Karnataka Times
Trending Stories, Viral News, Gossips & Everything in Kannada

Car For Teens: ಇಂದಿನ ಯುವ ಜನತೆಯ ಮೊದಲ ಆಯ್ಕೆಯೇ ಈ ಕಾರು! ಇಲ್ಲಿದೆ ಬೆಲೆ

Advertisement

ದೇಶದಲ್ಲಿ ಬಿಡುಗಡೆಯಾಗಿದೆ ಹುಂಡೈನ (Hyundai) ಹೊಸ ತಲೆಮಾರಿನ ವೆರ್ನಾ. ವೆರ್ನಾ (Verna) ಕಾರು ನಾಲ್ಕು ಮಾದರಿಯ ಆಯ್ಕೆಗಳನ್ನು ಹೊಂದಿದೆ ಅವುಗಳೆಂದರೆ, EX, S, SX ಹಾಗೂ SX (O). ಇದು 6ನೇ ತಲೆಮಾರಿನ ವೆರ್ನಾ ಆಗಿತ್ತು. ಇದರ ಎಕ್ಸ್ ಶೋರೂಮ್ ಬೆಲೆ (Ex-showroom Price) 10.90 ಲಕ್ಷ ರೂಪಾಯಿಗಳಿಂದ 17.48 ರೂಪಾಯಿಗಳ ವರೆಗೆ ಆಗುತ್ತದೆ.

Hyundai Verna 2023:

ಹುಂಡೈ ವೆರ್ನಾ (Hyundai Verna) 2023ರ ಮಾಡೆಲ್ ನ ಇನ್ನಷ್ಟು ವೈಶಿಷ್ಟ್ಯತೆ ನೋಡುವುದಾದರೆ, ಇದು 7 ಮೋನೋಟೂನ್ ಮತ್ತು ಎರಡು ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಹಲವು ಬೇರೆ ಬೇರೆ ಬಣ್ಣಗಳಲ್ಲಿ ವೆರ್ನಾ ಕಾರು ಲಭ್ಯವಿದೆ. ಆದರೆ ಹೆಚ್ಚು ಜನಪ್ರಿಯವಾಗಿರುವುದು ಕಪ್ಪು ಬಣ್ಣದ ವರ್ಣ. ಇತರ ಬಣ್ಣಗಳೆಂದರೆ, ಟೈಟಾನ್ ಗ್ರೇ, ಫಿಯರಿ ರೆಡ್, ಅಬಿಸ್ ಬ್ಲಾಕ್, ಅಟ್ಲಾಸ್ ವೈಟ್ ಜೊತೆಗೆ ಬ್ಲಾಕ್ ರೂಫ್, ಫಿಯರಿ ರೆಡ್ ಜೊತೆಗೆ ಬ್ಲಾಕ್ ರೂಫ್, ಟಲೂರಿಯನ್ ಬ್ರೌನ್, ಟೈಫೂನ್ ಸಿಲ್ವರ್ ಈ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

Verna Engine:

1.5 ಲೀಟರ್ ಟರ್ಬೋ ಚಾರ್ಜ್ಡ್ ಎಂಜಿನ್ (Turbo Charged Engine) ಹೊಂದಿದ್ದು, 160 ಪಿಎಸ್ ಸಾಮರ್ಥ್ಯದ 253 ಉತ್ಪಾದಿಸುವ ಎಂಜಿನ್ ಅಳವಡಿಸಲಾಗಿದೆ. ಇನ್ನು 7-ಸ್ಪೀಡ್ ಡಿಸಿಟಿ ಗೇರ್ ಬಾಕ್ಸ್ ಜೋಡಿಸಲಾಗಿದೆ. ಇನ್ನು ಎರಡನೆಯ ವೇರಿಯಂಟ್ ನಲ್ಲಿ 1.5 ಲೀಟರ್ ನ್ಯಾಚುರಲ್ ಪೆಟ್ರೋಲ್ ಎಂಜಿನ್ ಜೊತೆಗೆ 115 ಪಿ ಎಸ್ ಪವರ್ ಹಾಗೂ 144 ಟಾರ್ಕ್ ಉತ್ಪಾದಿಸುವ ಎಂಜಿನ್ ಇದೆ. ಇದು ಸಿಕ್ಸ್ ಸ್ಪೀಡ್ ಮಾನ್ಯುಯಲ್ ಕೇರ್ ಬಾಕ್ಸ್ ಹೊಂದಿದೆ.

