ಸಾಕಷ್ಟು ಬೇರೆ ಬೇರೆ ರೀತಿಯ ಎಸ್ ಯು ವಿ ಗಳು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ಪ್ರತಿಯೊಂದು ಮೋಟಾರ್ ಕಂಪನಿ ತನ್ನದೇ ಆದ ವಿಶೇಷತೆಗಳನ್ನು ಹೊಂದಿರುವ ಎಸ್ ಯು ವಿ ಗಳನ್ನು ಬಿಡುಗಡೆ ಮಾಡುತ್ತದೆ ಈಗ ಕೈಗೆಡುಕುವ ದರದಲ್ಲಿ ಸುರಕ್ಷತೆಯ ಬಗ್ಗೆ ಹೆಚ್ಚು ಗಮನ ನೀಡಿರುವ ಎಸ್ಯುವಿ ಕಾರುಗಳ ಬಗ್ಗೆ ನಾವು ಮಾಹಿತಿ ನೀಡುತ್ತಿದ್ದೇವೆ ಇವು ಬಜೆಟ್ ಫ್ರೆಂಡ್ಲಿ ಕಾರುಗಳಾಗಿದ್ದು ಹೆಚ್ಚು ಉತ್ತಮ ಕಾರ್ಯಕ್ಷಮತೆಯನ್ನು ಕೂಡ ಹೊಂದಿರುವ ಎಸ್ಯುವಿಗಳಾಗಿವೆ. ಹಾಗಾಗಿ ನೀವು 10 ರಿಂದ 12 ಲಕ್ಷದ ಒಳಗೆ ಖರೀದಿಸಬಹುದಾದ ಅತ್ಯುತ್ತಮ ಕಾರುಗಳ ಪಟ್ಟಿ ಇಲ್ಲಿದೆ.
Maruti Suzuki Fronx:
ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯನ್ನು ಹೊಂದಿರುವ ಕಾರುಗಳಲ್ಲಿ ಮಾರುತಿ ಸುಜುಕಿ ಫ್ರಾಂಕ್ಸ್ ಕೂಡ ಒಂದು. ಇದರಲ್ಲಿ ಸುರಕ್ಷತೆಯ ದೃಷ್ಟಿಯಿಂದ ಆರು ಏರ್ ಬ್ಯಾಗ್ ಕೊಡಲಾಗಿದೆ ಇದು ಕ್ರಾಸ್ ಓವರ್ ಆವೃತ್ತಿಯಾಗಿದೆ. ಈ ಕಾರಿ (Safety Car) ನ ಆರಂಭಿಕ ಎಕ್ಸ್ ಶೋರೂಮ್ ಬೆಲೆ 7.46 ಲಕ್ಷ ರೂಪಾಯಿ ಗಳಿಂದ ಆರಂಭ. ಝೀಟಾ ಒಂದು ಲೀಟರ್ ರೂಪಾಂತರದ ಬೆಲೆ ಎಕ್ಸ್ ಶೋರೂಮ್ ಪ್ರಕಾರ 10.55 ಲಕ್ಷ ರೂಪಾಯಿಗಳಾಗುತ್ತವೆ. ಮೈಲೇಜ್ 20-29 kmpl.
