Karnataka Times
Trending Stories, Viral News, Gossips & Everything in Kannada

Rashmika Mandanna: ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಕುಣಿಯೋದಕ್ಕೆ ರಶ್ಮಿಕ ಮಂದಣ್ಣ ಪಡೆದ ಸಂಭಾವನೆ ಇಷ್ಟು.

Advertisement

ಬಿಲಿಯನ್ ಡಾಲರ್ ಕ್ರಿಕೆಟ್ ಲೀಗ್ ಆಗಿರೋ ಐಪಿಎಲ್ ಈಗಾಗಲೇ ಪ್ರಾರಂಭವಾಗಿದ್ದು ಅದ್ದೂರಿಯಾದ ಆರಂಭವೇ ಸಿಕ್ಕಿದೆ ಎಂದು ಹೇಳಬಹುದಾಗಿತ್ತು. ಮೊದಲ ಪಂದ್ಯವೇ ಭರ್ಜರಿ 1.30 ಲಕ್ಷಕ್ಕೂ ಅಧಿಕ ಜನರ ಸಮ್ಮುಖದಲ್ಲಿ ನಡೆದಿದ್ದು ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿ ಸೆಣೆಸಾಡಿ ಹಾರ್ದಿಕ್ ಪಾಂಡ್ಯ(Hardik pandya) ನೇತೃತ್ವದ ಗುಜರಾತ್ ಟೈಟನ್ಸ್ ತಂಡ ಕೊನೆಯ ಓವರ್ ನ ರೋಚಕ ಪಂದ್ಯದಲ್ಲಿ ಗೆದ್ದಿದೆ.

ಒಟ್ಟಾರೆ ಈ ಬಾರಿ ಐಪಿಎಲ್ ಸಾಕಷ್ಟು ಅದ್ದೂರಿಯಾಗಿ ಕಾಣಿಸಿಕೊಳ್ಳಲಿರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಇನ್ನು ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರವ ನೀಡಲು ಸೆಲೆಬ್ರಿಟಿಗಳ ಹರಿವು ಕೂಡ ಬಂದಿತ್ತು. ಅದರಲ್ಲೂ ವಿಶೇಷವಾಗಿ ನಮ್ಮ ಕನ್ನಡ ಮೂಲದ ರಶ್ಮಿಕ ಮಂದಣ್ಣ(Rashmika Mandanna) ಅವರ ಡ್ಯಾನ್ಸ್ ಪರ್ಫಾರ್ಮೆನ್ಸ್ ಕೂಡ ಐಪಿಎಲ್(IPL) ಉದ್ಘಾಟನೆಯಲ್ಲಿ ಎಲ್ಲರ ಮನಸ್ಸನ್ನು ಗೆಲ್ಲಲು ಯಶಸ್ವಿಯಾಯಿತು.

ಸಿನಿಮಾದಲ್ಲಿ ನಟನೆಯ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದ ರಶ್ಮಿಕ ಈಗ ಗುಜರಾತಿನ ನರೇಂದ್ರ ಮೋದಿ ಸ್ಟೇಡಿಯಂ(Narendra Modi Stadium) ನಲ್ಲಿ ಐಪಿಎಲ್ ಉದ್ಘಾಟನೆಯಲ್ಲಿ ಸೊಂಟ ಬೆಳೆಸಿಸುವ ಮೂಲಕ ಎಲ್ಲರ ಮನಸ್ಸನ್ನು ಕೂಡ ಗೆದ್ದಿದ್ದಾರೆ. ಇನ್ನು ಇದಕ್ಕಾಗಿ ಅವರು ಪಡೆದುಕೊಂಡಿರುವ ಸಂಭಾವನೆ ಕೇಳಿದರೆ ನೀವು ಕೂಡ ಬೆರಗಾಗ್ತೀರಾ.

ಹೌದು ಮಿತ್ರರೇ, ರಶ್ಮಿಕ ಮಂದಣ್ಣ ಈ ಬಾರಿಯ ಐಪಿಎಲ್ 2023ರ ಉದ್ಘಾಟನಾ ಕಾರ್ಯಕ್ರಮದ ಪರ್ಫಾರ್ಮೆನ್ಸ್ ಗಾಗಿ ಭರ್ಜರಿ ಎರಡು ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಮೂಲಕ ಕೇವಲ ನಟನೆಯ ಸಂಭಾವನೆಯ ವಿಚಾರದಲ್ಲಿ ಮಾತ್ರವಲ್ಲದೆ ಈ ರೀತಿಯ ವಿಶೇಷ ಕಾರ್ಯಕ್ರಮಗಳ ಪರ್ಫಾರ್ಮೆನ್ಸ್ ಸಂಭಾವನೆಯ ವಿಚಾರದಲ್ಲಿ ಕೂಡ ರಶ್ಮಿಕ ಮಂದಣ್ಣ(Rashmika Mandanna) ಸಾಕಷ್ಟು ಬೇಡಿಕೆಯನ್ನು ಹೊಂದಿದ್ದಾರೆ ಎಂದು ಹೇಳಬಹುದಾಗಿದೆ. ರಶ್ಮಿಕ ಮಂದಣ್ಣ ಅವರ ಐಪಿಎಲ್ ಪರ್ಫಾರ್ಮೆನ್ಸ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave A Reply

Your email address will not be published.