Hero Karizma: ಮತ್ತೆ ಬಂತು ಕರಿಜ್ಮಾ ಬೈಕ್! ಬೆಲೆ ಎಷ್ಟು ಗೊತ್ತಾ?

Advertisement
ಭಾರತೀಯರು ಅತಿಯಾಗಿ ಇಷ್ಟಪಟ್ಟಿರುವ ಕಾರುಗಳಲ್ಲಿ ಹೀರೋ ಮೋಟೋ ಕಾರ್ಪ್ ನ ಕರಿಜ್ಮಾ ಬೈಕ್ ಕೂಡ ಒಂದು. ಇದೀಗ ಹೊಸ ವಿನ್ಯಾಸದಲ್ಲಿ ಅತ್ಯಂತ ಸುಂದರ ಲುಕ್ ಜೊತೆಗೆ ಕರಿಜ್ಮಾ ಎಕ್ಸ್ ಎಮ್ ಆರ್ (Hero Karizma XMR) ಬಿಡುಗಡೆಯಾಗಿದೆ. ಇಂದು ಬಿಡುಗಡೆಯಾಗಿರುವ ಈ ಬೈಕ್ನ ಬಗ್ಗೆ ಇಲ್ಲಿದೆ ಸಂಪೂರ್ಣ ಡೀಟೇಲ್ಸ್.
ಇತ್ತೀಚಿಗೆ ಹೀರೋ ತನ್ನ ವಿನೂತನ ಕರಿಜ್ಮಾ ಬೈಕ್ನ ಹೊಸ ಅವತಾರದ ಟೀಸರ್ ಬಿಡುಗಡೆ ಮಾಡಿತ್ತು. ಹಳೆಯ ಮಾದರಿಗಿಂತಲೂ ಬಹಳ ವಿಭಿನ್ನವಾಗಿ ಬೈಕ್ ತಯಾರಿಸಲಾಗಿದೆ. ಎಲ್ಇಡಿ ಹೆಡ್ ಲೈಟ್, ಏರೋ ಡೈನಮಿಕ್ ಸೈಡ್ ರಿಯಲ್ ವಿಂಡ್ ಸ್ಕ್ರೀನ್, ಫೆರಿಂಗ್ ಮೌಂಟೆಡ್ ಮಿರರ್ ಹೀಗೆ ಸಾಕಷ್ಟು ವೈಶಿಷ್ಟ್ಯಗಳನ್ನು ಕಾಣಬಹುದು. ಸಂಪೂರ್ಣ ಎಲ್ಇಡಿ ಲೈಟಿಂಗ್ ಅಳವಡಿಸಲಾಗಿದೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕಂಸೋಲ್ ಕೂಡ ಕೊಡಲಾಗಿದ್ದು ಸ್ಮಾರ್ಟ್ ಫೋನ್ ನೊಂದಿಗೆ ಸುಲಭ ಸಂಪರ್ಕ ಸಾಧಿಸಬಹುದು.
ಹಿರೋದ ಹೊಸ ಕರಿಜ್ಮಾ (Hero Karizma) ಬೈಕ್ ನಲ್ಲಿ ಡುಯಲ್ ಟೋನ್ ಬಣ್ಣವನ್ನು ಕೊಡಲಾಗಿದೆ. ಅತ್ಯುತ್ತಮ ವಿನ್ಯಾಸ ಹೊಂದಿರುವ ಈ ಬೈಕ್ ನಲ್ಲಿ ಮಸ್ಕ್ಯುಲರ್ ಟ್ಯಾಂಕ್ ಹಾಗೂ ಡಿಸೈನರ್ ಅಲಾಯಿ ವೀಲ್ ಗಳನ್ನು ಕೊಡಲಾಗಿದೆ. ಬಹಳ ದೊಡ್ಡ ನಿರೀಕ್ಷೆ ಹೊಂದಿರುವ ಕರಿಜ್ಮಾ ಮಾರಾಟ ಚೆನ್ನಾಗಿ ಆದರೆ ಮುಂಬರುವ ದಿನಗಳಲ್ಲಿ ಬಜಾಜ್ ಟಿವಿಎಸ್ ನಂತಹ ಕಂಪನಿಗಳಿಗೆ ದೊಡ್ಡ ತಲೆ ನೋವಾಗಬಹುದು.

Hero Karizma XMR Engine:
ಈ ಬೈಕ್ 210 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ ಎಂಜಿನ್ ಹೊಂದಿದೆ. ಡಿಸ್ಕ್ ಬ್ರೇಕ್ ಅಳವಡಿಸಲಾಗಿದ್ದು ಆಫ್ ರೋಡ್ ಹಾಗೂ ಆನ್ ರೋಡ್ ರೈಡಿಂಗ್ ಗೆ ಉತ್ತಮ ಅನುಭವ ನೀಡುತ್ತದೆ. ಡುಯಲ್ ಚಾನೆಲ್ ಎ ಬಿ ಎಸ್ ಹಾಗೂ ಡಿಸ್ಕ್ ಬ್ರೇಕ್ ಮೊದಲಾದ ಸುಧಾರಿತ ಸುರಕ್ಷಿತ ವೈಶಿಷ್ಟ್ಯಗಳನ್ನು ಕಾಣಬಹುದು.
We can’t keep calm as we’re racing closer to the launch and are excited to see your reaction🔥 on 29th August, 2023.
Till then head over to our website https://t.co/TjvSZMJOnj as we reveal more about the legend each day!#HeroMotoCorp #KarizmaXMR pic.twitter.com/4RgGSJQp5h
— Hero MotoCorp (@HeroMotoCorp) August 25, 2023
Hero Karizma XMR Price:
ಹೀರೋ ಮೋಟೋ ಕಾರ್ಪ್ ನ ಹೊಸ ಕರಿಜ್ಮಾ ಎಕ್ಸ್ ಎಂ ಆರ್ ರಿವೀಲ್ ಆಗಿದ್ದು ಯಾವಾಗ ಗ್ರಾಹಕರ ಕೈ ಸೇರುತ್ತದೆ ಎನ್ನುವುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಬಹುಶ: ಆಗಸ್ಟ್ 29ರ ನಂತರ ಅಂದರೆ ಇಂದಿನ ಬಿಡುಗಡೆ ಕಾರ್ಯಕ್ರಮದ ನಂತರ ಇದರ ಬಗ್ಗೆ ಮಾಹಿತಿ ಲಭ್ಯವಾಗಬಹುದು. ನೂತನ ಮಾದರಿಯಲ್ಲಿ ಹೊಸ ವಿನ್ಯಾಸ ಹೊಂದಿರುವ ಹೀರೋ ಕರಿಜ್ಮಾ (Hero Karizma) ಬೈಕ್ ನ ಎಕ್ಸ್ ಶೋರೂಮ್ ಬೆಲೆ 1.18 ಲಕ್ಷ ರೂಪಾಯಿಗಳಿಂದ ಆರಂಭವಾಗಬಹುದು. ಇನ್ನು ಮೈಲೇಜ್ ವಿಚಾರದಲ್ಲಿಯೂ ಕೂಡ 40 ರಿಂದ 41ಕೆಎಂಪಿಎಲ್ ವರೆಗೆ ಮೈಲೇಜ್ ನಿರೀಕ್ಷೆ ಮಾಡಬಹುದು. ಈ ಬೈಕ್ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಹೀರೋ ಮೋಟೋ ಕಾರ್ಪ್ ಸದ್ಯದಲ್ಲಿಯೇ ಹಂಚಿಕೊಳ್ಳಲಿದೆ.