Hyundai Venue:
ಹುಂಡೈ ವೆನ್ ಯು ಭಾರತೀಯ ಮಾರುಕಟ್ಟೆಯಲ್ಲಿ ಬಹಳ ಹಿಂದಿನಿಂದಲೂ ಬಳಕೆಯಲ್ಲಿದೆ ಈ ವರ್ಷ ಹುಂಡೈ ವೆನ್ನು ಫೇಸ್ ಲಿಫ್ಟ್ ಆವೃತ್ತಿಯನ್ನು ಕೂಡ ಬಿಡುಗಡೆ ಮಾಡಲಾಗಿದೆ. ಈ ಕಾರಿನಲ್ಲಿ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ನೀಡಲಾಗಿದ್ದು ಅತಿ ಕಡಿಮೆ ಬೆಲೆಗೆ ಸಿಗುವ ಕಾರಿನಲ್ಲಿ ಆರು ಏರ್ ಬ್ಯಾಗ್ ಗಳನ್ನು ನೀಡಲಾಗಿದೆ. ಬೇರೆ ಬೇರೆ ರೂಪಾಂತರಗಳನ್ನು ಕೂಡ ಹೊಂದಿರುವ ಹುಂಡೈ ವೆನ್ ಯು ಕಾರಿನ ಆರಂಭಿಕ ಬೆಲೆ 7. 71 ಲಕ್ಷ ರೂಪಾಯಿಗಳಿಂದ ಆರಂಭವಾಗಿ 13.13 ಲಕ್ಷ ರೂಪಾಯಿಗಳವರೆಗೆ ಇದೆ. ಮೈಲೇಜ್ 17-18 kmpl.
Skoda Kushaq:
ಸ್ಕೋಡ ಯುರೋಪಿನ ವಾಹನ ತಯಾರಿಕಾ ಸಂಸ್ಥೆಯಾಗಿದ್ದು ಅತ್ಯಂತ ಸುರಕ್ಷಿತವಾಗಿರುವ ಕಾರುಗಳನ್ನ ಕೊಡುವಲ್ಲಿ ಹೆಸರುವಾಸಿಯಾಗಿದೆ. ಸುರಕ್ಷತೆಗಾಗಿ ಸ್ಕೋಡಾ ಕೋಶ ಎಸ್ ಯು ವಿ ಗೆ GNCAP 5 ಸ್ಟಾರ್ ಸುರಕ್ಷಿತ ರೇಟಿಂಗ್ ಕೂಡ ಸಿಕ್ಕಿದೆ ಇದರಲ್ಲಿ ಮುಖ್ಯವಾಗಿ 6 ಏರ್ ಬ್ಯಾಗ್ ಗಳನ್ನು ಕಾಣಬಹುದು. ಏನು ಈ ಕಾರಣ ಎಕ್ಸ್ ಶೋರೂಮ್ ಬೆಲೆ ಆರಂಭಿಕ ಬೆಲೆ 11.59 ಲಕ್ಷ ರೂಪಾಯಿಗಳಿಂದ 19.19 ಲಕ್ಷ ರೂಪಾಯಿಗಳವರೆಗೆ ಇದೆ. ಮೈಲೇಜ್ 18-20 kmpl.
Kia Seltos:
ದಕ್ಷಿಣ ಕೊರಿಯಾದ ಆಟೋ ಕಂಪನಿಯಾಗಿರುವ ಕಿಯಾ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಕಾರುಗಳನ್ನೂ ಪರಿಚಯಿಸಿದೆ ಅವುಗಳಲ್ಲಿ ಕಿಯಾ ಸೆಲ್ಟೋಸ್ ಕೂಡ ಒಂದು. ಸೆಲ್ಟೋಸ್ ವಿವಿಧ ರೂಪಾಂತರಗಳಲ್ಲಿ ಲಭ್ಯವಿದ್ದು ಸುರಕ್ಷತೆಯ ದೃಷ್ಟಿಯಿಂದ ಜನರಿಗೆ ಹೆಚ್ಚು ಹತ್ತಿರವಾಗಿರುವ ಕಾರು ಇದು. ಕೈಗೆಟುಕುವ ಬೆಲೆಗೆ ಲಭ್ಯವಿರುವ ಕಿಯಾ ಸೆಲ್ಟೋಸ್ ಕಾರಿನಲ್ಲಿ ಆರು ಏರ್ ಬ್ಯಾಗ್ ಗಳನ್ನೂ ಪಡೆಯುತ್ತೀರಿ. ಈ ಕಾರಿನ ಆರಂಭಿಕ ಬೆಲೆ ಎಕ್ಸ್ ಶೋ ರೂಂ ಪ್ರಕಾರ 10.89 ಲಕ್ಷ ರೂಪಾಯಿಗಳು. ಮೈಲೇಜ್ 17-21 kmpl.