Electric Scooter: 14 ಪೈಸೆಗಳಲ್ಲಿ 1 ಕಿಮೀ ಕ್ರಮಿಸುವ ಎಲೆಕ್ಟ್ರಿಕ್ ಸ್ಕೂಟರ್; ಅತಿ ಕಡಿಮೆ ಬೆಲೆಗೆ ಲಭ್ಯ

Advertisement
ನೀವು ಕೂಡ ಈ ವರ್ಷ ಎಲೆಕ್ಟ್ರಿಕ್ ಸ್ಕೂಟರ್(Electric Scooter) ಖರೀದಿ ಮಾಡಲು ಯೋಚನೆ ಮಾಡಿದ್ದೀರಾ? ಹಾಗಾದ್ರೆ ಒಂದು ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ನಾವು ಹೇಳುತ್ತಿದ್ದೇವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಕೂಡ ಈ ಸ್ಕೂಟರ್ ಗೆ ಹೆಚ್ಚಿನ ಬೇಡಿಕೆ ಇದೆ. ಅದುವೇ ಗುರುಗ್ರಾಮ್ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಓಕಿನಾವ ಆಟೋ ಟೆಕ್.
ಓಕಿನಾವಾ ಆಟೋಟೆಕ್ ತನ್ನ ಪ್ರೈಸ್ ಮಾಡೆಲ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನವೀಕರಣದೊಂದಿಗೆ ಹಾಗೂ ಹೊಸ ಬಣ್ಣಗಳಲ್ಲಿ ಬಿಡುಗಡೆ ಮಾಡಿದೆ. ಓಕಿನಾವಾ ಪ್ರೈಸ್ ಪ್ರೊ(Okinawa Praise Pro) ಹಾಗೂ ಓಕೆನಾವಾ ಐಪ್ರೈಸ್ ಪ್ಲಸ್ ಈ ಎರಡು ವೇರಿಯಂಟ್ ಗಳಲ್ಲಿ ಎಂಟು ಹೊಸ ಬಣ್ಣಗಳ ಆಯ್ಕೆ ನೀಡಲಾಗಿದೆ. ಎಲೆಕ್ಟ್ರಿಕ್ ಗ್ರೀನ್, ಒಶನ್ ಬ್ಲೂ, ಮೌವ್ ಪರ್ಪಲ್, ಲಿಕ್ವಿಡ್ ಮೆಟಲ್, ಮೋಚಾ ಬ್ರೌನ್, ಸಿಫೋಮ್ ಗ್ರೀನ್, ಸನ್ ಆರೆಂಜ್ ಮಿಲಿಟರಿ ಗ್ರೀನ್, ಮೊದಲಾದ ಬಣ್ಣಗಳಲ್ಲಿ ನೀವು ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಬಹುದು.
ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿ ಮಾಡಿರುವ ಓಕಿನಾವಾ ಇದೀಗ ಹೊಸ ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ. ಆದರೆ ಇದರ ಕಾರ್ಯವಿಧಾನದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಕಂಪನಿ ತಿಳಿಸಿದೆ. ಈ ಸ್ಕೂಟರ್ ನಾವು ವೇಗದ ಬಗ್ಗೆ ಮಾತನಾಡುವುದಾದರೆ ಗಂಟೆಗೆ 56 ಕಿಲೋ ಮೀಟರ್ ಚಲಿಸುವ ಸಾಮರ್ಥ್ಯ ಹೊಂದಿದೆ. ಮೂರರಿಂದ ನಾಲ್ಕು ಗಂಟೆಗಳಲ್ಲಿ ಪೂರ್ಣ ಬ್ಯಾಟರಿ ಚಾರ್ಜ್ ಮಾಡಬಹುದು. ಇನ್ನು ಕೇವಲ 14 ಪೈಸೆ ಪ್ರತಿ ಕಿ.ಮೀ ಗೆ ಎನ್ನುವ ಲೆಕ್ಕದಲ್ಲಿ ಪ್ರೈಸ್ ಪ್ರೊ ನಿರ್ವಹಣಾ ವೆಚ್ಚ ಭರಿಸಬಹುದು. ಒಂದೇ ಚಾರ್ಜ್ ನಲ್ಲಿ 137 ಕಿಲೋಮೀಟರ್ ವರೆಗೆ ಚಲಿಸಬಹುದು ಎಂದು ಕಂಪನಿ ಬರವಸೆ ನೀಡಿದೆ. ಇನ್ನು ಇದರ ಎಕ್ಸ್ ಶೋರೂಮ್ ಬೆಲೆ. 1,45,965 ರೂಪಾಯಿಗಳು.
ಓಕಿನೋವಾ ಪ್ರೈಸ್ ಪ್ಲಸ್ ನಲ್ಲಿ ಎಲ್ಇಡಿ ಲೈಟಿಂಗ್, ಈ ಎಬಿಎಸ್ ಬ್ರೇಕಿಂಗ್, ಡಿಜಿಟಲ್ ಕನ್ಸೋಲ್ ಯು ಎಸ್ ಬಿ ಚಾರ್ಜಿಂಗ್ ಪೋರ್ಟ್, ವಾಕ್ ಅಸಿಸ್ಟ್ ಮೊದಲಾದ ವೈಶಿಷ್ಟ್ಯಗಳನ್ನು ಕಾಣಬಹುದು.
ಓಕಿನೋವಾ ಕಂಪನಿಯ ಬಗ್ಗೆ ಹೇಳುವುದಾದರೆ ಇದು ಗುರುಗ್ರಾಮ್ ನಲ್ಲಿ 2017ರಲ್ಲಿ ರಿಜ್ದ್ ಎಲೆಕ್ಟ್ರಿಕಲ್ ಸ್ಕೂಟರ್ ಅನ್ನು ಮೊಟ್ಟಮೊದಲ ಬಾರಿಗೆ ಬಿಡುಗಡೆ ಮಾಡಿತ್ತು. ಆರಂಭವಾದ ಆರು ವರ್ಷಗಳಲ್ಲಿ ಎರಡು ಲಕ್ಷದ 50 ಸಾವಿರ ಸ್ಕೂಟರ್ ಗಳನ್ನು ಉತ್ಪಾದಿಸಿ ದಾಖಲೆ ನಿರ್ಮಾಣ ಮಾಡಿದೆ. ಓಕಿನಾವಾ 540 ಕ್ಕೂ ಹೆಚ್ಚು 3S ಟಚ್ ಪಾಯಿಂಟ್ ಗಳನ್ನು ಹೊಂದಿದೆ.