Tata: ಬಡವರ ಕನಸು ಈಡೇರಿಸಲು ಮುಂದಾದ ಟಾಟಾ! ಈ ಕಾರಿನ ಬೆಲೆ ಎಷ್ಟು ಗೊತ್ತಾ?

Advertisement
ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಿಸಲಿದೆ. ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರುಗಳನ್ನು ಹುಡುಕುತ್ತಿರುವಿರಾ? ಹಾಗಾದ್ರೆ ಈ ಸುದ್ದಿ ನಿಮಗಾಗಿ Tata Nano EV ಯ ಹೊಸ EV ಆವೃತ್ತಿಯು ಮಾರುಕಟ್ಟೆಗೆ ಬರಲಿದೆ. ಕೆಲವೇ ದಿನಗಳಲ್ಲಿ ಟಾಟಾ ನ್ಯಾನೋ ಹೊಸ ಮಾದರಿಯೊಂದು ಮಾರುಕಟ್ಟೆಗೆ ಬರಲಿದೆ.
ವಾಸ್ತವವಾಗಿ, ಇತ್ತೀಚಿನ ದಿನಗಳಲ್ಲಿ, ಟಾಟಾ ಮೋಟಾರ್ಸ್ (Tata Motors) ನ ಮಾಜಿ ಅಧ್ಯಕ್ಷ ರತನ್ ಟಾಟಾ , ಟಾಟಾ ನ್ಯಾನೋ EV ಯ ಹೊಸ ಮತ್ತು ನವೀಕರಿಸಿದ ಆವೃತ್ತಿಯೊಂದಿಗೆ ಕಾಣಿಸಿಕೊಂಡಿರುವ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ವೈರಲ್ ಆಗುತ್ತಿದೆ . ಇದು ಟಾಟಾ ನ್ಯಾನೋದ ಹೊಸ ಎಲೆಕ್ಟ್ರಿಕ್ ಮಾಡೆಲ್ ಆಗಿದ್ದು, ಶೀಘ್ರದಲ್ಲೇ ಇವಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು.
ಇದು ಇತ್ತೀಚೆಗೆ ಬಿಡುಗಡೆಯಾದ MG ಕಾಮೆಟ್‌ಗೆ ತೀವ್ರ ಸ್ಪರ್ಧೆ ಒಡ್ಡಲಿದೆ ಎಂದು ಹೇಳಲಾಗುತ್ತಿದೆ. ಇದು MG ಕಾಮೆಟ್ (MG Comet) ಗಿಂತಲೂ ಅಗ್ಗದ ಬೆಲೆಗೆ ಲಭ್ಯವಾಗಲಿದೆ ಎಂಬ ನಿರೀಕ್ಷೆ ಇದೆ. ಈ ಮೂಲಕ ಟಾಟಾ ನ್ಯಾನೋ ದೇಶದ ಅತಿ ಅಗ್ಗದ ಎಲೆಕ್ಟ್ರಿಕ್ ಕಾರು ಎನಿಸುವ ಎಲ್ಲ ಸಾಧ್ಯತೆಗಳಿವೆ.

ಎಲ್ಲ ಕಾರು ಕಂಪನಿಗಳು ತಮ್ಮ ಹೊಸ ಆವೃತ್ತಿಯ ಕಾರುಗಳಲ್ಲಿ ಸ್ಪರ್ಧಾತ್ಮಕ ಬೆಲೆಯೊಂದಿಗೆ ಎಲ್ಲ ವೈಶಿಷ್ಟ್ಯಗಳನ್ನು ನೀಡುತ್ತಿವೆ. ಇತ್ತೀಚೆಗಷ್ಟೇ ಎಂಜಿ ಮೋಟಾರ್ ಇಂಡಿಯಾ ಪರಿಚಯಿಸಿರುವ MG ಕಾಮೆಟ್ ಎಲೆಕ್ಟ್ರಿಕ್ ಕಾರು (MG Comet EV) ಭಾರೀ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಟಾಟಾ ಮೋಟಾರ್ಸ್ ಕೂಡ ತನ್ನ ನ್ಯಾನೋ ಕಾರನ್ನು ಎಲೆಕ್ಟ್ರಿಕ್ ಅವತರಣಿಕೆಯಲ್ಲಿ ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಬಂದಿದೆ. ಒಂದು ವೇಳೆ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು ಬಿಡುಗಡೆಯಾದರೆ ಎಂಜಿ ಕಾಮೆಟ್‌ಗೆ ತೀವ್ರ ಸ್ಪರ್ಧೆ ಒಡ್ಡಲಿದೆ.
ಈಗ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿರುವುದರಿಂದ ಆದಷ್ಟೂ ಕಡಿಮೆ ಬೆಲೆಯಲ್ಲಿ ಹೆಚ್ಚು ಅನುಕೂಲ ಹೊಂದಿರುವ ಕಾರು ಕೊಳ್ಳಲು ಬಯಸುತ್ತಾರೆ. ಹೀಗಾಗಿಯೇ ಎಲೆಕ್ಟಿಕ್ ವಾಹನಗಳ ಟ್ರೆಂಡ್ ನಿಧಾನಕ್ಕೆ ಹೆಚ್ಚುತ್ತಿದೆ.
