Salman Khan: ಕನ್ನಡತಿಯ ಪ್ರೀತಿಗೆ ಬಿದ್ರಾ ಬಾಲಿವುಡ್ ನ ಮೆಗಾಸ್ಟಾರ್ ನಟ ಸಲ್ಮಾನ್ ಖಾನ್!
ಬಾಲಿವುಡ್ ಚಿತ್ರರಂಗದ ಮೆಗಾಸ್ಟಾರ್ ಆಗಿರುವಂತಹ ಸಲ್ಮಾನ್ ಖಾನ್(Salman Khan) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಯಾರಿಗೂ ಜಗ್ಗದ ಯಾರಿಗೂ ಬಗ್ಗದ ಆಟಿಟ್ಯೂಡ್ ಹೊಂದಿದ್ದಾರೆ. ಇದಕ್ಕಾಗಿಯೇ ಅವರನ್ನು ಪ್ರತಿಯೊಬ್ಬರು ಕೂಡ ಇಷ್ಟ ಪಡೋದು. ಅತ್ಯಂತ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವಂತಹ ಮೆಗಾಸ್ಟಾರ್ ಸಲ್ಮಾನ್ ಖಾನ್ ಅವರ ಕಿಸಿಕ ಭಾಯ್ ಕಿಸಿಕ ಜಾನ್(Kisi Ka Bhai Kisi Ka Jaan) ಸಿನಿಮಾ ಅತಿ ಶೀಘ್ರದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಿದ್ಧತೆಯನ್ನು ನಡೆಸಿಕೊಳ್ಳುತ್ತಿದೆ.
ಇನ್ನು ಈ ಸಿನಿಮಾದ ಮುನ್ನವೇ ಬಾಲಿವುಡ್ ಚಿತ್ರರಂಗದ ಬ್ಯಾಡ್ ಬಾಯ್ ಸಲ್ಲು ಕರ್ನಾಟಕ ಮೂಲದ ನಟಿಯೊಬ್ಬರ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಸುದ್ದಿ ಕೇಳಿ ಬರುತ್ತಿದೆ. ಈ ಹಿಂದೆ ನಿಮಗೆಲ್ಲರಿಗೂ ತಿಳಿದಿರಬಹುದು ಮಂಗಳೂರು ಮೂಲದ ಐಶ್ವರ್ಯ ರೈ(Aishwarya Rai) ಅವರ ಪ್ರೀತಿಯಲ್ಲಿ ಬಿದ್ದು ನಂತರ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಿಬಂದು ಇಬ್ಬರು ಕೂಡ ಬ್ರೇಕಪ್ ಮಾಡಿಕೊಂಡಿದ್ದರು. ಇದಾದ ನಂತರ ಕತ್ರಿನಾ ಕೈಫ್ ಸೇರಿದಂತೆ ಹಲವಾರು ನಟಿಯರ ಜೊತೆಗೆ ಸಲ್ಮಾನ್ ಖಾನ್ ಅವರ ಹೆಸರು ಕೇಳಿ ಬಂದಿತ್ತಾದರೂ ಕೂಡ ಅವೆಲ್ಲಾ ಹೇಳ ಹೆಸರಿಲ್ಲದಂತೆ ಮಾಯವಾಗಿ ಹೋಗಿದೆ.
ಆದರೆ ಈಗ ಮತ್ತೆ ಸಲ್ಲು ಭಾಯ್ ಕರ್ನಾಟಕ ಮೂಲದ ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿ ಆಗಿರುವ ಪೂಜಾ ಹೆಗ್ಡೆ(Pooja Hegde) ಅವರ ಜೊತೆಗೆ ಸುದ್ದಿಯಲ್ಲಿದ್ದಾರೆ. ಈ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಈ ಜೋಡಿ ಸಿನಿಮಗಿಂತಲೂ ಹೆಚ್ಚಾಗಿ ವೈಯಕ್ತಿಕವಾಗಿ ಭೇಟಿಯಾಗುವ ಮೂಲಕ ಈ ಸುದ್ದಿಗೆ ಕಾರಣೀಕರ್ತರಾಗಿದ್ದಾರೆ. ಹೀಗಾಗಿ ಸಲ್ಲುಭಾಯ್ ಕರ್ನಾಟಕದ ಈ ಬ್ಯೂಟಿಯ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬುದಾಗಿ ಸುದ್ದಿಯಲ್ಲಿದೆ.
ಇತ್ತೀಚಿಗಷ್ಟೇ ಪೂಜಾ ಹೆಗ್ಡೆ(Pooja Hegde) ಅವರ ಸಹೋದರನ ಮದುವೆಗೆ ಮಂಗಳೂರಿಗೆ ಕೂಡ ಬಂದು ಹೋಗಿರುವ ಸಲ್ಮಾನ್ ಖಾನ್ ಈ ಅನುಮಾನಗಳನ್ನು ಇನ್ನಷ್ಟು ಬಲವಾಗುವಂತೆ ಮಾಡಿದ್ದಾರೆ. ಈ ಕುರಿತಂತೆ ಇಬ್ಬರು ಕೂಡ ಯಾವುದೇ ಗುಟ್ಟನ್ನು ಬಿಟ್ಟು ಕೊಟ್ಟಿಲ್ಲ ಆದರೂ ಕೂಡ ಮಾಧ್ಯಮಗಳೆದರು ನಡೆಯುತ್ತಿರುವ ಈ ಘಟನಾವಳಿಗಳನ್ನು ನೋಡಿ ನಾವೇ ಅಂದಾಜಿಸಿಕೊಳ್ಳಬಹುದಾಗಿದೆ.