ನೀವೇನಾದರೂ ಐಷಾರಾಮಿ ಕಾರನ್ನು ಖರೀದಿಸಲು ಬಯಸಿದರೆ ನಿಮಗೆ ಇಲ್ಲೊಂದು ಅತ್ಯುತ್ತಮ ಆಯ್ಕೆ ಇದೆ. ದೇಶದಲ್ಲಿ ಆಡಿ ಕಾರಿಗೆ ಹೆಚ್ಚು ಬೇಡಿಕೆ ಇದೆ. ಆದರೆ ಇದು ಐಷಾರಾಮಿ ಹಾಗೂ ದುಬಾರಿಯಾದ ಕಾರು. ಈ ಕಾರಿನ ಮೇನ್ಟೆನೆನ್ಸ್ ವೆಚ್ಚವು ಕೂಡ ಅಧಿಕ. ಹಾಗಾಗಿ ಆಡಿಯಂತಹ ಐಷಾರಾಮಿ ಕಾರು ಖರೀದಿ ಮಾಡಬೇಕು ಎಂದು ಹಲವರು ಬಯಸಿದರು ಅದರ ದುಬಾರಿ ಬೆಲೆಯಿಂದಾಗಿ ಖರೀದಿಸಲು ಸಾಧ್ಯವಾಗುವುದಿಲ್ಲ. ಆದರೆ ಅತ್ಯುತ್ತಮ ಕಂಡೀಶನ್ ನಲ್ಲಿ ಇರುವ Audi Q3 2013 ಮಾಡೆಲ್ ಕಾರನ್ನು ನೀವು ಅರ್ಧದಷ್ಟು ಬೆಲೆಗೆ ಸೆಕೆಂಡ್ ಹ್ಯಾಂಡ್ ಆಗಿ ಖರೀದಿ ಮಾಡಬಹುದು.
luxury Audi Q3 Car 2013 ಮಾಡೆಲ್, 2.0 TDI Quattro ಡೀಸೆಲ್ ಹಾಗೂ ಆಟೋಮ್ಯಾಟಿಕ್ ಎಂಜಿನ್ ಇರುವ ಕಾರು ಓಎಲ್ಎಕ್ಸ್ ನಲ್ಲಿ ಮಾರಾಟಕ್ಕಿದೆ.
Audi Q3 2013 ಕಾರಿನ ಬಗ್ಗೆ ಓನರ್, ಸ್ಥಳ, ಬೆಲೆ:
ಫಸ್ಟ್ ಓನರ್ ನಿಂದ ಈ ಕಾರ್ ಮಾರಾಟಕ್ಕಿದ್ದು, ಕೃಷ್ಣ ಎನ್ನುವವರು ಈ ಕಾರನ್ನು ಮಾರಾಟ ಮಾಡುವುದಾಗಿ ಓಎಲ್ಎಕ್ಸ್ ನಲ್ಲಿ ಹಾಕಿದ್ದಾರೆ. ನೀವು ಈ ಕಾರನ್ನು ಬನಶಂಕರಿ ಸೆಕೆಂಡ್ ಸ್ಟೇಜ್ ಬೆಂಗಳೂರು, ಇಲ್ಲಿ ನೇರವಾಗಿ ನೋಡಿ ಇಷ್ಟವಾದರೆ ಖರೀದಿ ಮಾಡಿ. ಇನ್ನು ಇದರ ಬೆಲೆಯನ್ನು 17 ಲಕ್ಷ ರೂಪಾಯಿಗಳಿಗೆ ಕೋಟ್ ಮಾಡಲಾಗಿದೆ. ಆಡಿ ಕ್ಯೂ3, 2013 ಮಾಡೆಲ್ ಕಾರಿನ ಎಕ್ಸ್ ಶೋರೂಮ್ ಆರಂಭಿಕ ಬೆಲೆ 28 ಲಕ್ಷದಿಂದ 43 ಲಕ್ಷದವರೆಗೆ ಇರುತ್ತದೆ. ಹಾಗಾಗಿ ನೀವು ಸುಸ್ಥಿತಿಯಲ್ಲಿ ಇರುವಂತಹ ಉತ್ತಮ ಕಾರನ್ನು ಕಡಿಮೆ ಬೆಲೆಗೆ ಇಲ್ಲಿ ಖರೀದಿ ಮಾಡಬಹುದು. ಕರ್ನಾಟಕದ ರಿಜಿಸ್ಟ್ರೇಷನ್ ಆಗಿರುವ ಈ ಕಾರ್ ಸುಸ್ಥಿತಿಯಲ್ಲಿ ಇದ್ದು ನೀವು ಫೈನಾನ್ಸ್ ಮೂಲಕ ಖರೀದಿ ಮಾಡಬಹುದು.