ಈಗ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ (Tata Nano EV) ನ್ನು ಪರಿಚಯಿಸಲು ಟಾಟಾ ಮೋಟಾರ್ಸ್ ನಿರ್ಧರಿಸಿದೆ. ಆದರೆ, ಇದರ ಬೆಲೆ ಎಷ್ಟು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಬಹುತೇಕ ಎಲ್ಲಾ ಆಟೋಮೊಬೈಲ್ ಕಂಪನಿಗಳು ತಮ್ಮ ಹೊಸ ವಾಹನಗಳನ್ನು ಪರಿಚಯಿಸುವ ಮೂಲಕ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿವೆ. ಈ ಸಂದರ್ಭದಲ್ಲಿ ಟಾಟಾ ಕೂಡ ತನ್ನ ಟಾಟಾ ನ್ಯಾನೋ ಎಲೆಕ್ಟ್ರಿಕ್ ವಾಹನದ ಮೂಲಕ ಶೀಘ್ರದಲ್ಲೇ ಮತ್ತೆ ಸದ್ದುಮಾಡಲು ತಯಾರಿ ನಡೆಸುತ್ತಿದೆ ಎಂಬ ಸುದ್ದಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಮುಂಬರುವ ಈ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರಿನಲ್ಲಿ ಏನಲ್ಲ ವೈಶಿಷ್ಟ್ಯಗಳು ಇರಲಿವೆ ಎಂಬ ಮಾಹಿತಿ ಇಲ್ಲಿದೆ.
Tata Nano Electric Power Pack:
ದೇಶದ ಪ್ರಮುಖ ಆಟೋಮೊಬೈಲ್ ಕಂಪನಿ ಟಾಟಾ (Tata) ತನ್ನ ಮುಂಬರುವ ಎಲೆಕ್ಟ್ರಿಕ್ ಕಾರಿನಲ್ಲಿ ಉತ್ತಮ ಪವರ್ ಟ್ರೈನ್ ಅನ್ನು ನೀಡಿದೆ. ಮಾಹಿತಿಯ ಪ್ರಕಾರ, ಕಂಪನಿಯು ತನ್ನ ಮುಂಬರುವ ಎಲೆಕ್ಟ್ರಿಕ್ ನ್ಯಾನೋದಲ್ಲಿ 72V ಪವರ್ ಪ್ಯಾಕ್ ಅನ್ನು ಒದಗಿಸಬಹುದು. ಮತ್ತೊಂದೆಡೆ, ಅದರ ಈ ಕಾರ್ ನ ವೇಗದ ಬಗ್ಗೆ ಹೇಳುವುದಾದರೆ ಇದು ಪ್ರತಿ ಗಂಟೆಗೆ 60-70 ಕಿ.ಮೀ. ವೇಗ ನೀಡುತ್ತದೆ. ಒಂದು ಬಾರಿ ಚಾರ್ಜ್ ಮಾಡಿದರೆ, ಸುಮಾರು 300 ಕಿಲೋಮೀಟರ್ ದೂರವನ್ನು ಕ್ರಮಿಸಬಹುದು ಎನ್ನಲಾಗಿದೆ
Tata Nano EV Price:
ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರಿನ (Tata Nano EV) ಬೆಲೆ ಕುರಿತು ಟಾಟಾ ಮೋಟಾರ್ಸ್ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಮಾಹಿತಿಯ ಪ್ರಕಾರ, ಕಂಪನಿಯು ತನ್ನ ಎಲೆಕ್ಟ್ರಿಕ್ ಕಾರನ್ನು ಕೈಗೆಟುಕುವ ಬೆಲೆಯಲ್ಲಿ ಅಂದರೆ, 5 ಲಕ್ಷ ರೂ. ಒಳಗೆ ಇರಿಸಲಿದೆ ಎನ್ನಲಾಗಿದೆ.
ಅಲ್ಲದೆ ಇಲ್ಲಿಯವರೆಗೆ 2025 ರ ವೇಳೆಗೆ 10 ಟಾಟಾ ನ್ಯಾನೋವನ್ನು ಬಿಡುಗಡೆ ಮಾಡುವುದು ಕಂಪನಿಯ ಗುರಿಯಾಗಿದೆ. ಹಾಗಾಗಿ 2025 ರ ವೇಳೆಗೆ ನ್ಯಾನೋ ಭಾರತೀಯ ಮಾರುಕಟ್ಟೆಗೆ ಬರಲಿದೆ ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ನೋಡಿ, ಕಂಪನಿಯು ಅದನ್ನು ಮೊದಲೇ ತಯಾರಿಸಲು ಪ್ರಯತ್ನಿಸಬಹುದು.