Karnataka Times
Trending Stories, Viral News, Gossips & Everything in Kannada

Electric Car: ಕೇವಲ 40 ನಿಮಿಷದಲ್ಲಿ ಆಗುತ್ತೆ ಫುಲ್ ಚಾರ್ಜ್, ಕೊಡುತ್ತೆ 233km ಗಳ ಭರ್ಜರಿ ರೇಂಜ್! ಕಡಿಮೆ ಬೆಲೆಯ ಬೆಂಕಿ ಕಾರ್

ಸೌತ್ ಕೊರಿಯಾದ ಜನಪ್ರಿಯ ಆಟೋ ಮೊಬೈಲ್ ಕಂಪನಿ ಆಗಿರುವಂತಹ KIA ಈಗ ಎಲೆಕ್ಟ್ರಿಕ್ ಕಾರು (Electric Car) ಗಳ ಮಾರುಕಟ್ಟೆಯಲ್ಲಿ ಕೂಡ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಈಗಾಗಲೇ ಗ್ಲೋಬಲ್ ಮಾರುಕಟ್ಟೆಯಲ್ಲಿ Kia Ray EV ಕಾರಣ ಲಾಂಚ್ ಮಾಡಿದ್ದು ತನ್ನ ವಿಭಿನ್ನ ಸೊಶಾಲಿಟಿಯ ಕಾರಣದಿಂದಾಗಿ ಈ ಕಾರ್ ಸಖತ್ ಸುದ್ದಿ ಮಾಡುತ್ತಿದ್ದು ಬನ್ನಿ ಇದರ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುವಂತಹ ಕೆಲಸವನ್ನು ಮಾಡೋಣ.

Advertisement

Kia Ray EV ನೋಡೋದಕ್ಕೆ ಇದರ ಪೆಟ್ರೋಲ್ ವರ್ಷನ್ ಕಾರಿನ ಹಾಗೆ ಕಾಣುತ್ತದೆ ಆದರೆ ಕೆಲವೊಂದು ವಿಶೇಷವಾದ ಬದಲಾವಣೆಗಳನ್ನು ಕೂಡ ಮಾಡಲಾಗಿದ್ದು ಇದನ್ನು ಗ್ಲೋಬಲ್ ಮಾರುಕಟ್ಟೆಯಲ್ಲಿ ನೋಡಿ ಅದನ್ನು ಇಂಡಿಯನ್ ರೂಪಾಯಿಯಲ್ಲಿ ಕನ್ವರ್ಟ್ ಮಾಡಿದರೆ ಸದ್ಯಕ್ಕೆ ಇದರ ಬೆಲೆ 17 ಲಕ್ಷ ರೂಪಾಯಿಗಳ ಆಸು ಪಾಸಿನಲ್ಲಿ ಕಂಡುಬರುತ್ತದೆ.

 

Advertisement

 

Advertisement

ಖಂಡಿತವಾಗಿ ಈ ಎಲೆಕ್ಟ್ರಿಕ್ ಕಾರ್ (Electric Car) ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುವಾಗ ಬೆಳೆಯನ್ನು ಕಡಿಮೆ ಮಾಡಿ ಕೆಲವೊಂದು ಬದಲಾವಣೆಗಳನ್ನು ಕೂಡ ಮಾಡೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಭರ್ಜರಿ ಆರು ಬಣ್ಣಗಳಲ್ಲಿ ಇದನ್ನು ಮಾರುಕಟ್ಟೆಗೆ ಲಾಂಚ್ ಮಾಡಿದ್ದು 10.25 ಇಂಚಿನ ಕ್ಲಸ್ಟರ್ ಅನ್ನು ಕೂಡ ನೀವು ಕಾಣಬಹುದಾಗಿದೆ. ಪ್ಲೇಟ್ ಫೋಲ್ಡಿಂಗ್ ಸೀಟ್ಗಳನ್ನು ಕೂಡ ಈ ಕಾರಿನಲ್ಲಿ ಅಳವಡಿಸಲಾಗಿದ್ದು ಇದರಿಂದಾಗಿ ಕಾರಿನಲ್ಲಿ ದೊಡ್ಡಮಟ್ಟದ ಸ್ಪೇಸ್ ಅನ್ನು ನೀವು ಕಾಣಬಹುದಾಗಿದೆ. 32.3kwh LFP ಬ್ಯಾಟರಿಯನ್ನು ನೀವು ಕಾಣಬಹುದಾಗಿತ್ತು 64.3Kw ಸಾಮರ್ಥ್ಯವನ್ನು ಹೊಂದಿರುವಂತಹ ಮೋಟಾರ್ ಅನ್ನು ಕೂಡ ಅಳವಡಿಸಲಾಗಿದೆ. 86hp ಪವರ್ ಹಾಗೂ 147Nm ಟಾರ್ಕ್ ಅನ್ನು ಕೂಡ ನೀವು ಈ ಕಾರಿನಲ್ಲಿ ಗಮನಿಸಬಹುದಾಗಿದೆ.