More Features:

ಹೊಸ ರೂಪಾಂತರದ ಒಳಭಾಗ ನೋಡುವುದಾದರೆ ಡುಯಲ್ ಇಂಟಿಗ್ರೇಟೆಡ್ ಸ್ಕ್ರೀನ್ ಸೆಟಪ್ (Dual Integrated Screen Setup) ಜೊತೆಗೆ 10.20 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಅಳವಡಿಸಲಾಗಿದೆ. ಎಂಟು ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್ ಇದೆ. ಎಸಿ ಬದಲಾಯಿಸಲು ನಿಯಂತ್ರಣಗಳು 64 ಬಣ್ಣದ ಲೈಟಿಂಗ್ ಕೂಡ ಈ ಕಾರಿನಲ್ಲಿದೆ. ಏರ್ ಪ್ಯೂರಿ ಫೈಯರ್ ಸನ್ರೂಫ್, ಪಿಸಿ ಮತ್ತು ತಂಪಾಗಿಸುವ ಗಾಳಿ, ಅಡ್ಜಸ್ಟ್ ಮೊದಲಾದವು ಕಾರಿನ ಐಷಾರಾಮಿಯನ್ನು ಹೆಚ್ಚಿಸಿದೆ.

ಇನ್ನು ಸುರಕ್ಷತೆ (Safety) ಯ ದೃಷ್ಟಿಯಿಂದ ಕಾರಿನ ಮುಂದೆ ಘರ್ಷಣೆಯ ಎಚ್ಚರಿಕೆ, ಬ್ಲೈಂಡ್ ಸ್ಪಾಟ್ ವಾರ್ನಿಂಗ್, ಲೆನ್ ಕೀಪ್ ಅಸಿಸ್ಟ್ ಕ್ರೂಸ್ ಕಂಟ್ರೋಲ್ ಡ್ರೈವಿಂಗ್ ಅಸಿಸ್ಟೆಂಸ್ ಸಿಸ್ಟಮ್ ಗಳನ್ನು ಕೂಡ ಅಳವಡಿಸಲಾಗಿದೆ. ಕಡಿಮೆ ಬಜೆಟ್ (Low Budget) ಇರುವ ಕಾರಿನಲ್ಲಿ ಎಡಿ ಎ ಎಸ್ ಸುರಕ್ಷಿತ ವೈಶಿಷ್ಟ್ಯ ಅಳವಡಿಸುವುದು ಬಹಳ ಕಡಿಮೆ ಆದರೆ ಹೊಸ ವೆರ್ನಾದಲ್ಲಿ ನೀವು ಇದನ್ನು ಕೂಡ ಕಾಣಬಹುದು.

ಅಷ್ಟೇ ಅಲ್ಲದೆ ಸುರಕ್ಷತೆಯ ದೃಷ್ಟಿಯಿಂದ ಆರು ಏರ್ ಬ್ಯಾಗ್ ಗಳು ಇವೆ. ಐಎಸ್ಓ ಫಿಕ್ಸ್ ಚೈಲ್ಡ್ ಲೋಕರ್, ಈ ಬಿಡಿ ಜೊತೆಗೆ ಎ ಬಿ ಎಸ್ ಕೂಡ ಇದೆ. ಪಾರ್ಕಿಂಗ್ ಸೆನ್ಸರ್ (Parking Sensor) ಡಿಸ್ಕ್ ಬ್ರೇಕ್ ಗಳು ಟೈಯರ್ ಒತ್ತಡದ ಮಾನಿಟರಿಂಗ್ ಸಿಸ್ಟಮ್ ಕೂಡ ಅಳವಡಿಸಲಾಗಿದ್ದು, ಹೋಂಡಾ ಸಿಟಿ ಮಾರುತಿ ಸುಜುಕಿ ಸಿಯಾಜ್ ಫೋಕ್ಸ್ವಾಗನ್ ಮೊದಲಾದ ಕಾರುಗಳ ಜೊತೆಗೆ ನೇರವಾಗಿ ಸ್ಪರ್ಧಿಸುತ್ತದೆ.

Leave A Reply

Your email address will not be published.