Budget Car: ಮಾರುಕಟ್ಟೆಯಲ್ಲಿ ಅತಿ ಶೀಘ್ರದಲ್ಲಿ ಬರಲಿದೆ 300Km ಮೈಲೇಜ್ ಕೊಡೋ ಈ ಬೆಂಕಿ ಕಾರು! ಅತ್ಯಂತ ಕಡಿಮೆ ಬೆಲೆ

Advertisement
ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇನ್ನೇನು ಕೆಲವೇ ದಿನಗಳಲ್ಲಿ ಸತತವಾಗಿ ಹಬ್ಬದ ದಿನಗಳು ಭಾರತದಲ್ಲಿ ಕಂಡು ಬರಲಿವೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ಸಾಕಷ್ಟು ಕಂಪನಿಗಳು ತಮ್ಮ ಕಾರುಗಳನ್ನು ಕೂಡ ಲಾಂಚ್ ಮಾಡುತ್ತವೆ. ಈಗ ಕೇಳಿ ಬಂದಿರುವ ಸುದ್ದಿಯ ಪ್ರಕಾರ ಮುಂದಿನ ತಿಂಗಳ ಒಳಗೆ ಭಾರತದ ಮಾರುಕಟ್ಟೆಯಲ್ಲಿ ಸಾಕಷ್ಟು ಕಾರುಗಳು ಸತತವಾಗಿ ಬಿಡುಗಡೆ ಮಾಡುವಂತಹ ಕಾರ್ಯಕ್ರಮಗಳು ಪ್ರಾರಂಭವಾಗಿವೆ. ಹಾಗಿದ್ರೆ ಬನ್ನಿ ನೀವು ಕೂಡ ಒಂದು ವೇಳೆ ಈ ಕಾರುಗಳನ್ನು ಖರೀದಿಸುವ ಯೋಜನೆ ಹಾಕಿಕೊಂಡಿದ್ದರೆ ಇದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಇವತ್ತಿನ ಆರ್ಟಿಕಲ್ ನಲ್ಲಿ ಪಡೆದುಕೊಳ್ಳೋಣ.
Honda Elevate:
ತನ್ನ ಸೆಗ್ಮೆಂಟ್ ನಲ್ಲಿ ಭಾರತದ ಮಾರುಕಟ್ಟೆಯಲ್ಲಿ ತನ್ನ ಜಲ್ವ ತೋರಿಸಲು ಸಿದ್ಧವಾಗಿ ನಿಂತಿದ್ದು 1.5 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಇಂಜಿನ್ ಅನ್ನು ಇದು ಬಂದಿದೆ ಆರು ಸ್ಪೀಡ್ ಎ ಎಂ ಟಿ ಹಾಗೂ ಸಿವಿಟಿ ಟ್ರಾನ್ಸ್ಮಿಷನ್ ಅನ್ನು ನೀವು ಇದರಲ್ಲಿ ಕಾಣಬಹುದಾಗಿದೆ. ಸೆಮಿ ಡಿಜಿಟಲ್ ಕನ್ಸೋಲ್ ಅನ್ನು ನೀವು ಕಾಣಬಹುದಾಗಿದೆ. ADAS ಟೆಕ್ನಲಜಿಯನ್ನು ಕೂಡ ನೀವು ಕಾಣಬಹುದಾಗಿದೆ. 10 ಇಂಚಿನ ಇನ್ಫೋಟೈನ್ಮೆಂಟ್ ಟಚ್ ಸ್ಕ್ರೀನ್ ಸಿಸ್ಟಮ್ ಅನ್ನು ಕೂಡ ನೀವು ಇದರಲ್ಲಿ ಕಾಣಬಹುದಾಗಿದೆ. ಇದರ ಬೆಲೆಯನ್ನು ಗಮನಿಸುವುದಾದರೆ 11 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಇದು ಕಾಣಿಸಿಕೊಳ್ಳಲಿದೆ ಎಂಬುದಾಗಿ ಮಾಹಿತಿ ಇದೆ.
