ಇದು ಹೊಸ ಕಾರನ್ನು ಖರೀದಿ ಮಾಡುವುದು ಅಂದ್ರೆ ಅಷ್ಟು ಸುಲಭವಲ್ಲ ಯಾಕೆಂದರೆ ಪೆಟ್ರೋಲ್ ಹಾಗೂ ಡೀಸೆಲ್ ದರ ಜಾಸ್ತಿ ಆಗಿರುವ ಹಿನ್ನೆಲೆಯಲ್ಲಿ ಮತ್ತೆ ಮತ್ತೆ ಸರ್ವಿಸ್ ಚಾರ್ಜ್ ಹೆಚ್ಚಾಗಿ ಬಾರದೇ ಇರುವ ಹಾಗೂ ಉತ್ತಮ ಕಾರ್ಯ ಕ್ಷಮತೆ, ಮೈಲೇಜ್, ಲುಕ್ ಎಲ್ಲವನ್ನು ಹೊಂದಿರುವ ಕಾರಣ ಆಯ್ಕೆ ಮಾಡುವುದು ಬಹಳ ದೊಡ್ಡ ವಿಷಯ. ನಿತ್ಯವೂ ಕಾರಿನಲ್ಲಿ ಪ್ರಯಾಣ ಮಾಡುವವರಿಗೆ ಬಜೆಟ್ ಫ್ರೆಂಡ್ಲಿ ಕಾರು ಕೂಡ ಬೇಕಾಗಿರುತ್ತದೆ. ಜೊತೆಗೆ ಮೈಲೇಜ್ ಕೂಡ ಉತ್ತಮವಾಗಿದ್ದರೆ ಆ ಕಾರು ಹೆಚ್ಚು ಸಮಯ ಓಡಿಸಲು ಸಾಧ್ಯ. ಪೆಟ್ರೋಲ್ ಹಾಗೂ ಡೀಸೆಲ್ ಇಂಧನಗಳಿಗೆ ಪರ್ಯಾಯವಾಗಿ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಹೆಚ್ಚಾಗಿ ಕಾಣಬಹುದು. ಆದರೆ ನಮ್ಮ ದೇಶದಲ್ಲಿ ಹೆಚ್ಚು ಎಲೆಕ್ಟ್ರಿಕ್ ಕಾರುಗಳ ಚಾರ್ಜಿಂಗ್ ಸ್ಟೇಷನ್ ಇಲ್ಲದೆ ಇರುವುದರಿಂದ ಹೆದ್ದಾರಿಯಲ್ಲಿ ಇಂತಹ ಎಲೆಕ್ಟ್ರಿಕ್ ಕಾರುಗಳನ್ನು ಕೂಡ ಕಷ್ಟ.
ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಎಲ್ಲವನ್ನು ಕೊಡುವಂತಹ ಒಂದು ಕಾರು ಇದೆ ಅಂದರೆ ಅದು ಮಾರುತಿ ಸುಜುಕಿ ವ್ಯಾಗನ್ ಆರ್ ವಿ ಎಕ್ಸ್ ಐ. ಹೌದು ಇದು ಸಂಪೂರ್ಣ ನಿಮ್ಮ ಬಜೆಟ್ ನಲ್ಲಿ ಬರುವಂತಹ ಕಾರು ಹಾಗೂ ಕಳೆದ 20 ವರ್ಷಗಳಿಂದ ಅತಿ ಹೆಚ್ಚು ಯೂನಿಟ್ ಮಾರಾಟ ಮಾಡಿದೆ ಮಾರುತಿ ಸುಜುಕಿ. ಭಾರತೀಯ ಮಾರುಕಟ್ಟೆಯಲ್ಲಿ ವಿಶ್ವಾಸಾರ್ಹ ಕಾರು ಎನ್ನುವ ಗುರುತನ್ನು ಉಳಿಸಿಕೊಂಡು ಬಂದಿರುವ ಮಾರುತಿ ವ್ಯಾಗನ್ ಆರ್ ವಿ ಎಕ್ಸ್ ಐ ಕಾರನ್ನು ಯಾಕೆ ಖರೀದಿ ಮಾಡಬೇಕು ಎನ್ನುವುದಕ್ಕೆ ಇಲ್ಲಿದೆ ಸ್ಪಷ್ಟನೆ!
ಅತ್ಯುತ್ತಮ ಇಂಜಿನ್:
1.0 ಲೀಟರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಕೊಡಲಾಗಿದೆ ಇದು 65 ಬಿ ಎಚ್ ಪಿ ಪವರ್ ಹಾಗೂ 89 ಎನ್ ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಸಿ ಏನ್ ಜಿ ರೂಪಾಂತರವನ್ನು ಕೂಡ ಬಿಡುಗಡೆ ಮಾಡಲಾಗಿದೆ. ನೀವು ಸಿಲ್ವರ್, ಪರ್ಲ್ ಮಿಡ್ ನೈಟ್ ಬ್ಲಾಕ್, ಮ್ಯಾಗ್ನ ಗ್ರೇ, ಸಾಲಿಡ್ ವೈಟ್, ಫುಲ್ ಸೈಡ್ ಬ್ಲೂ, ಬ್ರೌನ್ ಮೊದಲಾದ ಬಣ್ಣಗಳ ಆಯ್ಕೆಯನ್ನು ಪಡೆಯುತ್ತೀರಿ.