ಕಾರಿನ ಕಂಡೀಶನ್:
ಮಾರಾಟಕ್ಕಿರುವ Audi Q3 2013 ಮಾಡೆಲ್ ಕಾರು ಉತ್ತಮ ಕಂಡೀಶನ್ ನಲ್ಲಿ ಇದೆ ಅಡ್ಜಸ್ಟ್ಟೇಬಲ್ ಎಕ್ಸ್ಟ್ರನಲ್ ಮಿರರ್, ಅಜೆಸ್ಟ್ ಸ್ಟಿಯರಿಂಗ್, ಅಲಾಯ್ ವೀಲ್ಸ್, ಆಂಟಿ ತೆಫ್ಟ್ ದಿವಾಯ್ಸ್, ಆಕ್ಸ್ ಕಂಪಾಟೆಬಲಿಟಿ, ಬ್ಲೂಟೂತ್ ನ್ಯಾವಿಗೇಶನ್ ಸಿಸ್ಟಮ್, ಪಾರ್ಕಿಂಗ್ ಸೆನ್ಸಾರ್, ಪವರ್ ಸ್ಟೀರಿಂಗ್, ರಿಯಲ್ ಪಾರ್ಕಿಂಗ್ ಕ್ಯಾಮೆರಾ. ಯು ಎಸ್ ಬಿ ಕಂಪ್ಯಾಟೆಬಲಿಟಿ ಈ ಎಲ್ಲಾ ವೈಶಿಷ್ಟ್ಯತೆಗಳು ಈ ಕಾರಿನಲ್ಲಿ ಇವೆ. ಕಾಂಪ್ರಹೆನ್ಸಿವ್ ಇನ್ಸೂರೆನ್ಸ್ ಟೈಪ್ ಹೊಂದಿದೆ. ರಿಮೋಟ್ ಕಂಟ್ರೋಲ್ ಸೆಂಟ್ರಲ್ ಲಾಕ್ ಸಿಸ್ಟಮ್ ಈ ಕಾರಿನಲ್ಲಿ ಇದೆ. ಇನ್ನು ಬ್ಯಾಟರಿ ಕಂಡೀಶನ್ ಹೊಸದಾಗಿದ್ದು, ಟೈಯರ್ ಕಂಡೀಶನ್ ಹಳೆಯದ್ದು. ಎಂಜಿನ್ ಕೆಪ್ಯಾಸಿಟಿ 1987 ಸಿಸಿ. ಇನ್ನೂ ಡೀಸೆಲ್ ವೇರಿಯಂಟ್ ಆಗಿರುವ ಈ ಕಾರಿನಲ್ಲಿ 17. 32 ಕೆಎಂಪಿಎಲ್ ವರೆಗೆ ಮೈಲೇಜ್ ಪಡೆಯಬಹುದು. ಒಟ್ಟಾರೆಯಾಗಿ ಉತ್ತಮ ಕಂಡಿಶನ್ ನಲ್ಲಿ ಇರುವ ಈ ಕಾರನ್ನು ನೀವು ಬೇಕಿದ್ದರೆ ಓಎಲ್ಎಕ್ಸ್ ನಲ್ಲಿ ಕೃಷ್ಣ ಅವರ ಸಂಪರ್ಕ ಮಾಡಿ ಖರೀದಿ ಮಾಡಬಹುದು.
ಇಲ್ಲಿಂದ ಖರೀದಿಸಿ: https://www.olx.in/item/audi-q3-20-tdi-quattro-2013-diesel-iid-1725948536