Honda: ಹೋಂಡಾ ಕಂಪನಿಯ ಈ 2 ಬೈಕುಗಳು ಶೀಘ್ರದಲ್ಲೇ ಭಾರತಕ್ಕೆ! ಅತೀ ಕಡಿಮೆ ಬೆಲೆ

Advertisement
ದಶಕಗಳಿಂದ ಹೋಂಡಾ ಅತ್ಯುತ್ತಮ ಮೋಟಾರ್ ಸೈಕಲ್ ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಹೋಂಡಾ ಬೈಕ್(Honda Bike) ಹಾಗೂ ಸ್ಕೂಟರ್ ಗಳು ಹೆಚ್ಚು ಕಾರ್ಯಕ್ಷಮತೆ ಹೊಂದಿದ್ದು ಉತ್ತಮ ಲುಕ್ ಕೂಡ ಹೊಂದಿರುವ ದ್ವಿಚಕ್ರವಾಹನಗಳಾಗಿವೆ. ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹೋಂಡಾ ಎರಡು ಹೊಸ ಅವತಾರಗಳೊಂದಿಗೆ ಸದ್ಯದಲ್ಲಿಯೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಅದುವೇ ಹೋಂಡಾ ಮಂಕಿ ಹಾಗೂ ಸೂಪರ್ ಕ್ಯೂಬ್ ಎನ್ನುವ ಎರಡು ಐಕಾನಿಕ್ ಮಾಡೆಲ್ ಗಳು.
ಹೋಂಡಾ ಮಂಕಿ:
ಈ ಬೈಕ್ ಅನ್ನು ಸುಮಾರು 1960ರ ದಶಕದಲ್ಲಿ ಪ್ರಾರಂಭಿಸಲಾಗಿದೆ. ಹೋಂಡಾ ಓನರ್ಷಿಪ್ ನ ಜಪಾನೀಸ್ ಅಮ್ಯೂಸ್ಮೆಂಟ್ ಪಾರ್ಕ್ ನಲ್ಲಿ ಟಾಮಾ ಟೆಕ್ ಎಂದು ಈ ಬೈಕ್ ಅನ್ನು ಕರೆಯಲಾಗುತ್ತಿತ್ತು. ಇದು ಸಮ್ಮ ಆಕರ್ಷಕ ಲುಕ್ ನಿಂದಾಗಿ ವಿಶ್ವದಲ್ಲಿಯೇ ಪ್ರಸಿದ್ಧ ಬೈಕ್ ಎನಿಸಿದೆ.
2024ರಲ್ಲಿ ಈ ಬೈಕ್ ವಿಶಿಷ್ಟ ಲುಕ್ ನೊಂದಿಗೆ ಆಧುನಿಕ ತಂತ್ರಜ್ಞಾನಗಳೊಂದಿಗೆ ಮಾರುಕಟ್ಟೆಗೆ ಬರಲಿದೆ. 124 ಸಿಸಿ ಸಿಂಗಲ್ ಸಿಲೆಂಡರ್ ಎಂಜಿನ್ ಹೊಂದಿರುವ ಹೋಂಡಾ ಮಂಕಿ ಎಲ್ಲಿ ಪ್ರೊಗ್ರಾಮ್ ಫ್ಯುಯಲ್ ಇಂಜೆಕ್ಷನ್ ತಂತ್ರಜ್ಞಾನವನ್ನು ಕೂಡ ಅಳವಡಿಸಲಾಗಿದೆ ಅದೇ ರೀತಿ ಸುರಕ್ಷತೆಯ ದೃಷ್ಟಿಯಿಂದ ಎಪಿಎಸ್ ಕೂಡ ಸೇರಿಸಿರುವುದು ವಿಶೇಷ.
