Nagarjuna: ಮಾಜಿ ಸೊಸೆ ಸಮಂತಾಗೆ ಸದ್ದಿಲ್ಲದೆ ಆಘಾತ ನೀಡಿದ ನಾಗಾರ್ಜುನ, ಹೊಸ ತಿರುವು

Advertisement
ನಟಿ ಸಮಂತಾ (Samantha) ಅವರು ಒಂದು ಕಾಲದಲ್ಲಿ ತೆಲುಗು ಚಿತ್ರರಂಗವನ್ನು (Telugu Filim Industry) ಆಳಿದ್ದ ನಟಿ ಎನ್ನಬಹುದು. ಸದ್ಯ ಈಗಲೂ ಕೂಡ ಸಿನಿಮಾಗಳಲ್ಲಿ ಬ್ಯೂಸಿ ಇರುವ ಸಮಂತಾ ಅಪಾರ ಜನಪ್ರಿಯತೆಯನ್ನು ಪಡೆದುಕೊಂಡು ದಕ್ಷಿಣ ಭಾರತ ಚಿತ್ರಪ್ರೇಮೆಗಳ ಪಟ್ಟದರಸಿ ಆಗಿದ್ದಾರೆ. ಪ್ರತಿಯೊಬ್ಬರಿಗೂ ಕೂಡ ನೆಚ್ಚಿನ ನಟಿ (Heroine) ಮತ್ತು ಕ್ರಶ್ (Crush) ಆಗಿದ್ದ ಸಮಾಂತಾರ ಕ್ಯೂಟ್ ನಗು ಜೇನು ತುಟಿಗಳು ಹಾಲ್ಕೋವಾ ಅಂತಹ ಕೆನ್ನೆ ಕತ್ತಿಯಂತೆ ಚೋಪಾಗಿದ್ದ ಕಣ್ಣು ಬಳುಕುವ ಸೊಂಟ ಹಾಗೂ ಮೈಮಾಟಕ್ಕೆ ಪಡ್ಡೆ ಪಡ್ಡೆ ಹೈಕ್ಳು ಫಿದಾ ಆಗಿದ್ದವರೆ. ಅಲ್ಲದೇ ತಮ್ಮ ಬಾಳಸಂಗಾತಿಯಾಗಿ ಬರುವವಳು ಈ ರೀತಿ ಬಬ್ಲಿ (Bubbly) ಬಬ್ಲಿಯಾಗಿರಬೇಕು ಎಂದು ಕನಸು ಕಾಣುತ್ತಿದ್ದರು.
ಸಮಂತಾ ವಿಚ್ಛೇದನಕ್ಕೆ ಅಸಲಿಕಾರಣ ಇದೇನಾ:
ಸಿನಿಮಾದಲ್ಲಿ ಬ್ಯೂಸಿ ಇರುವಾಗಲೇ ಖ್ಯಾತ ನಟ ನಾಗರ್ಜುನ (Nagarjuna) ಅವರ ಮಗ ನಾಗಚೈತನ್ಯ (Naga Chaitanya) ರವರನ್ನು ಪ್ರೀತಿಸಿ ವಿವಾಹವಾದ ಸಮಂತಾ ಸಾಕಷ್ಟು ವರುಷ ದಾಂಪತ್ಯ ಜೀವನದಲ್ಲಿ ನೆಮ್ಮದಿಯಾಗಿದ್ದರು. ನಾಗಚೈತನ್ಯ ಹಾಗು ಸಮಂತಾ ಸಾಕಷ್ಟು ಸಿನಿಮಾದಲ್ಲಿ ಒಟ್ಟಿಗೆ ಕೂಡ ನಟಿಸಿದ್ದು ಈ ಜೋಡಿ ಚಿತ್ರರಂಗದ ಟಾಪ್ ಒನ್ ಜೋಡಿ ಆಗುವುದರ ಜೊತೆಗೆ ಎಲ್ಲ ಫೇವರೇಟ್ ಆಗಿದ್ದರು. ಆದರೆ ಇದ್ದಕಿದ್ದಂತೆ ಸುಳಿವೇ ನೀಡಿದಂತೆ ವಿಚ್ಛೇದನ ಪಡೆದುಕೊಂಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಚಾರ ತಿಳಿಸಿದ್ದು ಎಲ್ಲರೂ ಶಾಕ್ ಆದರು. ಸಮಂತಾ ವೆಬ್ ಸೀರೀಸ್ ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಹಾಗೂ ಮಗುವಿಗೆ ತಡ ಮಾಡುತ್ತಿರುವ ಕಾರಣ ನಾಗಚೈತನ್ಯ ಜೊತೆ ಭಿನ್ನಾಭಿಪ್ರಾಯ ಮೂಡಿ ವಿಚ್ಛೇದನ ಪಡೆದರು ಎನ್ನಲಾಗಿದೆ. ಆದರೆ ಈ ಸುದ್ದಿ ಎಷ್ಟು ನಿಜ ಎಷ್ಟು ಸುಳ್ಳು ಹೇಳಲಾಗುವುದಿಲ್ಲ.