Advertisement

ಸಿಂಗಲ್ ಚಾರ್ಜ್ ನಲ್ಲಿ ಇದು 205 km ವರೆಗೆ ರೇಂಜ್ ನೀಡುತ್ತದೆ ಆದರೆ ಸಿಟಿ ಕಂಡಿಶನ್ ನಲ್ಲಿ ಇದರ ರೇಂಜ್ 233km ಗಳವರೆಗೂ ಕೂಡ ಹೆಚ್ಚುತ್ತದೆ. 150 ಕಿಲೋ ವ್ಯಾಟ್ ಸಾಮರ್ಥ್ಯವನ್ನು ಹೊಂದಿರುವ ಚಾರ್ಜ್ ಮೂಲಕ ಚಾರ್ಜಿಂಗ್ ಮಾಡಿದ್ರೆ 40 ನಿಮಿಷಗಳಲ್ಲಿ 80% ಚಾರ್ಜ್ ಫುಲ್ ಆಗುತ್ತದೆ ಆದರೆ ಸಾಮಾನ್ಯ ಚಾರ್ಜರ್ ಮೂಲಕ ನೀವು ಚಾರ್ಜ್ ಮಾಡಿದರೆ 6 ಗಂಟೆಗಳ ಕಾಲ ಚಾರ್ಜ್ ಮಾಡಬೇಕಾಗುತ್ತದೆ. ಕೊರಿಯನ್ ಮಾರುಕಟ್ಟೆಯಲ್ಲಿ ಈಗಾಗಲೇ ಇದನ್ನು ಲಾಂಚ್ ಮಾಡಿದ್ದು ಸೆಪ್ಟೆಂಬರ್ 12ರಿಂದ ಬುಕಿಂಗ್ ಕೂಡ ಪ್ರಾರಂಭವಾಗಲಿದೆ.

Kia Ray EV ಎಲೆಕ್ಟ್ರಿಕ್ ಕಾರಿ (Electric Car) ನ ಬ್ಯಾಟರಿ ವಾರಂಟಿ ಬಗ್ಗೆ ಮಾತನಾಡುವುದಾದರೆ 10 ಅಥವಾ 2 ಲಕ್ಷ ಕಿಲೋಮೀಟರ್ ವರೆಗೂ ಬ್ಯಾಟರಿ ವಾರಂಟಿಯನ್ನು ಕಂಪನಿ ನೀಡಿದೆ ಎಂಬುದಾಗಿ ಸ್ಪಷ್ಟಪಡಿಸಿದೆ. ಕೊರಿಯನ್ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ ಬೇರೆ ಬೇರೆ ದೇಶಗಳಲ್ಲಿ ಬಿಡುಗಡೆ ಮಾಡಿ 2025ರ ಸಂದರ್ಭದಲ್ಲಿ ಭಾರತದಲ್ಲಿ Kia Ray EV ಲಾಂಚ್ ಆಗಬಹುದು ಎನ್ನುವಂತಹ ಸುದ್ದಿಗಳು ಕೇಳಿ ಬರುತ್ತಿವೆ. ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವಾಗ ಖಂಡಿತವಾಗಿ ಇದರ ಬೆಲೆ ಸಾಕಷ್ಟು ಕಡಿಮೆ ಆಗಲಿದೆ.

Leave A Reply

Your email address will not be published.