Best Mileage Car: 30 kmpl ಮೈಲೇಜ್ ನೀಡುವ ಈ ಬೆಂಕಿ ಕಾರು ಖರೀದಿಸಲು ಮುಗಿಬಿದ್ದ ಜನ! ಅತೀ ಕಡಿಮೆ ಬೆಲೆಗೆ
ಭಾರತೀಯ ಮಾರುಕಟ್ಟೆಯಲ್ಲಿ ಇಂದು ಹೆಚ್ಚಾಗಿ ಇಂದು suv ಕಾರುಗಳನ್ನು ಕಾಣಬಹುದು. ಸುರಕ್ಷತೆ ದೃಷ್ಟಿಯಿಂದ ಉತ್ತಮವಾಗಿರುವ ಎಸ್ಯುವಿಗಳನ್ನು ಜನ ಹೆಚ್ಚಾಗಿ ಖರೀದಿ ಮಾಡುತ್ತಾರೆ. ಎಲ್ಲ ವಿಷಯದಲ್ಲಿಯೂ ಉತ್ತಮವಾಗಿರುವ ಎಸ್ಯುವಿ ಕಾರುಗಳು ಉದ್ದ ಹಾಗೂ ಅಗಲ ಹೆಚ್ಚಿರುವುದರಿಂದ ಟ್ರಾಫಿಕ್ ಇರುವ ಸಂದರ್ಭದಲ್ಲಿ ಅದನ್ನು ಓಡಿಸುವುದು ಕೂಡ ಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ಜನರಿಗೆ ಹೆಚ್ಚು ಇಷ್ಟವಾಗಿದ್ದೆ ಕಾಂಪ್ಯಾಕ್ಟ್ ಎಸ್ ಯು ವಿ ಕಾರುಗಳು.
ಹೌದು, ಅದೆಷ್ಟೇ ಟ್ರಾಫಿಕ್ ಇದ್ದರೂ ಕೂಡ ಸಣ್ಣ ಕುಟುಂಬಕ್ಕೆ ನಗರ ಪ್ರದೇಶದಲ್ಲಿ ಓಡಾಡಲು ಕಾಂಪ್ಯಾಕ್ಟ್ ಎಸ್ ಯು ವಿ ಹೆಚ್ಚು ಆರಾಮದಾಯಕ ಪ್ರಯಾಣವನ್ನು ನೀಡುತ್ತದೆ. ಈ ನಿಟ್ಟಿನಲ್ಲಿ ಟಾಟಾದ ನೆಕ್ಸಾನ್, ಹುಂಡೈ ಕ್ರೆಟಾ ಮೊದಲಾದವು ತಮ್ಮ ಕಾರ್ಯಕ್ಷಮತೆ, ಗುಣಮಟ್ಟ ಹಾಗೂ ಐಷಾರಾಮಿ ಲುಕ್ ನಿಂದ ಜನರ ಮನ ಗೆದ್ದಿವೆ. ಇದೇ ಕಾರಣಕ್ಕೆ ಈ ಕಾರುಗಳ ಮಾರಾಟವು ಕೂಡ ಹೆಚ್ಚಾಗಿದೆ. ಆದರೆ ಈಗ ನಾವು ಹೇಳುತ್ತಿರುವ ಕಾರು ಮಾರುತಿ ಸುಜುಕಿ ಬ್ರೆಝಾ. ನೀವು ಬೇರೆಲ್ಲ ಕಾರುಗಳ ಓಡಿಸಿದ ಅನುಭವಕ್ಕಿಂತ ಅತ್ಯುತ್ತಮ ಅನುಭವವನ್ನು ನೀಡಲಿದೆ ಮಾರುತಿ ಸುಜುಕಿ ಬ್ರೆಝಾ. ಇದು ಹೊಸ ಅವತಾರದಲ್ಲಿ ಬರಲಿರುವ ಈ ಕಾಂಪ್ಯಾಕ್ಟ್ ಎಸ್ ಯು ವಿ ಕಾರು ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ.
