Luxury Car: ಮಾರುಕಟ್ಟೆಗೆ ಅಧಿಕೃತವಾಗಿ ಎಂಟ್ರಿ ಕೊಟ್ಟ ಈ ಬೆಂಕಿ ಕಾರು! ಕ್ರೆಟಾ ಕಿಯಾ ಮೂಲೆಗುಂಪು.
ಈಗಾಗಲೇ ವೇಗವಾಗಿ ಬೆಳೆಯುತ್ತಿರುವ ಭಾರತದ ಆಟೊಮೊಬೈಲ್ ಕ್ಷೇತ್ರಕ್ಕೆ ಮತ್ತೊಂದು ಹೊಸ ಎಂಟ್ರಿ ಆಗುತ್ತಿದೆ. ಸಾಕಷ್ಟು ವರ್ಷಗಳಿಂದ ಭರವಸೆಯ ಬ್ರಾಂಡ್ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಹೋಂಡಾ ಸಂಸ್ಥೆ ಹೊಸ ಕಾರ್ ಆಗಿರುವ Honda Elevate ಮಾರುಕಟ್ಟೆಗೆ ಲಾಂಚ್ ಆಗುತ್ತಿದ್ದು ಇದರ ಬಗ್ಗೆ ಇವತ್ತಿನ ಈ ಆರ್ಟಿಕಲ್ ನಲ್ಲಿ ನಾವು ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡಲು ಹೊರಟಿದ್ದು ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ. ಶೋರೂಂಗೆ ಬರುವುದಕ್ಕಿಂತ ಮುಂಚೇನೆ ಈ ಮಿಡ್ ಸೈಜ್ SUV ಎಲ್ಲಾ ಕಡೆ ಹವಾ ಕ್ರಿಯೇಟ್ ಮಾಡಿದೆ ಎಂದು ಹೇಳಬಹುದಾಗಿದೆ.
ಈಗಾಗಲೇ Honda Elevate ಕಾರಿನ ಅಡ್ವಾನ್ಸ್ ಬುಕಿಂಗ್ ಪ್ರಾರಂಭವಾಗಿದ್ದು ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ. ಕಾರಿನಲ್ಲಿ ಫ್ರಂಟ್ ಗ್ರಿಲ್, All LED ಲೈಟ್ಸ್, ಮುಂದಿನ ಬಂಪರ್ ನಲ್ಲಿ ಎಲ್ಇಡಿ ಫೋಗ್ ಲ್ಯಾಂಪ್, 17 ಇಂಚಿನ ಅಲಾಯ್ ವೀಲ್ ಅನ್ನು ಕೂಡ ನೀವು ಈ ಕಾರಿನಲ್ಲಿ ಕಾಣಬಹುದು. ಈ ಕಾರಿನಲ್ಲಿ TFT ಸ್ಕ್ರೀನ್ ಹಾಗೂ 10.25 ಇಂಚಿನ ಟಚ್ ಸ್ಕ್ರೀನ್ ಇಂಫೋಟೈನ್ಮೆಂಟ್ ಸಿಸ್ಟಮ್ ಅನ್ನು ಕೂಡ ನೀವು ಕಾಣಬಹುದಾಗಿದೆ. ಸ್ಟಾರ್ಟ್ ಹಾಗೂ ಸ್ಟಾಪ್ ಗೆ ಪುಶ್ ಬಟನ್ ಅನ್ನು ನೀಡಲಾಗಿದೆ. ಸುರಕ್ಷತೆಯ ವಿಚಾರದಲ್ಲಿ ಕೂಡ ಸಾಕಷ್ಟು ನಿಗ ವಹಿಸಿದ್ದು ಆರು ಏರ್ ಬ್ಯಾಗ್ ಗಳನ್ನು ಕೂಡ ನೀಡಲಾಗಿದೆ. 