Citroen New: 7 ಸೀಟರ್ ನ ಎರ್ಟಿಗಾ ಕಾರನ್ನು ಕೂಡ ಮೂಲೆಗುಂಪು ಮಾಡಲಿದೆ ಈ ಬೆಂಕಿ ಕಾರು! ಅತ್ಯಂತ ಕಡಿಮೆ ಬೆಲೆ

Advertisement
ಒಂದು ವೇಳೆ ನಿಮ್ಮ ಕುಟುಂಬದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿದ್ರೆ ಖಂಡಿತವಾಗಿ ನೀವು ಕಾರು ಖರೀದಿಸುವಾಗಲು ಕೂಡ ಹೆಚ್ಚಿನ ಸೀಟ್ ಅವಕಾಶವನ್ನು ಹೊಂದಿರುವಂತಹ ಕಾರನ್ನು ಖರೀದಿಸುತ್ತೀರಿ. ಆಟೋಮೊಬೈಲ್ ಕ್ಷೇತ್ರಗಳಲ್ಲಿ ಇವುಗಳನ್ನು MPV ಸೆಗ್ಮೆಂಟ್ ಕಾರುಗಳು ಎಂಬುದಾಗಿ ಕೂಡ ಕರೆಯಲಾಗುತ್ತದೆ. ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಈ ಸೆಗ್ಮೆಂಟ್ ನಲ್ಲಿ ಎರ್ಟಿಗಾ(Maruti Ertiga) ಕಾರು ಅಗ್ರಗಣ್ಯ ಕಾರ್ ಆಗಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ಮಾರುಕಟ್ಟೆಗೆ ಹೊಸ ಏಳು ಸೀಟರ್ ಕಾರು ಪಾದರ್ಪಣೆ ಮಾಡುತ್ತಿದ್ದು ಈಗ ಅದರದ್ದೇ ಚರ್ಚೆ ಎಲ್ಲಾ ಕಡೆ ನಡೆಯುತ್ತಿದೆ. Citroen New 7 Seater ಕಾರು ಅತಿ ಶೀಘ್ರದಲ್ಲೇ ಮಾರುಕಟ್ಟೆಗೆ ಪಾದರ್ಪಣೆ ಮಾಡುವಂತಹ ಸುದ್ದಿ ಕೇಳಿ ಬರುತ್ತಿದ್ದು ಬನ್ನಿ ಈ ಕಾರಿನಲ್ಲಿ ಏನೆಲ್ಲಾ ಇರಲಿದೆ ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
Citroen ಸಂಸ್ಥೆ C3 ಹಾಗೂ C5 ಎನ್ನುವಂತಹ ಎರಡು ಹ್ಯಾಚ್ ಬ್ಯಾಕ್ ಕಾರುಗಳನ್ನು ಮಾರುಕಟ್ಟೆಗೆ ತರಲಿದೆ. Citroen New 7 Seater ಕಾರ್ C3 ಡಿಸೈನ್ ಅನ್ನು ಹೊಂದಿರಲಿದೆ ಎನ್ನುವಂತಹ ಮಾಹಿತಿ ಸಿಕ್ಕಿದೆ. ಇದರ ನೇರವಾದ ಕಾಂಪಿಟೇಶನ್ ಮಾರುತಿ ಸುಜುಕಿ ಎರ್ಟಿಗಾ ಕಾರಿನ ಜೊತೆಗೆ ಇರುತ್ತದೆ. ಇದು ಯಾವಾಗ ಲಾಂಚ್ ಆಗುತ್ತದೆ ಹಾಗೂ ಇದರ ಬೆಲೆ ಎಷ್ಟಾಗಿರಲಿದೆ ಏನು ಅಂತಹ ಮಾಹಿತಿಯನ್ನು ಇದುವರೆಗೂ ಕೂಡ ಕಂಪೆನಿ ಅಧಿಕೃತವಾಗಿ ಬಿಟ್ಟುಕೊಟ್ಟಿಲ್ಲ ಆದರೆ ಬನ್ನಿ ಇದರ ಬಗ್ಗೆ ಇರುವಂತಹ ಕೆಲವೊಂದು ವಿಶೇಷತೆಗಳನ್ನು ಸಂಪೂರ್ಣವಾಗಿ ತಿಳಿಯುವಂತಹ ಪ್ರಯತ್ನವನ್ನು ಮಾಡೋಣ.
