DBoss: ರಕ್ಷಿತಾ ಪ್ರೇಮ್ ಹುಟ್ಟುಹಬ್ಬಕ್ಕೆ ಊಹಿಸದ ಗಿಫ್ಟ್ ಕೊಟ್ಟ ಡಿಬಾಸ್

Advertisement
ಕನ್ನಡ ಚಿತ್ರರಂಗದಲ್ಲಿ (KFI) ಕ್ರೇಜಿ ಕ್ವೀನ್ (Crazy Queen) ಎಂದೇ ಖ್ಯಾತಿ ಪಡೆದು ದಶಕಗಳ ಕಾಲ ಚಿತ್ರರಂಗದಲ್ಲಿ (Film Industry) ತಮ್ಮದೇ ಆದ ಛಾಪು ಮೂಡಿಸಿದ್ದ ನಟಿ ಎಂದರೆ ರಕ್ಷಿತಾ (Rakshitha) ರವರು. ಹೌದು ಕನ್ನಡತಿಯೇ ಆಗಿರುವ ರಕ್ಷಿತಾ ಪವರ್ ಸ್ಟಾರ್ ಪುನೀತ್ (Puneeth Rajkumar) ರವರ ಅಪ್ಪು(Appu) ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದು ತಮ್ಮ ಮೊದಲ ಸಿನಿಮಾದಲ್ಲಿಯೇ (First Movie) ದೊಡ್ಡ ಯಶಸ್ಸು ಕಾಣುತ್ತಾರೆ. ಇನ್ನು ರಕ್ಷಿತಾ ರವರ ನಟನೆ ಸೌಂದರ್ಯ ಹಾಗೂ ಅವರ ಮುದ್ದು ಮುದ್ದು ಮಾತು ನೃತ್ಯ (Dance) ಧ್ವನಿ (Voice) ಎಲ್ಲದಕ್ಕೂ ಕೂಡ ಚಿತ್ರ ರಸಿಕರು ಫುಲ್ ಮಾರ್ಕ್ಸ್ ನೀಡಿದರು. ತದನಂತರ ನಟಿ ರಕ್ಷಿತಾ ಹಿಂತಿರುಗಿ ನೋಡಿದ್ದೇ ಇಲ್ಲ.. ಹಳ್ಳಿ ಹುಡುಗಿ ಪಾತ್ರದಿಂದ ಹಿಡಿದು ಬಜಾರಿ ಬಬ್ಲಿ ಬೋಲ್ಡ್ ಹೀಗೇ ಎಲ್ಲಾ ರೀತಿಯಾ ಪಾತ್ರದಲ್ಲೂ ಮಿಂಚುತ್ತಿದ್ದರು.
ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ರಕ್ಷಿತಾ:
ಹೌದು ಅಪ್ಪು ಸಿನಿಮಾದ ಯಶಸ್ಸಿನ ನಂತರ ಉತ್ತುಂಗಕ್ಕೇರಿದ ನಟಿ ರಕ್ಷಿತಾ ಕೇವಲ ಕನ್ನಡ ಮಾತ್ರವಲ್ಲದೆ ಪರ ಭಾಷೆಗಳಲ್ಲಿ ಸಹ ಬಾರಿ ಬೇಡಿಕೆ ಪಡೆದುಕೊಂಡಿದ್ದರು. ಕನ್ನಡ (Kannada) ಸೇರಿದಂತೆ ತೆಲುಗು ತಮಿಳು (Telugu & Tamil) ಚಿತ್ರರಂಗದಲ್ಲಿ ಸಾಕಷ್ಟು ಬ್ಯೂಸಿಯಾಗಿಬಿಟ್ಟ ರಕ್ಷಿತಾ ರವರು ವಿಷ್ಣುವರ್ಧನ್ (Vishnuvardhan) ರವರಿಂದ ಹಿಡಿದು ದರ್ಶನ್ (Darshan) ಸುದೀಪ್ (Sudeep) ಶಿವರಾಜ್‌ಕುಮಾರ್ (Shivarajkumar) ಪುನೀತ್ ರಾಜಕುಮಾರ್ (Puneeth Rajkumar) ತಮಿಳು ನಟ ವಿಜಯ್ (Vijay) ಹೀಗೆ ಬಹುತೇಕ ಎಲ್ಲಾ ನಟರ ಜೊತೆ ನಟಿಸಿ ಅತೀ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿದ್ದ ನಟಿ ಎಂಬ ಖ್ಯಾತಿ ಕೂಡ ಪಡೆದುಕೊಂಡರು.
