ್ರೀತಿ ಮಾತ್ರ ಕಡಿಮೆ ಆಗಿಲ್ಲ. 11 ತಿಂಗಳಲ್ಲಿ ದಾಖಲೆಯ ಮಾರಾಟವನ್ನು ಸೃಷ್ಟಿಸಿರುವ ಸ್ಕಾರ್ಪಿಯೋ (Scorpio) ಕಂಪನಿಯ ಎರಡನೇ ಅತಿ ಹೆಚ್ಚು ಮಾರಾಟವಾದ ಎಸ್ ಯುವಿ (SUV) ಎನಿಸಿದೆ.

ಸ್ಕಾರ್ಪಿಯೋ (Scorpio) ಮಾರಾಟದಲ್ಲಿ 108% ಬೆಳವಣಿಗೆ ದಾಖಲಾಗಿದೆ. ಇದರ ಮಾರಾಟ ಕ್ರೆಟಾ (Creta) ಮತ್ತು ನೆಕ್ಸಾನ್ ( Nexon) ಗಳಿಗಿಂತಲೂ ಹೆಚ್ಚಾಗಿದೆ. ಫೆಬ್ರುವರಿ 2022 ಮತ್ತು ಫೆಬ್ರುವರಿ 2023 ನಡುವೆ ಅಂದರೆ ಒಂದು ವರ್ಷದ ಅವಧಿಯಲ್ಲಿ 6847 ಸ್ಕಾರ್ಪಿಯೊ ಯೂನಿಟ್ (Scorpio Unit) ಗಳನ್ನು ಕಂಪನಿ ಮಾರಾಟ ಮಾಡಿದೆ. ಕಳೆದ ವರ್ಷ 32,635 ಯೂನಿಟ್ ಗಳು ಮಾತ್ರ ಮಾರಾಟವಾಗಿದ್ದವು. ಅಷ್ಟೇ ಅಲ್ಲ ಈ ಬಾರಿ 1,898ಗಳು ರಫ್ತು ಮಾಡಲಾಗಿದೆ.

ಸ್ಕಾರ್ಪಿಯೋ ಕ್ಲಾಸಿಕ್ (Scorpio Classic) ಮತ್ತು ಸ್ಕಾರ್ಪಿಯೋ ಎನ್ (Scorpio N) ಎನ್ನುವ ಎರಡು ಬೇರೆ ಬೇರೆ ಆಯ್ಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಸ್ಕಾರ್ಪಿಯೋ ಎನ್ (Scorpio N) ಮಾಡೆಲ್ ನ ಬೇಡಿಕೆ ಹೆಚ್ಚಾಗಿದ್ದು ಈ ಕಾರಿಗಾಗಿ ವೇಟಿಂಗ್ ಪಿರಿಯಡ್ (Waiting Period) ಒಂದು ವರ್ಷ ದಾಟಿದೆ. ಅದೇ ಸ್ಕಾರ್ಪಿಯೋ ಕ್ಲಾಸಿಕ್ ಕಾರನ್ನು ಪಡೆಯಲು ಕನಿಷ್ಠ 26 ವಾರಗಳು ಕಾಯಬೇಕು. ಜನವರಿ 2023ರಲ್ಲಿ ಅತಿ ಹೆಚ್ಚು ಬುಕ್ಕಿಂಗ್ ಆಗಿದ್ದು, ಕಂಪನಿ ಪೆಂಡಿಂಗ್ ಇರುವ 1.19 ಲಕ್ಷ ಆರ್ಡರ್ ಗಳನ್ನು ಪೂರೈಸಬೇಕಿದೆ.

ಇನ್ನು ಈ ಕಾರಿನ ಬೆಲೆ ನೋಡುವುದಾದರೆ, ಸ್ಕಾರ್ಪಿಯೋ ಎನ್ ಎಕ್ಸ್ ಶೋರೂಮ್ ಬೆಲೆ 12.74 ಲಕ್ಷ ರೂಪಾಯಿಗಳು. ಇದು ಪೆಟ್ರೋಲ್ (Petrol) ಹಾಗೂ ಡೀಸೆಲ್ (Diesel) ಎರಡು ರೂಪಾಂತರದಲ್ಲಿ ಲಭ್ಯವಿದೆ. ಹಾಗೇನೆ Z2, Z4, Z6, Z8 ಎನ್ನುವ ನಾಲ್ಕು ವೇರಿಯಂಟ್ ನಲ್ಲಿ ಸಿಗುತ್ತದೆ. ಇನ್ನು ಈ ಎಸ್ ಯುವಿ 2.0 ಲೀಟರ್ ಎಂ ಟರ್ಬೋ ಪೆಟ್ರೋಲ್ ಎಂಜಿನ್ (Turbo Petrol Engine) ಹೊಂದಿದ್ದು 200 ಬಿ ಎಚ್ ಪಿ ಪವರ್ ಹಾಗೂ 380 ಎಂಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಇನ್ನೊಂದು ವೇರಿಯಂಟ್ ನಲ್ಲಿ 2.0 ಲೀಟರ್ ಡೀಸೆಲ್ ಇಂಜಿನ್ ಇದು 172 ಬಿಎಚ್ ಪಿ ಪವರ್ ಹೊಂದಿದೆ. ಇನ್ನು ಈ ಕಾರಿನಲ್ಲಿ ಆಟೋಮೆಟಿಕ್ ಹಾಗೂ ಮ್ಯಾನ್ ವಾಲ್ ಎರಡು ಆಯ್ಕೆಯನ್ನು ಪಡೆಯಬಹುದು.

Leave A Reply

Your email address will not be published.