ವೈಶಿಷ್ಟ್ಯತೆ:
ವ್ಯಾಗನ್ ಆರ್ ವಿ ಎಕ್ಸ್ ಐ ಕಾರಿನಲ್ಲಿ ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ ಅಡ್ಜಸ್ಟ್ ಟೇಬಲ್ ಪವರ್ ORVM, ಟಚ್ ಸ್ಕ್ರೀನ್ ಕವರ್ ಫಾಗ್ ಲೈಟ್ ಗಳು, ಫ್ರಂಟ್ ಹಾಗೂ ರಿಯರ್ ಪವರ್ ವಿಂಡೋ ಗಳು ಹಾಗೂ ಎರಡು ಪ್ಯಾಸೆಂಜರ್ ಏರ್ ಬ್ಯಾಗ್ ಮೊದಲಾದ ವೈಶಿಷ್ಟ್ಯಗಳನ್ನು ನೀವು ಈ ಕಾರಿನಲ್ಲಿ ಪಡೆಯಬಹುದು.

ವ್ಯಾಗನ್ ಆರ್ ವಿ ಎಕ್ಸ್ ಐ ಮೈಲೇಜ್ ಗೆ ಸರಿಸಾಟಿ ಇಲ್ಲ:
ಇನ್ನು ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚುತ್ತಿರುವ ಕಾರಣ ಉತ್ತಮ ಕಾರ್ಯಕ್ಷಮತೆ ಹೊಂದಿರುವ ಹೆಚ್ಚು ಮೈಲೇಜ್ ಕೊಡುವ ಕಾರನ್ನು ಜನ ಹುಡುಕುತ್ತಾರೆ. ಅದರಲ್ಲೂ ನೀವು ದಿನವೂ ಕಾರಿನಲ್ಲಿ ಚಲಿಸುವುದಾದರೆ ಉತ್ತಮ ಮೈಲೇಜ್ ಇರುವ ಕಾರು ಬೇಕೇ ಬೇಕು ಇದಕ್ಕೆ ಬೆಸ್ಟ್ ಆಯ್ಕೆ ವ್ಯಾಗನ್ ಆರ್ ವಿ ಎಕ್ಸ್ ಐ. ಪೆಟ್ರೋಲ್ ಎಂಜಿನ್ ನಲ್ಲಿ ಪ್ರತಿ ಲೀಟರ್ಗೆ 25 ಕಿಲೋಮೀಟರ್ ನಷ್ಟು ಮೈಲೇಜ್ ಕೊಡುತ್ತದೆ. ಅದೇ ರೀತಿ ಸಿ ಏನ್ ಜಿ ಮಾದರಿಯಲ್ಲಿ 33 ರಿಂದ 36kmpl ವರೆಗೆ ಮೈಲೇಜ್ ಪಡೆಯಬಹುದು.
ವ್ಯಾಗನ್ ಆರ್ ವಿ ಎಕ್ಸ್ ಐ ಬೆಲೆ:
ಉತ್ತಮ ಕಾರ್ಯಕ್ಷಮತೆ ಇಂಜಿನ್ ಎಲ್ಲವನ್ನು ಹೊಂದಿರುವ ಈ ಕಾರಿನ ಬೆಲೆಯೂ ಕೂಡ ಕೈಗೆಟಕುವ ದರದಲ್ಲಿ ಲಭ್ಯವಿದೆ. ವ್ಯಾಗನ್ ಆರ್ ವಿ ಎಕ್ಸ್ ಐ ಎಕ್ಸ್ ಶೋರೂಮ್ ಪ್ರಕಾರ ಆರಂಭಿಕ ಬೆಲೆ 5.99 ಲಕ್ಷ ರೂಪಾಯಿಗಳು. ಇದರ ಆನ್ ರೋಡ್ ಪ್ರೈಸ್ 6.80 ಲಕ್ಷ ರೂಪಾಯಿಗಳು ಆಗುತ್ತವೆ. ಆಯಾ ರಾಜ್ಯಗಳಿಗೆ ಸಂಬಂಧಪಟ್ಟಹಾಗೆ ಈ ದರದಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು. ಒಟ್ಟಿನಲ್ಲಿ ಮಲ್ಟಿ ಪರ್ಪಸ್ ಗೆ ಮಲ್ಟಿ ಫಂಕ್ಷನ್ ಹೊಂದಿರುವ ವ್ಯಾಗನ್ ಆರ್ ವಿ ಎಕ್ಸ್ ಐ ಬೆಸ್ಟ್ ಆಯ್ಕೆ ಎಂದು ಸಾಬೀತಾಗಿದೆ.