ರಕ್ಷಿತಾ ಸಿನಿಮಾದಿಂದ ದೂರ ಉಳಿಯಲು ಕಾರಣ ಏನು ಗೊತ್ತಾ?
ದಶಕಗಳ ಕಾಲ ಚಿತ್ರರಂಗವಾಳಿದ ನಟಿ ರಕ್ಷಿತಾ ಒಂದು ಕಾಯಿಲೆಗೆ ತುತ್ತಾಗಿ ಹೂದುಬಿಡುತ್ತಾರೆ. ಈ ನಡುವೆ ಖ್ಯಾತ ಕನ್ನಡ ನಿರ್ದೇಶಕ ಪ್ರೇಮ್ (Pream) ರವರನ್ನು ಪ್ರೀತಿಸಿ ಮದುವೆಯಾದ ನಂತರ ಸಿನಿಮಾ ರಂಗದಿಂದ ಸಂಪೂರ್ಣವಾಗಿ ದೂರ ಉಳಿದುಬಿಟ್ಟಿದ್ದಾರೆ. ಸದ್ಯ ನಟಿ ರಕ್ಷಿತಾ ಪ್ರೇಮ್ ರವರು ಮತ್ತೆ ಸಿನಿಮಾರಂಗಕ್ಕೆ ಯಾವಾಗ ಕಮ್ ಬ್ಯಾಕ್ ಮಾಡುತ್ತಾರೆ ಎಂದು ಅಭಿಮಾನಿಗಳು ಈಗಲೂ ಕೂಡ ಕಾತುರದಿಂದ ಕಾದು ಕುಳಿತ್ತಿದ್ದಾರೆ. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದು ಇನ್ನು ನಟಿ ರಕ್ಷಿತಾ ಪ್ರೇಮ್ ಅವರು ಮತ್ತೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಅನೇಕ ಬಾರಿ ಹೇಳಿದ್ದಾರೆ.
Rakshita Prem ಗೆ ದರ್ಶನ್ ನೀಡಿದ ದುಬಾರು ಉಡುಗೊರೆ ಏನು?
ಇನ್ನು ಇತ್ತೀಚೆಗೆ ನಟಿ ರಕ್ಷಿತಾ ಅವರು ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಸಂಭ್ರಮದಿಂದ ಆಚರಿಸಿಕೊಂಡಿದ್ದರು. ಇನ್ನು ರಕ್ಷಿತಾ ರವರ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಸಿನಿಮಾರಂಗದ ಅನೇಕ ನಟ ನಟಿಯರು ಕೂಡ ಭಾಗಿಯಾಗಿದ್ದು ಇದೀಗ ನಟಿ ರಕ್ಷಿತಾ ಪ್ರೇಮ್ ಅವರ ಹುಟ್ಟುಹಬ್ಬಕ್ಕೆ ಅವರ ಆತ್ಮೀಯ ಸ್ನೇಹಿತರಾದ ನಟ ಡಿ ಬಾಸ್ ದರ್ಶನ್ ಅವರು ಬರ್ಜರಿ ಉಡುಗೊರೆಯನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ಹೌದು ನಟಿ ರಕ್ಷಿತಾ ಅವರ ಹುಟ್ಟುಹಬ್ಬಕ್ಕೆ ನಟ ದರ್ಶನ್ ಅವರು ರಕ್ಷಿತಾ ಅವರಿಗೆ ಸುಮಾರು 2 ರಿಂದ 3 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರಂತೆ. ಸದ್ಯ ವಿಚಾರ ವೈರಲ್ ಆಗುತ್ತಿದೆ