ಟೆಸ್ಟಿಂಗ್ ನಲ್ಲಿ ಇದನ್ನು ನೋಡಿರುವ ಪ್ರಕಾರ ಇದರಲ್ಲಿ 17 ಇಂಚಿನ ಬದಲು 16 ಇಂಚಿನ ಅಲಾಯ್ ವೀಲ್ ಅಳವಡಿಸಿರುವುದು ಕಂಡುಬರುತ್ತದೆ. ಸಿಟ್ರಾನ್ ಕಂಪನಿಯ ಬೇರೆ ಕಾರುಗಳಿಗೆ ಹೋಲಿಸಿದರೆ ಇದು ಗಾತ್ರದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಕಂಡುಬರುತ್ತದೆ ಎಂಬುದಾಗಿ ತಿಳಿದು ಬಂದಿದೆ. ಕಾರಿನ ಒಳಗೆ ಸಿಗುವಂತಹ ಸ್ಪೇಸ್ ಕೂಡ ಸಖತ್ ದೊಡ್ಡದಾಗಿದ್ದು 7 ಸೀಟರ್ ನಿಮಗೆ ಆರಾಮದಾಯಕವಾಗಿ ಕೂರುವಂತಹ ಅವಕಾಶವನ್ನು ಕೂಡ ನೀಡುತ್ತದೆ. ಪ್ಲಾಸ್ಟಿಕ್ ಬಾಡಿ ಕ್ಲೈಡಿಂಗ್ ಗ್ಲಾಸ್ ಏರಿಯಾ ಹಾಗೂ ಇನ್ನು ಸಾಕಷ್ಟು ವಿಶೇಷತೆಗಳು ಹಾಗೂ ಡಿಸೈನ್ಗಳು ನೀವು ಈ ಕಾರಿನ ಮೇಲೆ ಕಾಣಬಹುದಾಗಿದೆ. ಈ ಕಾರಿನ ಗ್ರೌಂಡ್ ಕ್ಲಿಯರೆನ್ಸ್ ಕೂಡ ತುಂಬಾ ಚೆನ್ನಾಗಿದೆ ಎಂದು ಹೇಳಬಹುದು. C3 ಕಾರಿನ ಹಾಗೆ ಕಾಣಿಸಿಕೊಳ್ಳುವಂತಹ ಈ ಕಾರು ಏಳು ಸೀಟರ್ ಜೊತೆಗೆ ದೊಡ್ಡ ಮಟ್ಟದ ಸ್ಪೇಸ್ ನೊಂದಿಗೆ ಮಾರುಕಟ್ಟೆಗೆ ಇಳಿಯುತ್ತಿದೆ ಎಂಬುದು ಮಾತ್ರ ಖಚಿತವಾಗಿದೆ.
Citroen New 7 Seater ಕಾರಿನ ಬೆಲೆಯ ಕುರಿತಂತೆ ಇದುವರೆಗೂ ಕೂಡ ಕಂಪೆನಿ ಯಾವುದೇ ಮಾಹಿತಿಯನ್ನು ನೀಡಿಲ್ಲ ಆದರೆ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಈ ಕಾರು 12ರಿಂದ 18 ಲಕ್ಷ ರೂಪಾಯಿಗಳ ಬೆಲೆಯಲ್ಲಿ ಮಾರುಕಟ್ಟೆಗೆ ಇಳಿಯಬಹುದು ಎನ್ನುವಂತಹ ಮಾಹಿತಿ ಇದೆ. ಇನ್ನು ಮೈಲೇಜ್ ಬಗ್ಗೆ ಮಾತನಾಡುವುದಾದರೆ 18 ಕಿಲೋಮೀಟರ್ಗಳ ಆಸು ಪಾಸಿನಲ್ಲಿ ನಾವು ಪ್ರತಿ ಲೀಟರ್ಗೆ ಮೈಲೇಜ್ ಅನ್ನು ನಿರೀಕ್ಷಿಸಬಹುದಾಗಿದೆ ಎಂಬುದಾಗಿ ಮಾಧ್ಯಮ ಮೂಲಗಳು ತಿಳಿಸಿವೆ. ಇವು ಕೇವಲ ಊಹೆಗಳಾಗಿದ್ದು ನಿಜವಾದ ಅಂಕಿ ಅಂಶಗಳು ಮುಂದಿನ ದಿನಗಳಲ್ಲಿ ಲಾಂಚಿಂಗ್ ದಿನಾಂಕ ಹತ್ತಿರ ಬರುತ್ತಿದ್ದಂತೆ ಕಂಪನಿ ಅಧಿಕೃತವಾಗಿ ಪ್ರಕಟಣೆ ಮಾಡಲಿದೆ.