ಹೋಂಡಾ ಮಂಕಿ ಎರಡು ಅತ್ಯುತ್ತಮ ಕಲರ್ ನೊಂದಿಗೆ ಬರುತ್ತಿದೆ. ಪರ್ಲ್ ನೆಬ್ಯುಲಾ ರೆಡ್ ಹಾಗೂ ಪರ್ಲ್ ಬ್ಲಾಕ್. ಈ ಬೈಕ್ ಅನ್ನು ಬೆಲೆ 4,299 ಯುಎಸ್‌ಡಿಗಳು. ಭಾರತೀಯ ಹಣದಲ್ಲಿ ನೋಡುವುದಾದರೆ 96,617 ರೂಪಾಯಿ ಗಳಿಂದ 1.5 ಲಕ್ಷ ರೂಪಾಯಿಗಳವರೆಗೆ ಆಗಬಹುದು. ಇನ್ನು ಹೊಸ ಹೋಂಡಾ ಮಂಕಿ 67 ಕೆ ಎಂ ಪಿ ಎಲ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಸೂಪರ್ ಕ್ಯೂಬ್ ನ ಪರಿಚಯ
ಸೂಪರ್ ಕ್ಯೂಬ್ 125 ಸಿಸಿ ಎಂಜಿನ್ ಹೊಂದಿರುವ ಹೊಸ ರೂಪಾಂತರವಾಗಿದೆ. ಈ ಬೈಕ್ ಬಿಡುಗಡೆಯಾಗಿದ್ದು 1958ರಲ್ಲಿ. “You meet the nicest people on a Honda” ಎನ್ನುವ ಟ್ಯಾಗ್ ಲೈನ್ ಮೂಲಕ ಕಂಪನಿ ಬ್ರಾಂಡ್ ಪ್ರಚಾರಕ್ಕೆ ಈ ಬೈಕ್ ತಯಾರಿಸಲಾಗಿತ್ತು. ವಿಶ್ವಾದ್ಯಂತ ನೂರು ಮಿಲಿಯನ್ ನಷ್ಟು ಯೂನಿಟ್ ಮಾರಾಟ ಮಾಡಲಾಗಿದ್ದು ಸಾರ್ವಕಾಲಿಕ ಸ್ಪೆಷಲ್ ಬೈಕ್ ಎನಿಸಿಕೊಂಡಿದೆ.
ಸೂಪರ್ ಕ್ಯೂಬ್ ಜನರಿಗೆ ಹೆಚ್ಚು ಇಷ್ಟವಾಗುವುದು ಅದರ ಆಕರ್ಷಕ ಲುಕ್ ನಿಂದ. ಇದೀಗ 2023ರಲ್ಲಿ ಬಿಡುಗಡೆಯಾಗಲಿರುವ ಸೂಪರ್ ಕ್ಯೂಟ್ ಸಿ 125 ಆಕರ್ಷಕ ರೆಟ್ರೋ ಲುಕ್ ನೊಂದಿಗೆ ಮಾರುಕಟ್ಟೆಗೆ ಬರಲಿದೆ. ಕ್ಲಚ್ ಲೆಸ್ 4 ವೇಗದ ಮ್ಯಾನುವಲ್ ಟ್ರಾನ್ಸ್ಮಿಷನ್ ಹಾಗೂ ಲೈಟ್ ವೇಟ್ ನಿರ್ಮಾಣವನ್ನು ಕಾಣಬಹುದು. 124 ಸಿಸಿ ಎಂಜಿನ್ ಹೊಂದಿರುವ ಈ ಸ್ಕೂಟರ್ ಫ್ಯೂಯಲ್ ಇಂಜೆಕ್ಟೆಡ್ ಸಿಂಗಲ್ ಸಿಲೆಂಡರ್ ಎಂಜಿನ್ ಹೊಂದಿದೆ.
ಸುರಕ್ಷತೆಯ ದೃಷ್ಟಿಯಿಂದಲೂ ಮುಂಭಾಗದ ಚಕ್ರದಲ್ಲಿ ಎಬಿಎಸ್ ಅಳವಡಿಸಲಾಗಿದೆ. ದಿನವೂ ಬಳಸುವವರಿಗಾಗಿ ಎಲೆಕ್ಟ್ರಿಕ್ ಸ್ಟಾರ್ಟರ್ ಕೂಡ ನೀಡಲಾಗಿದೆ. ಸದ್ಯ ಬಿಡುಗಡೆ ಆಗಲಿರುವ ಈ ಸ್ಕೂಟರ್ ಕೇವಲ ಪರ್ಲ್ ಗ್ರೆ ಒಂದು ಬಣ್ಣದಲ್ಲಿ ಮಾತ್ರ ಲಭ್ಯವಿದೆ. ಅಕ್ಟೋಬರ್ 2023ರ ವೇಳೆಗೆ ಈ ಬೈಕ್ ಬಿಡುಗಡೆ ಆಗಲಿದ್ದು ಇದರ ಬೆಲೆ ರೂ.3,899 ಯುಎಸ್‌ಡಿಗಳು. ಅಂದರೆ 87, 625 ರೂ. ಗಳಿಂದ 1.5 ಲಕ್ಷ ರೂಪಾಯಿಗಳವರೆಗೆ ಇರಬಹುದು. ಇನ್ನು ಇದರ ಮೈಲೇಜ್ ವಿಚಾರಕ್ಕೆ ಬಂದರೆ 66 ಕಿಲೋಮೀಟರ್ ಪರ್ ಲೀಟರ್ ಮೈಲೇಜ್ ಕೊಡಬಹುದು.