Karnataka Times
Trending Stories, Viral News, Gossips & Everything in Kannada

Vehicle Purchase: ಏಪ್ರಿಲ್ 1 ರಿಂದ ವಾಹನ ಖರೀದಿ ಮಾಡುವವರಿಗೆ ಹೊಸ ರೂಲ್ಸ್

Advertisement

ಇತ್ತೀಚೆಗೆ ಪ್ರತಿಯೊಂದು ಮನೆಯಲ್ಲೂ ವಾಹನ (Vehicle) ಎಂಬುದು ಅಗತ್ಯ ಬಳಕೆಯ ಸಾಧನ, ಅದರಲ್ಲೂ ಮಾರುಕಟ್ಟೆಯಲ್ಲಿ ನೂತನ ಶೈಲಿಯ ವಾಹನಗಳು ಮಾರುಕಟ್ಟೆಗೆ ಬಂದಿವೆ, ಹೊಸ ವಾಹನಗಳು ಮಾರುಕಟ್ಟೆಗೆ ಬಂದಂತೆ ಜನರು ಕೂಡ ಖರೀದಿಸಲು ಮುಂದಾಗ್ತಾರೆ, ಆದರೆ ಹೊಸ ವಾಹನ ಖರೀದಿ ಮಾಡುವವರಿಗೆ ಹೊಸ ನಿಯಮ ವೊಂದು ಜಾರಿಗೆ ಬಂದಿದೆ, ಏನು ಆ ನಿಯಮ ಇಲ್ಲಿದೆ ಮಾಹಿತಿ

Number Plateಹಾಕಿಸುವುದು ಕಡ್ಡಾಯ:

ಸಾಮಾನ್ಯವಾಗಿ ಹೊಸ ವಾಹನ (New Vehicle) ಖರೀದಿಸುವಾಗ ಹಣ ಪಾವತಿ ಮಾಡಿ ನೋಂದಣಿ ಮಾಡಿಕೊಳ್ಳುತ್ತಾರೆ, ನಂಬರ್‌ ಪ್ಲೇಟ್‌ ಬರುವ ಮುಂಚೆಯೇ ಡೆಲಿವರಿ ತೆಗೆದುಕೊಳ್ಳುತ್ತಾರೆ. ವಾಹನ ಮನೆಗೆ ತೆಗೆದುಕೊಂಡು ಹೋಗಿ ನಂಬರ್ ಆಗದೆ ಚಲಾವಣೆ ಕೂಡ ಮಾಡ್ತಾರೆ, ಆದರೆ ಈ ರೂಢಿಗೆ ಬ್ರೇಕ್‌ ಬೀಳಲಿದೆ. ಇನ್ನು ಮುಂದೆ ಹೊಸ ವಾಹನ ಖರೀದಿಸುವ ಸಂದರ್ಭದಲ್ಲಿ ನೋಂದಣಿ ಸಂಖ್ಯೆಯನ್ನು ಕಡ್ಡಾಯವಾಗಿ ಅಳವಡಿಸಬೇಕು. ಎಂದು ಹೊಸ ನಿಯಮವನ್ನು ಜಾರಿಗೆ ತಂದಿದೆ

New Rule Of Central Govt:

ಕೇಂದ್ರ ಸರ್ಕಾರ (State Government) ಈ ನಿಯಮ ಜಾರಿಗೆ ತಂದಿದೆ, ಸ್ವಂತ ವಾಹನ, ಗೂಡ್ಸ್‌ ವಾಹನ ಇರುವವರಿಗೆ ಇದು ನಿಯಮ ಅನ್ವಯಿಸುತ್ತದೆ. ವಾಹನ ಖರೀದಿಸುವಾಗ ವಾಹನ ಸಂಖ್ಯೆ ಅಳವಡಿಸಿರಲೇಸಬೇಕು ಎಂದು ಕೇಂದ್ರ ಸರ್ಕಾರ ಈ ನಿಯಮ ಪರಿಚಯಿಸಿದೆ. ಹೊಸ ವಾಹನ ನೋಂದಣಿಯಾದರೂ ಸಹ ನಂಬರ್‌ ಪ್ಲೇಟ್‌ (Number Plate) ಹಾಕದೇ ಗ್ರಾಹಕರು ವಾಹನವನ್ನು ಮನೆಗೆ ತೆಗೆದುಕೊಂಡು ಹೋಗುವಂತಿಲ್ಲ, ಎಲ್ಲಾ ವಾಹನ ಗಳಾದ ಕಾರು, ಟ್ರಕ್‌, ಮತ್ತು ಮೋಟಾರ್‌ ಸೈಕಲ್‌ಗಳಂತಹ ರಸ್ತೆ ವಾಹನಗಳಿಗೆ ನೋಂದಣಿ ಫಲಕಗಳು ಬಹಳ ಅಗತ್ಯವಿರುತ್ತದೆ

ಹೊಸ ವಾಹನಗಳ ರಿಜಿಸ್ಟರ್ Online ಮೂಲಕ ಮಾಡಿ:

ಹೊಸ ವಾಹನಗಳ (New Vehicle) ರಿಜಿಸ್ಟರ್ ಮಾಡಿಸಲು ಆರ್​ಟಿಒ (RTO) ಆಫೀಸಿಗೆ ಹೋಗಬೇಕಾಗಿಲ್ಲ . ಆನ್​ಲೈನ್ (Online) ಮೂಲಕ ನಡೆಯಬಹುದು, ಸುಲಭವಾಗಿ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಸ ಬಹುದಾಗಿದೆ, ಇನ್ನು ಹೊಸ ಸರ್ಕಾರಿ ವಾಹನ (Government Vehicle) ಖರೀದಿಗೆ ಆರ್ಥಿಕ ಮಿತಿ ಪರಿಷ್ಕರಿಸಿ ಸರ್ಕಾರ ಆದೇಶ ಕೂಡ ಹೊರಡಿಸಿದೆ. ಏಕೆಂದರೆ, ಖಾಸಗಿ ಕಾರ್‌ಗಳ ಮೇಲೆ Government Of India ಎಂಬ ಸ್ಟಿಕ್ಕರ್ ಅಂಟಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಆದೇಶ ಮಾಡುವ ಸಾಧ್ಯತೆ ಇದೆ. ಹೀಗಾಗಿ ಯಾವತ್ತು ಹೊಸ ನಿಯಮ ಬರಲಿದೆ ಹೇಳಲಾಗದು.

Leave A Reply

Your email address will not be published.