ಸಮಂತಾಗೆ ವಾಯ್ಸ್ ಕೊಡುತ್ತಿದ್ದವರು ಯಾರು ಗೊತ್ತಾ?
ನಟಿ ಸಮಂತಾ ರವರು ವಿಚ್ಛೇದನ ಬಳಿಕ ಸಾಕಷ್ಟು ಸಿನಿಮಾಗಳ ಮೇಲೆ ಗಮನ ಹರಿಸಿದ್ದು ಬಾಲಿವುಡ್ ಟಾಲಿವುಡ್ ಹೀಗೆ ಎಲ್ಲಾ ಕಡೆ ಕೂಡ ಸಖತ್ ಬ್ಯುಸಿ ಆಗಿದ್ದಾರೆ . ಇನ್ನು ಇದೇ ತಿಂಗಳು ಏಪ್ರಿಲ್ 14ರಂದು ಸಮಂತಾ ರವರು ನಟಿಸಿರುವ ಶಾಕುಂತಲಂ ಚಿತ್ರ ಬಿಡುಗಡೆ ಆಗುತ್ತಿದ್ದೆ. ಇನ್ನು ಸಮಂತಾ ಅವರು ಈ ಮಟ್ಟಕ್ಕೆ ಹೆಸರು ಮಾಡಲು ಅವರಿಗೆ ವಾಯ್ಸ್ (Dubbing) ನೀಡುತ್ತಿದ್ದ ಗಾಯಕಿ ಚಿನ್ಮಯಿ (Chinmayi) ರವರ ಪಾತ್ರ ಕೂಡ ದೊಡ್ಡದಿದೆ. ತೆಲುಗಿನಲ್ಲಿ ಸಮಂತಾ ಅವರ ಎಲ್ಲಾ ಸಿನಿಮಾಗಳಿಗೂ ಕೂಡ ಚಿನ್ಮಯಿ ಅವರೇ ಡಬ್ ಮಾಡುತ್ತಿದ್ದರು.
ಚಿನ್ಮಯಿ ಸಮಂತಾಗೆ ಡಬ್ಬಿಂಗ್ ನಿಲ್ಲಸಲು ನಾಗರ್ಜುನ ಕೈವಾಡ?
ಸದ್ಯ ಇದೀಗ ಚಿನ್ಮಯಿ ಶಾಕಿಂಗ್ ಹೇಳಿಕೆ ಕೊಟ್ಟಿದ್ದು ಸಮಂತಾ ತೆಲುಗಿನಲ್ಲಿ ಚೆನ್ನಾಗಿ ಮಾತನಾಡುತ್ತಾರೆ.ಸದ್ಯ ಸಮಂತಾ ಅವರಿಗೆ ಈಗ ಡಬ್ಬಿಂಗ್ ಅವಶ್ಯಕತೆ ಇಲ್ಲ ಎಂದಿದ್ದಾರೆ. ಆದರೆ ಈ ಮಾತಿಗೆ ಕಾರಣ ನಾಗಾರ್ಜುನ ಅವರು ಎನ್ನಲಾಗುತ್ತಿದೆ. ಚಿನ್ಮಯಿ ಅವರ ಪತಿ ರಾಹುಲ್ ಅವರು ನಾಗಾರ್ಜುನ ಅವರ ಆಪ್ತರಾಗಿದ್ದು ಇಬ್ಬರು ನಟನೆ ಕೂಡ ಮಾಡಿದ್ದಾರೆ. ಆದ್ದರಿಂದ ನಾಗಾರ್ಜುನ ಅವರಿಗೆ ರಾಹುಲ್ ಅವರ ಪತ್ನಿ ಸಮಂತಾ ಜೊತೆ ಇರುವುದು ಇಷ್ಟವಿಲ್ಲ ಎನ್ನಲಾಗಿದ್ದು ಆ ಕಾರಣಕ್ಕೆ ರಾಹುಲ್ ರವರು ಪತ್ನಿ ಚಿನ್ಮಯಿ ಅವರಿಗೆ ಈ ವಿಚಾರ ತಿಳಿಸಿರುವ ಕಾರಣ ಇನ್ನು ಮುಂದೆ ಸಮಂತಾ ಅವರಿಗೆ ಡಬ್ ಮಾಡುವುದಿಲ್ಲ ಎಂದಿದ್ದಾರಂತೆ ಎಂಬ ವಿಚಾರ ಇದೀಗ ಹೊರಬಂದಿದೆ.