Rashmika Mandanna: ಕಲ್ಯಾಣ್ ಜುವೆಲರ್ಸ್ ರಾಯಭಾರಿಯಾಗಿ ನ್ಯಾಷನಲ್ ಕ್ರಶ್ ರಶ್ಮಿಕಾ ಪಡೆದ ಸಂಭಾವನೆ ಎಷ್ಟು?

Advertisement
ನಟಿ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika mandana) ಅವರು ಈಗ ಸಿನೆಮಾ ಮಾತ್ರವಲ್ಲದೆ ಜಾಹಿರಾತು ರಂಗದಲ್ಲೂ ಮಿಂಚಿದ್ದಾರೆ. ಈ ಮೂಲಕ ರಶ್ಮಿಕಾ ಅವರು ಇದೀಗ ಹೊಸ ಕಂಪೆನಿಯೊಂದಿಗೆ ಟೈ ಅಪ್ ಮಾಡಿಕೊಂಡು ನೂತನ ಜಾಹಿರಾತಿನ ಮೂಲಕ ಬ್ರ್ಯಾಂಡ್ ಅಂಬಾಸಿಡರ್ (Brand Ambasider) ಆಗಿ ಆಯ್ಕೆಯಾಗಿದ್ದಾರೆ. ಈಮೂಲಕ ಕೊಡಗಿನ ಕುವರಿಗೆ ಅದೃಷ್ಟ ಬರ್ಜರಿಯಾಗೇ ಬಂದಿದೆ.
ಚಿನ್ನದ ಅದೃಷ್ಟ:
ರಶ್ಮಿಕಾ ಈಗಾಗಲೇ ಕೋಲ್ಡಿಂಗ್ಸ್, ಅಗೋಡ (Agoda) ಸೇರಿದಂತೆ ಇನ್ನು ಅನೇಕ ಜಾಹಿರಾತಿನಲ್ಲಿ ಅಭಿನಯಿಸಿದ್ದಾರೆ ಹಿಂದೆ ಕಝಾನ ಗೋಲ್ಡ್ ಜಾಹಿರಾತಿನಲ್ಲಿ ಅಭಿನಯಿಸಿದ್ದರು. ಈ ಮೂಲಕ ಈಗ ಆ ಕಾಂಟ್ರಾಕ್ಟ್ ಮುಗಿದ ಕಾರಣ ಕಲ್ಯಾಣ್ ಜುವೆಲರ್ಸ್ ನ (Kalyan jwelers) ಬ್ರ್ಯಾಂಡ್ ಅಂಬಾಸಿಡರ್ ಆಗಿ ರಶ್ಮಿಕಾ ಮಿಂಚುತ್ತಿದ್ದಾರೆ. ಬಿಗ್ ಬಿ ಅಮಿತಾ ಬಚ್ಚನ್ (Amitha bachan) ಹ್ಯಾಟ್ರಿಕ್ ಹೀರೋ ಶಿವರಾಜ ಕುಮಾರ್ (Shivarajkumar) ಇನ್ನು ಅನೇಕ ನಟರು ಇದೇ ಜಾಹಿರಾತಿನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಆಗಿದ್ದು ಈಗ ರಶ್ಮಿಕಾ ಅವರು ಕಲ್ಯಾಣ್ ಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಕನ್ನಡ , ತೆಲುಗು , ತಮಿಳಿನ ದಕ್ಷಿಣ ಭಾರತದ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಆಗಿದ್ದಾರೆ.
ಯಾರೆಲ್ಲ ನಟ ನಟಿಯರಿದ್ದಾರೆ:
ಭಾರತದ ಹೆಸರಾಂತ ಚಿನ್ನದ ಮಳಿಗೆಯಾದ ಕಲ್ಯಾಣ್ ಜುವೆಲರ್ಸ್ (Kalyan Jewellers) ಗ್ರಾಹಕರ ಹಿತದೃಷ್ಟಿಯಿಂದ ಹಲವಾರು ಯೋಜನೆ ಜಾರಿಗೆ ತಂದಿತ್ತು. ರಾಷ್ಟ್ರೀಯ ಮಟ್ಟದಲ್ಲಿ ಅಮಿತಾಬಚ್ಚನ್ (Amitabh Bachchan) ಅವರು ಜಾಗತಿಕ ರಾಯಭಾರಿ, ರಾಷ್ಟ್ರೀಯ ರಾಯಭಾರಿ ಆಗಿ ಕತ್ರಿನಾ ಕೈಫ್ ಇದ್ದಾರೆ. ಅದೇ ರೀತಿ ನಾಗಾರ್ಜುನ ಅವರು ಆಂಧ್ರ ಪ್ರದೇಶ, ತೆಲಂಗಾಣದ ರಾಯಭಾರಿ ಯಾಗಿದ್ದರು, ಕಲ್ಯಾಣಿ ಪ್ರಿಯದರ್ಶಿನಿ ಅವರು ಕೇರಳ, ಕರ್ನಾಟಕದ ರಾಯಭಾರಿ ಆಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ತಮಿಳುನಾಡಿನಲ್ಲಿ ಪ್ರಭು ಅವರು ಇದ್ದರು. ಈಗ ಈ ಸೆಲೆಬ್ರಿಟಿಗಳೊಂದಿಗೆ ನಟಿ ನ್ಯಾಷನಲ್ ಕ್ರಶ್ (National Crush) ರಶ್ಮಿಕಾ ಕೂಡ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಈ ಜಾಹಿರಾತಿನಲ್ಲಿ ಕಿರಿಕ್ ಬೆಡಗಿ ಶ್ರೀವಲ್ಲಿ ರಶ್ಮಿಕಾ ಅವರು ಟ್ರೆಡಿಶನಲ್ ಹಾಗೂ ಮಾಡರ್ನ್ ಲುಕ್ ನಲ್ಲಿ ಕಂಗೊಳಿಸಲಿದ್ದಾರೆ. ಈಗಾಗಲೇ ಜಾಹಿರಾತಿನ ಕೆಲವು ಪೊಸ್ಟರ್ ರೆಡಿಯಾಗಿದ್ದು ಸಿಕ್ಕಾಪಟ್ಟೆ ಟ್ರೆಂಡ್ ನಲ್ಲಿದೆ.
ಸಂಭಾವನೆ ಎಷ್ಟು:
ಪುಷ್ಪ (Pushpa) ಸಿನೆಮಾ ಯಶಸ್ಸಿನ ಬಳಿಕ ರಶ್ಮಿಕಾ ಅವರ ಸಂಭಾವನೆ ಎಲ್ಲರಂಗದಲ್ಲೂ ಹೆಚ್ಚಾಗಿದೆ. ಈ ಮೂಲಕ ಪ್ರತಿಷ್ಠಿತ ಕಂಪೆನಿ ಕಲ್ಯಾಣ್ ಜುವೆಲರ್ಸ್ (Kalyan Jewellers) ನಲ್ಲಿ ರಾಯಭಾರಿ ಆಗಿ ಜಾಹಿರಾತು ನೀಡಲು 4ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ ಆಗುತ್ತಿದೆ. ಈ ಮೂಲಕ ನಿಜಕ್ಕೂ ರಶ್ಮಿಕಾ ಎಷ್ಟು ಸಂಭಾವನೆ ಪಡೆದರು ಎಂದು ಅವರು ಎಲ್ಲಿಯೂ ಮಾಹಿತಿ ಬಿಟ್ಟುಕೊಡಲಿಲ್ಲ ಎನ್ನಬಹುದು.