Electric Scooter: 120Km ರೇಂಜ್ ನೀಡುವ ಈ ಹೊಸ ಸ್ಕೂಟರ್ ಗೆ ಹೆಚ್ಚಾದ ಡಿಮ್ಯಾಂಡ್, ಅತ್ಯಂತ ಕಡಿಮೆ ಬೆಲೆ
ಇಂದು ಎಲೆಕ್ಟ್ರಿಕಲ್ ಸ್ಕೂಟರ್ ಬೇಡಿಕೆ ಕೂಡ ಜಾಸ್ತಿ ಆಗ್ತಾ ಇದೆ. ಹಾಗಾಗಿ ಕೆಲವು ಸ್ಟಾರ್ಟ್ ಅಪ್ ಕಂಪನಿಗಳು ಕೂಡ ಅತ್ಯುತ್ತಮವಾಗಿರುವಂತಹ ಎಲೆಕ್ಟ್ರಿಕಲ್ ಸ್ಕೂಟರ್ (Electric Scooter) ಬಿಡುಗಡೆ ಮಾಡುತ್ತವೆ ಬೆಂಗಳೂರು ಮೂಲದ ರಿವರ್ ಇಂಡಿಯಾ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿ ತನ್ನ ಉತ್ಪಾದನೆಯಲ್ಲಿ ಹೊಸ ಎಲೆಕ್ಟ್ರಿಕಲ್ ಸ್ಕೂಟರ್ ಸೇರಿಸಿಕೊಂಡಿದೆ ಬೆಂಗಳೂರು ಹೊಸಕೋಟೆ ಘಟಕದಲ್ಲಿ ಈ ಸ್ಕೂಟರ್ ತಯಾರಾಗಿದ್ದು, ಹಲವು ತಮ್ಮ ಫೀಚರ್ಗಳನ್ನು ಹೊಂದಿದೆ.
ಹೊಸ ಎಲೆಕ್ಟ್ರಿಕಲ್ ಸ್ಕೂಟರ್ ಬಿಡುಗಡೆ ಮಾಡಿದ ರಿವರ್ ಇಂಡಿಯಾ ಕಂಪನಿ:
ಬೆಂಗಳೂರು ಮೂಲದ ರಿವರ್ (River) ಇಂಡಿಯಾ ಕಂಪನಿ, ವಿನೂತನ ಎಲೆಕ್ಟ್ರಿಕಲ್ ಸ್ಕೂಟರ್ (Electric Scooter) ಬಿಡುಗಡೆ ಮಾಡಿದ್ದು ಪ್ರತಿ ವರ್ಷ ಒಂದು ಲಕ್ಷಕ್ಕೂ ಹೆಚ್ಚಿನ ಯೂನಿಟ್ ತಯಾರು ಮಾಡಿ ಮಾರಾಟ ಮಾಡುವ ನಿರೀಕ್ಷೆ ಇಟ್ಟುಕೊಂಡಿದೆ. ಕಂಪನಿ ಹೇಳಿಕೊಂಡಿರುವ ಪ್ರಕಾರ ಇದೇ ಸೆಪ್ಟೆಂಬರ್ ನಿಂದ ಈವಿ ಸ್ಕೂಟರ್ ಬಿಡುಗಡೆ ಆಗಲಿದೆ ಅತ್ಯುತ್ತಮವಾದ ಹೆಚ್ಚು ಶಕ್ತಿಶಾಲಿಯಾಗಿರುವ ಎಲೆಕ್ಟ್ರಿಕಲ್ ಸ್ಕೂಟರ್ ತಯಾರಿಸಿ ಜನರಿಗೆ ನೀಡುವ ಭರವಸೆ ಹೊಂದಿದೆ ರಿವರ್ ಇಂಡಿಯಾ. ರಿವರ್ (River) ಇಂಡಿಯಾ ಬಿಡುಗಡೆ ಮಾಡಲಿರುವ ಹೊಸ ಎಲೆಕ್ಟ್ರಿಕಲ್ ಸ್ಕೂಟರ್ ವೈಶಿಷ್ಟ್ಯತೆಗಳನ್ನು ನೋಡೋಣ.
