Karnataka Times
Trending Stories, Viral News, Gossips & Everything in Kannada

SUV Cars: 10000 ರೂ ತಿಂಗಳ EMI ನಲ್ಲಿ ಸಿಗುವ 3 SUV ಕಾರ್ ಗಳು ಇಲ್ಲಿವೆ.

SUV Cars ಕಾರಿನ ಕುರಿತಂತೆ ಹೆಚ್ಚಿನ ಕ್ರೇಜ್ ಅನ್ನು ಹೊಂದಿರುವ ಪ್ರತಿಯೊಬ್ಬರು ಕೂಡ ಒಳ್ಳೆಯ ಸ್ಪೇಸ್ ಇರುವಂತಹ ಹಾಗೂ ಕಡಿಮೆ ದುಡ್ಡಿನಲ್ಲಿ ಒಳ್ಳೆಯ ಪ್ರಯೋಜನಗಳನ್ನು ಹೊಂದಿರುವ ಕಾರುಗಳನ್ನು ಖರೀದಿಸಲು ಹಾತೊರೆಯುತ್ತಾರೆ. ಇಂದಿನ ವಿಷಯದಲ್ಲಿ ಕೂಡ ಇದೇ ಕಾರುಗಳ ಕುರಿತಂತೆ ನಾವು ಹೇಳಲು ಹೊರಟಿದ್ದೇವೆ. ಕಡಿಮೆ ಬೆಲೆಯಲ್ಲಿ ಅತ್ಯಂತ ಹೆಚ್ಚು ಫೀಚರ್ಗಳನ್ನು ಹೊಂದಿರುವಂತಹ ಟಾಪ್ 3 SUV ಕಾರುಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

Advertisement

TATA PUNCH: 1.2ಲೀಟರ್ ಮೂರು ಸಿಲಿಂಡರ್ ನ್ಯಾಚುರಲಿ ಎಸ್ಪಿರೇಟೆಡ್ ರೇವಟ್ರೋನ್ ಪೆಟ್ರೋಲ್ ಇಂಜಿನ್ ಜೊತೆಗೆ ಬರುವಂತಹ ಈ ಕಾರು 84Bhp ಪವರ್ ಅನ್ನು ಹೊಂದಿದೆ. ಈ ಕಾರು ಐದು ಪವರ್ ಸ್ಪೀಡ್ ಗೇರ್ ಬಾಕ್ಸ್ ಅನ್ನು ಹೊಂದಿದೆ. ಇನ್ನು ಈ ಕಾರಿನಲ್ಲಿ 7 ಇಂಚಿನ ಇಂಫೋಟೆನ್ಮೆಂಟ್ ಸಿಸ್ಟಮ್ ಕೂಡ ಇದೆ. ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್ ಹಾಗೂ ಸ್ಟೇರಿಂಗ್ ಮೌಂಟೆಡ್ ಕಂಟ್ರೋಲ್ ನಂತಹ ಅತ್ಯಾಧುನಿಕ ಫೀಚರ್ಗಳು ಕೂಡ ಈ ಕಾರಿನಲ್ಲಿವೆ.

Advertisement

Nissan Magnite: ಈ ಕಂಪನಿ ಅತ್ಯಂತ ಹೆಚ್ಚು ಮಾರಾಟವಾಗುವಂತಹ ಕಾರಿನ ಮಾಡೆಲ್ ಇದು. ಇದರ ಬೇಸ್ ಮಾಡೆಲ್ ನ ಕಾರಿನ ಬೆಲೆ 6 ಲಕ್ಷದಿಂದ ಪ್ರಾರಂಭವಾಗುತ್ತದೆ. ಸಾಕಷ್ಟು ವಿಶೇಷತೆಗಳನ್ನು ಹೊಂದಿರುವಂತಹ ಈ ಕಾರು ಪ್ರೀಮಿಯಂ ಕಾರಿನಂತೆ ಕಾಣಿಸಿಕೊಳ್ಳುತ್ತದೆ. ಕಾರಿನಲ್ಲಿ 999ಸಿಸಿಯ ಪೆಟ್ರೋಲ್ ಎಸ್ಪಿರೇಟೆಡ್ ಇಂಜಿನ್ ಇದೆ. ಟರ್ಬೋ ಚಾರ್ಜಡ್ ಪೆಟ್ರೋಲ್ ಇಂಜಿನ್ ಕೂಡ ಇದೆ.

Advertisement

ಈ ಲಿಸ್ಟಿನಲ್ಲಿ ಮೂರನೇ ಕಾರ್ ಆಗಿ ಕಾಣಿಸಿಕೊಳ್ಳುವುದು Renault Kiger. ನಿಸಾನ್ ಹಾಗೂ ಟಾಟಾ ಸಂಸ್ಥೆಯ ಕಾರುಗಳಿಗೆ ಮಾರುಕಟ್ಟೆಯಲ್ಲಿ ಟಕ್ಕರ್ ನೀಡುವಂತಹ ಕಠಿಣ ಸ್ಪರ್ಧಿ ಈ ಕಾರ್ ಆಗಿದೆ. ಇದರ ಬೇಸ್ ಮಾಡೆಲ್ ನ ಬೆಲೆ 6.49 ಲಕ್ಷ ರೂಪಾಯಿ ಆಗಿದೆ. ಇಲ್ಲಿ ಎರಡು ಇಂಜಿನ್ ಆಪ್ಷನ್ ಇದ್ದು, ಮೊದಲನೇದಾಗಿ 1.0 ಲೀಟರ್ ನ ಟರ್ಬೋ ಇಂಜಿನ್ ಹಾಗೂ 1.0 ಲೀಟರ್ ನ 3 ಸಿಲಿಂಡರ್ ಎಂಜಿನ್. ಪೆಟ್ರೋಲ್ ಇಂಜಿನ್ 3500 RPM ನಲ್ಲಿ 70Bhp ಪವರ್ ಅನ್ನು ಜನರೇಟ್ ಮಾಡುತ್ತದೆ. ಇವುಗಳ ಮಿತ್ರರೇ ಒಳ್ಳೆಯ ಬಜೆಟ್ ನಲ್ಲಿ ಸಿಗುವಂತಹ ಉನ್ನತ ಫೀಚರ್ಗಳನ್ನು ಹೊಂದಿರುವ ಟಾಪ್ 3 SUV ಕಾರುಗಳು.

Leave A Reply

Your email address will not be published.