2 ADAS ಗಳನ್ನು ಕೂಡ ಅಳವಡಿಸಲಾಗಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಇರುವಂತಹ Creta, Grand Vitara, Urban Cruiser Hyrider ಕಾರುಗಳ ವಿರುದ್ಧ Honda Elevate ನೇರ ಕಾಂಪಿಟೇಶನ್ ನೀಡಲು ಸಜ್ಜಾಗಿ ಮಾರುಕಟ್ಟೆಗೆ ಬರುತ್ತಿದೆ. ಹೀಗಾಗಿ ಖಂಡಿತವಾಗಿ ಆರಂಭಿಕ ದಿನಗಳಲ್ಲಿ ಇದು ಸಾಕಷ್ಟು ಸ್ಪರ್ಧೆಗಳನ್ನು ಎದುರಿಸಬೇಕಾಗುತ್ತದೆ ನಿಜ ಆದರೆ ಗ್ರಾಹಕರ ರುಚಿಗೆ ತಕ್ಕಂತೆ ಸ್ಪೆಸಿಫಿಕೇಶನ್ ಹಾಗೂ ಸ್ಪೆಷಾಲಿಟಿಗಳನ್ನು ನೀಡುವ ಮೂಲಕ Honda Elevate ಖಂಡಿತವಾಗಿ ಬಿಡುಗಡೆಗೆ ಮುಂಚೆ ಜನಪ್ರಿಯತೆಯನ್ನು ಮಾತ್ರ ಗ್ರಾಹಕರಿಂದ ಪಡೆದುಕೊಂಡಿದೆ ಎಂದು ಹೇಳಬಹುದಾಗಿದೆ. ಇದರ ಇಂಜಿನ್ ಬಗ್ಗೆ ಮಾತನಾಡುವುದಾದರೆ 1.5 ಲೀಟರ್ ನಾಲ್ಕು ಸಿಲೆಂಡರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಇಂಜಿನ್ ಅನ್ನು ಅಳವಡಿಸಲಾಗಿದೆ. 121Bhp ಪವರ್ ಹಾಗೂ 145Nm ಟಾರ್ಕ್ ಅನ್ನು ಜನರೇಟ್ ಮಾಡುವಂತಹ ಸಾಮರ್ಥ್ಯವನ್ನು ಈ ಇಂಜಿನ್ ಹೊಂದಿದೆ. ಈ ಕಾರಿನಲ್ಲಿ ಆರು ಸ್ಪೀಡ್ Manual ಹಾಗೂ ಏಳು ಸ್ಪೀಡ್ ಸಿವಿಟಿ ಟ್ರಾನ್ಸ್ಮಿಷನ್ ಅನ್ನು ಅಳವಡಿಸಲಾಗಿದೆ.

Honda Elevate ಕಾರಿನ ವಿಶೇಷತೆಗಳ ಜೊತೆಗೆ ಅದರ ಬೆಲೆಯನ್ನು ಕೂಡ ತಿಳಿಯೋಣ ಬನ್ನಿ. ಈ ಕಾರನ್ನು ಈಗಾಗಲೇ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಾಗಿದೆ ನಿಜ ಆದರೆ ಇನ್ನೂ ಕೂಡ ಇದು ಡೀಲರ್ಶಿಪ್ ಶೋರೂಮ್ ಗಳಲ್ಲಿ ಪ್ರಕಟ ಆಗೋದಕ್ಕೆ ಸಾಕಷ್ಟು ದಿನಗಳು ಹಿಡಿಯಬಹುದು ಎಂಬುದಾಗಿ ತಿಳಿದು ಬಂದಿದ್ದು ಅಡ್ವಾನ್ಸ್ ಬುಕಿಂಗ್ ಕೂಡ ಭರ್ಜರಿಯಾಗಿ ನಡೆಯುತ್ತಿದೆ. ಕಾರಿನ ವೇಳೆಯ ಬಗ್ಗೆ ಕಂಪನಿ ಅಧಿಕೃತವಾದ ಮಾಹಿತಿ ತಿಳಿಸಿಲ್ಲ ಆದರೆ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಈ ಕಾರು 11 ಲಕ್ಷ ರೂಪಾಯಿ ಎಕ್ಸ್ ಶೋರೂಮ್ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.