ಎಸ್ ಯು ವಿ ಸ್ಕೂಟರ್:
ನೀವು ಇದುವರೆಗೆ ಕಾರಿನಲ್ಲಿ ಎಸ್ಯುವಿ ನೋಡಿರುತ್ತೀರಿ ಇದು ಸ್ಕೂಟರ್ಗಳಲ್ಲಿ ಮೊದಲ ಎಸ್ ಯು ವಿ (SUV) ಆಗಿದೆ ಅಂದರೆ ಎಸ್ ಯು ವಿ ಆಫ್ ಸ್ಕೂಟರ್ ಎಂದು ಇದನ್ನ ಕಂಪನಿ ಕರೆದುಕೊಂಡಿದೆ. ಈ ರೀತಿ ಕರೆಯಲು ಮುಖ್ಯವಾದ ಕಾರಣ ಇದು ಸಾಮಾನ್ಯ ಎಲೆಕ್ಟ್ರಿಕ್ ಸ್ಕೂಟರ್ ಗಿಂತಲೂ ಗಾತ್ರದಲ್ಲಿ ದೊಡ್ಡದಾಗಿದೆ ಅದೇ ರೀತಿ ವಿನ್ಯಾಸ ಬೈಕ್ ಮಾದರಿಯಲ್ಲಿ ಇದೆ. ಇದನ್ನ ಎಲೆಕ್ಟ್ರಿಕಲ್ ಸ್ಕೂಟರ್ ಬೈಕ್ ಎಂದು ಕೂಡ ಕರೆಯಬಹುದು. ಡುಯಲ್ ಪ್ಯಾಡ್ ಎಲ್ಇಡಿ ಹೆಡ್ ಲೈಟ್ ಗಳು, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಸಸ್ಪೆನ್ಷನ್ ಕೊಡಲಾಗಿದೆ. ಇನ್ನು ಉದ್ದ ಮತ್ತು ಅಗಲವಾಗಿರುವ ಆಸನದಿಂದ ಆರಾಮಾಗಿ ಕುಳಿತುಕೊಂಡು ಈ ಸ್ಕೂಟರ್ ನಲ್ಲಿ ರೈಡ್ ಹೋಗಬಹುದು.
14 ಇಂಚಿನ ದೊಡ್ಡ ವೀಲ್ ಗಳು:
ಇನ್ನು ಈ ಸ್ಕೂಟನ್ನು ಇನ್ನೊಂದು ಆಕರ್ಷಣೆ ಅಂದರೆ 14 ಇಂಚಿನ ದೊಡ್ಡ ಅಲಾಯಿ ವೀಲ್ ಗಳನ್ನು ನೀಡಲಾಗಿದೆ. ಅದೇ ರೀತಿ 43 ಲೀಟರ್ ನ ಶೇಖರಣಾ ಸ್ಥಳವನ್ನು ಕೂಡ ಕೊಡಲಾಗಿದ್ದು ಯು ಎಸ್ ಬಿ ಚಾರ್ಜಿಂಗ್ ಸಾಕೆಟ್ ಹಾಗೂ ಪೂರ್ಣ ಡಿಜಿಟಲ್ ಡಿಸ್ಪ್ಲೇ ಆಕರ್ಷಣೀಯವಾಗಿದೆ.
ಅತ್ಯುತ್ತಮ ಬ್ಯಾಟರಿ:
ಈ ಸ್ಕೂಟರ್ ನಲ್ಲಿ ನಾಲ್ಕು ಕೆ ಡಬ್ಲ್ಯೂ ಸಾಮರ್ಥ್ಯದ ಲಿಥಿಯಂ ಅಯಾನ್ ಬ್ಯಾಟರಿ ಬಳಸಿಕೊಂಡು ತಯಾರಿಸಲಾಗಿದೆ. ಸ್ಕೂಟರನ್ನು ಫ್ಲೋರ್ ಬೋರ್ಡ್ ನಲ್ಲಿ ಬ್ಯಾಟರಿ ಅಳವಡಿಸಲಾಗಿದ್ದು ಇದನ್ನು ತೆಗೆಯುವ ಹಾಗೆ ಇಲ್ಲ. ಸುಮಾರು 80% ನಷ್ಟು ಬ್ಯಾಟರಿ ಚಾರ್ಜ್ ಮಾಡಲು 5 ಗಂಟೆಗಳ ಅವಧಿ ಬೇಕು. ಈ ಎಲೆಕ್ಟ್ರಿಕ್ ಮೋಟಾರ್ 26 ಎನ್ ಎಂ ಡಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು 350 ಸಿಸಿ ಬೈಕ್ನಂತೆ ಕಾರ್ಯನಿರ್ವಹಿಸುತ್ತದೆ.
ಮೈಲೇಜ್ ಮತ್ತು ಬೆಲೆ:
ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪನಿ ಸದ್ಯದಲ್ಲಿಯೇ ಬಿಡುಗಡೆ ಮಾಡಲಿರುವ ಎಸ್ಯುವಿ ಎಲೆಕ್ಟ್ರಿಕ್ ಸ್ಕೂಟರ್ (SUV Electric Scooter) ಸಂಪೂರ್ಣ ಚಾರ್ಜ್ ಗೆ 120 ಕಿಲೋಮೀಟರ್ ವ್ಯಾಪ್ತಿ ನೀಡಬಹುದು. ಇದರ ಆರಂಭಿಕ ಎಕ್ಸ್ ಶೋರೂಮ್ ಬೆಲೆ 1.25 ಲಕ್ಷ ರೂಪಾಯಿಗಳು. ಸೆಪ್ಟೆಂಬರ್ ತಿಂಗಳಿನಲ್ಲಿ ಹೊಸ ಸ್ಕೂಟರ್ ಬಿಡುಗಡೆ ಮಾಡುವುದಾಗಿ ಕಂಪನಿ ತಿಳಿಸಿದೆ.