Citroen C3:
SUV ಸೆಗ್ಮೆಂಟ್ ನಲ್ಲಿ ಕಾಣಿಸಿಕೊಳ್ಳುವಂತಹ ಈ ಕಾರು ಈಗಾಗಲೇ ತನ್ನ ಡಿಸೈನ್ ಹಾಗೂ ಇನ್ನಿತರ ವಿಶೇಷವಾದ ಫೀಚರ್ ಗಳ ಮೂಲಕ ಎಲ್ಲರ ಮನಸ್ಸು ಗೆದ್ದಿದೆ. ಐದು ಹಾಗೂ ಏಳು ಸೀಟರ್ಗಳ ಆಯ್ಕೆಯಲ್ಲಿ ಕೂಡ ನಿಮಗೆ ಇದು ಕಾಣಿಸುತ್ತದೆ. 1.2 ಲೀಟರ್ ಮೂರು ಸಿಲಿಂಡರ್ ಟರ್ಬೊ ಪೆಟ್ರೋಲ್ ಇಂಜಿನ್ ಇದರಲ್ಲಿ ಕಾಣಿಸಿಕೊಳ್ಳುತ್ತದೆ. 110bhp ಪವರ್ ಹಾಗೂ 190nm ಟಾರ್ಕ್ ಅನ್ನು ಕೂಡ ಇದು ಜನರೇಟ್ ಮಾಡುತ್ತದೆ. ಆರು ಸ್ಪೀಡ್ ಗೇರ್ ಬಾಕ್ಸ್ ಗಳನ್ನು ಕೂಡ ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ. 18.5 ಕಿಲೋಮೀಟರ್ ಮೈಲೇಜ್ ಅನ್ನು ಕೂಡ ನೀವು ಇದರಲ್ಲಿ ಕಾಣಬಹುದಾಗಿದೆ. ಇದು ಮಾರುಕಟ್ಟೆಯಲ್ಲಿ 10 ರಿಂದ 15 ಲಕ್ಷ ರೂಪಾಯಿಗಳ ಬೆಲೆಯಲ್ಲಿ ಕಾಲಿಡಲಿದೆ ಎಂಬುದಾಗಿ ತಿಳಿದು ಬಂದಿದೆ.
Tata Punch EV:
ಎಲೆಕ್ಟ್ರಿಕ್ ಕಾರುಗಳಲ್ಲಿ ಟಾಪ್ ಕಾರುಗಳ ಪೈಕಿಯಲ್ಲಿ ಕಾಣಿಸಿಕೊಳ್ಳುವಂತಹ Tata Punch EV ಹೊಸ ರೂಪದಲ್ಲಿ ಕಾಣಿಸಿಕೊಳ್ಳಲಿದೆ. ಹ್ಯಾಚ್ ಬ್ಯಾಕ್ ಸೆಗ್ಮೆಂಟ್ ನಲ್ಲಿ ಖಂಡಿತವಾಗಿ Tata Punch EV ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಮೊದಲ ಆಯ್ಕೆಯನ್ನಾಗಿ ಮಾಡಿಕೊಳ್ಳಲಿದ್ದಾರೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. 24kwh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವಂತಹ ಈ ಕಾರು 300 ಕಿಲೋಮೀಟರ್ಗಳ ರೇಂಜ್ ಅನ್ನು ನೀಡುತ್ತದೆ. ಮಾರುಕಟ್ಟೆಯಲ್ಲಿ ಈ ಕಾರಿನ ಬೇಡಿಕೆ ಕೂಡ ಹೆಚ್ಚಾಗಿದ್ದು ಇದರ ಬೆಲೆ 12 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಕಾಣಿಸುತ್ತದೆ ಎಂಬುದಾಗಿ ತಿಳಿದು ಬಂದಿದೆ. ಈ ಹಬ್ಬಕ್ಕೆ ಲಾಂಚ್ ಅಗಲಿರುವಂತಹ ಕಾರುಗಳು ಈ ಮೇಲಿನದ್ದಾಗಿವೆ.