Kia Carens: ಎರ್ಟಿಗಾ ಗಿಂತ ಈ 7 ಸೀಟರ್ ಕಾರನ್ನೇ ಹೆಚ್ಚು ಖರೀದಿಸುತ್ತಿದ್ದಾರೆ ಜನ, ನೋಡಿ ವಿಶೇಷತೆ

Advertisement
ಮಾರುತಿ ಸುಜುಕಿ ಎರ್ಟಿಗಾ(Maruti Suzuki Ertiga) ಸದ್ಯ ದೇಶದಲ್ಲಿ ಅತಿ ಹೆಚ್ಚು ಬೇಡಿಕೆ ಇರುವ MPV. ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಸಿಎನ್‌ಜಿ ಎಂಜಿನ್ ಹೊಂದಿರುವ ಕಾರು ಇದಾಗಿದ್ದು, ಅತ್ಯುತ್ತಮ ಮೈಲೇಜ್ ಗೂ ಹೆಸರಾಗಿದೆ. ಮಾರುತಿ ಸುಜಿಕಿ ಇಲ್ಲಿಯವರೆಗೆ ಇತರ ಕಂಪನಿಗಳಿಗೆ ಹೋಲಿಸಿದರೆ ಅತೀ ಹೆಚ್ಚು CNG ಕಾರುಗಳನ್ನು ಮಾರಾಟ ಮಾಡಿದೆ. ಆದರೆ ಇದೀಗ ಎರ್ಟಿಗಾಗೆ ಕಿಯಾ ಕ್ಯಾರೆನ್ಸ್ ಎಂಪಿವಿ ತಿರ್ವ ಪೈಪೋಟಿ ನೀಡುತ್ತಿದೆ. ಫೆಬ್ರವರಿ 2023 ರಲ್ಲಿ ಕಿಯಾ ಕ್ಯಾರೆನ್ಸ್ ಮಾರುತಿ ಎರ್ಟಿಗಾಕ್ಕಿಂತ ಸ್ವಲ್ಪ ಕಡಿಮೆ ಮಾರಾಟವಾಗಿದ್ದರೂ ಇದರ ಬೇಡಿಕೆಯೂ ಹೆಚ್ಚುತ್ತಿದೆ.
ಫೆಬ್ರವರಿ 2023ರಲ್ಲಿ ಮಾರುತಿ ಎರ್ಟಿಗಾ 6,472 ಯುನಿಟ್‌ಗಳನ್ನು ಕಂಪನಿ ಮಾರಾಟ ಮಾಡಿದೆ. ಅದೇ ರೀತಿ 6,248 ಯೂನಿಟ್ ಕ್ಯಾರೆನ್ಸ್ ಕಾರುಗಳು ಮಾರಾಟವಾಗಿವೆ. ಪರಸ್ಪರ ಪೈಪೋಟಿಗಳ ನಡುವೆ ಕೇವಲ 224 ಯುನಿಟ್‌ಗಳ ವ್ಯತ್ಯಾಸವಿದೆ ಅಷ್ಟೇ. ಕ್ಯಾರೆನ್ಸ್ ಬಿಡುಗಡೆಯಾದಾಗಿನಿಂದ ಸ್ಥಿರವಾಗಿ ಮಾರಾಟವಾಗುತ್ತಿದೆ. ಈ ಕಾರು ತುಸು ದುಬಾರಿಯಾಗಿದ್ದರೂ, ಎರ್ಟಿಗಾ ನಂತರ ಎರಡನೇ ಅತ್ಯುತ್ತಮ ಮಾರಾಟವಾದ MPV ಎನಿಸಿದೆ. ಇನ್ನು ಈ ಕಾರ್ ಗಳ ಬೆಲೆ ನೋಡುವುದಾದರೆ ಎರ್ಟಿಗಾ ಆರಂಭಿಕ ಬೆಲೆ 8.35 ಲಕ್ಷ ರೂಪಾಯಿಗಳಾಗಿದ್ದರೆ ಕ್ಯಾರೆನ್ಸ್‌ನ ಬೆಲೆ 10.20 ಲಕ್ಷ ರೂಪಾಯಿಗಳು.
ಮೂರು ಎಂಜಿನ್ ಆಯ್ಕೆ:
ಕ್ಯಾರೆನ್ಸ್ ಕಾರಿನಲ್ಲಿ 1.5L ಪೆಟ್ರೋಲ್ 115bhp ಪವರ್ ಎಂಜಿನ್, 1.4L ಟರ್ಬೊ ಪೆಟ್ರೋಲ್ ನ 140bhp ಪವರ್ ಎಂಜಿನ್ ಹಾಗೂ 1.5L ಡೀಸೆಲ್ ನ115bhp ಪವರ್ ಎಂಜಿನ್ ಈ ಮೂರು ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್, 7-ಸ್ಪೀಡ್ ಡಿಸಿಟಿ ಸ್ವಯಂಚಾಲಿತ ಮತ್ತು 6-ಸ್ಪೀಡ್ ಟಾರ್ಕ್ ಪರಿವರ್ತಕ ಸ್ವಯಂಚಾಲಿತ ಗೇರ್‌ಬಾಕ್ಸ್ ಈ ಮೂರು ಆಯ್ಕೆಗಳನ್ನು ಕೂಡ ಹೊಂದಿದೆ. ಇನ್ನು ಕ್ಯಾರೆನ್ಸ್ ಪೆಟ್ರೋಲ್ ಎಂಜಿನ್ 16.5 kmpl ಮೈಲೇಜ್ ಹೊಂದಿದ್ದರೆ, ಡೆಸೆಲ್ ವೇರಿಯಂಟ್ ನಲ್ಲಿ 21.5 kmpl ಮೈಲೇಜ್ ಸಿಗುತ್ತದೆ.
ಇದುವೇ ಈ ಕಾರಿನಲ್ಲಿರುವ ದೊಡ್ಡ ನ್ಯೂನತೆ:
ಎರ್ಟಿಗಾದಲ್ಲಿ CNG ಕಿಟ್ ಲಭ್ಯವಿದ್ದು ಹೆಚ್ಚು ಮಾರಾಟವಾಗುವುದಕ್ಕೂ ಇದೇ ಕಾರಣವಾಗಿದೆ. ಎರ್ಟಿಗಾದಲ್ಲಿ 1.5-ಲೀಟರ್ ಡ್ಯುಯಲ್ಜೆಟ್ ಪೆಟ್ರೋಲ್ ಎಂಜಿನ್ CNG ಕಿಟ್ ಆಯ್ಕೆ ಇದೆ. 26 kmpl ವರೆಗೆ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಆದರೆ ಮೈಲೇಜ್ ವಿಚಾರಕ್ಕೆ ಬಂದರೆ ಎರ್ಟಿಗಾಗಿಂತ ಕ್ಯಾರೆನ್ಸ್ ಹೆಚ್ಚು ಮೈಲೇಜ್ ನೀಡುತ್ತದೆ. CNG ಬದಲಿಗೆ ಪೆಟ್ರೋಲ್ ಅಥವಾ ಡೀಸೆಲ್ MPV ಖರೀದಿ ಬೇಕಿದ್ದರೆ, ಕಿಯಾ ಕ್ಯಾರೆನ್ಸ್ ಬೆಸ್ಟ್ ಆಯ್ಕೆ.