ಮಾರುತಿ ಸುಜುಕಿ ಬ್ರೆಝಾ ವೈಶಿಷ್ಟತೆಗಳು
ಮೊದಲಿಗಿಂತಲೂ ಈಗ ಪಿಕಪ್ ಉತ್ತಮವಾಗಿದ್ದು, ಶಕ್ತಿಯುತವಾಗಿದೆ. ಜೊತೆಗೆ ಮೊದಲಿಗಿಂತ ವಿಶಾಲವಾಗಿಯೂ ಇದೆ. ವಿನ್ಯಾಸವು ಅಷ್ಟೇ ಉತ್ತಮವಾಗಿದೆ. ಇದರ ಇಂಜಿನ್ ಬಗ್ಗೆ ಮಾತನಾಡುವುದಾದರೆ 1.5 ಲೀಟರ್ ಕೆ ಸರಣಿಯ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಕೊಡಲಾಗಿದೆ. 101.65 ಬಿ ಎಚ್ ಪಿ ತಯಾರಿಸುವ ಶಕ್ತಿ ಹೊಂದಿದೆ. ಇದು ಸಿಎಂಜಿ ಮಾದರಿಯಲ್ಲಿಯೂ ಕೂಡ ಲಭ್ಯವಿದೆ. ಇನ್ನು ಮೈಲೇಜ್ ವಿಚಾರಕ್ಕೆ ಬಂದರೆ ಪೆಟ್ರೋಲ್ ಎಂಜಿನ್ ನಲ್ಲಿ 20 ಕಿಲೋ ಮೀಟರ್ ವರೆಗೆ ಮೈಲೇಜ್ ಸಿಕ್ಕರೆ ಸಿ ಎನ್ ಜಿ ಮಾದರಿಯಲ್ಲಿ 30 ಕೆ ಎಮ್ ಪಿ ಎಲ್ ಹೊರಗೆ ಮೈಲೇಜ್ ಪಡೆದುಕೊಳ್ಳಬಹುದು.
ಫೀಚರ್ ಗಳು:
ಸುರಕ್ಷತೆಯ ದೃಷ್ಟಿಯಿಂದಲೂ ಕೂಡ ಮಾರುತಿ ಬ್ರಿಜಾ ಬೆಸ್ಟ್ ಆಯ್ಕೆ ಆಗಲಿದೆ ಇದರಲ್ಲಿ ಎರಡು ಏರ್ ಬ್ಯಾಗ್ ಗಳು, ಎಬಿಎಸ್, ಇಬಿಡಿ, ಐಸೋಫಿಕ್ಸ್ ಚೈಲ್ಡ್ ಸೀಟ್ಗಳು, ಚೈಲ್ಡ್ ಲಾಕ್, ರಿಸ್ ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಜೊತೆಗೆ 360° ಕ್ಯಾಮೆರಾ ಮೊದಲಾದ ಸುರಕ್ಷಿತ ವೈಶಿಷ್ಟತೆಗಳನ್ನು ಅಳವಡಿಸಲಾಗಿದ್ದು ಸುರಕ್ಷತೆಯ ದೃಷ್ಟಿಯಲ್ಲಿ 4 ಸ್ಟಾರ್ ರೈಟಿಂಗ್ ಪಡೆದುಕೊಂಡಿದೆ.
ಇನ್ನು 10 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, ಕಿ ಲೆಸ್ ಎಂಟ್ರಿ, ಕ್ಲೈಮೇಟ್ ಕಂಟ್ರೋಲ್ ಎಸಿ, ಪುಶ್ ಬಟನ್ ಸ್ಟಾರ್ಟ್, ಸ್ಟೇರಿಂಗ್ ಮೌಂಟೆಡ್ ಕಂಟ್ರೋಲ್, ಅದೇ ರೀತಿ ಎಲ್ಇಡಿ ಹೆಡ್ ಲ್ಯಾಂಪ್ ಗಳು ಮೊದಲಾದ ಸುಧಾರಿತ ವೈಶಿಷ್ಟ್ಯಗಳನ್ನು ಈ ಕಾರಿನಲ್ಲಿ ಪಡೆಯಬಹುದು.
ಮಾರುತಿ ಸುಜುಕಿ ಬ್ರೆಝಾ ಬೆಲೆ:
ಈ ಕಾರಿನ ಬೆಲೆ ವಿಚಾರಕ್ಕೆ ಬಂದರೆ ಕೈಗೆಟುಕುವ ದರದಲ್ಲಿ ನಿಮಗೆ ಉತ್ತಮವಾಗಿರುವ ಲಭ್ಯವಾಗುತ್ತದೆ. ಎಕ್ಸೆಸ್ ಶೋರೂಮ್ ಪ್ರಕಾರ ಇದರ ಆರಂಭಿಕ ಬೆಲೆ, 8.29 ಲಕ್ಷ ರೂಪಾಯಿಗಳು. ಎಕ್ಸ್ ಶೋ ರೂಂ ಪ್ರಕಾರ ಟಾಪ್ ಎಂಡ್ ಬೆಲೆ 14.14 ಲಕ್ಷ ರೂಪಾಯಿಗಳು ಆಗಬಹುದು.