ಮಗಳು ಹಬ್ಬಕ್ಕೆ (Festival) ಬರುವುದಿಲ್ಲ ಎಂದು ತಿಳಿದ ಪುಟ್ಟಕ್ಕ (Puttakka) ಬಹಳಾನೇ ಬೇಸಗೊಂಡಿದ್ದಾರೆ. ಇನ್ನು ಪುಟ್ಟಕ್ಕನಿಗೆ ತನ್ನ ಇಬ್ಬರು ಮಕ್ಕಳನ್ನು (Daughters) ಸಂತೈಸುವುದು ಬಹಳ ಕಷ್ಟಕರವಾಗಿದ್ದು ಹಾಗೇಯೇ ಸಹನಾ (Sahana) ಆಗಮನಕ್ಕಾಗಿ ಕಾದು ಕುಳಿತಿದ್ದಾರೆ. ಇತ್ತ ಸ್ನೇಹಾಗೆ (Sneha) ಚಂದ್ರು ಮನೆಗೆ (Chandru’s Home) ಬಂದಿರುವುದು ಸಂತಸ ನೀಡುತ್ತದೆ .
ಅತ್ತ ಕಂಠಿಯ (Kanti) ನಡವಳಿಕೆ ಕಂಡಂತಹ ಬಂಗಾರಮ್ಮ (Bangaramma) ಬಹಳಾನೇ ತಬ್ಬಿಬ್ಬಾಗಿದ್ದು ಮುಂಜಾನೆಯೇ (Morning) ಎದ್ದು ಹೊರಟು ಬರುತ್ತಾನೆ ಕಂಠಿ. ಇನ್ನು ಬಂಗಾರಮ್ಮ ಕಂಠಿ ಮೊಬೈಲ್ ಗೆ (Mobile) ಚಂದ್ರು ಕರೆ ಮಾಡಿದ್ದನ್ನ ಸ್ವೀಕರಿಸಿದ್ದು ಹೆಣ್ಣಿನ ಧ್ವನಿ ಕೇಳಿ ಬೆಚ್ಚಿ ಬಿದ್ದಿರುತ್ತಾಳೆ. ವಸು (Vasu) ಅಣ್ಣನ ಬಳಿ ಯಾರು ಕರೆ (Call) ಮಾಡಿರಬಹುದು ಎಂದು ಅಮ್ಮ ಯೋಚನೆ ಮಾಡುತ್ತಿದ್ದಾರೆ ಎಂದು ಹೇಳಿದ್ದು ಇದನ್ನು ಕೇಳಿದ ಕಂಠಿ ಗೆ ಕೊಂಚ ಗಾಬರಿಯಾಗುತ್ತಾನೆ.
ಬಂಗಾರಮ್ಮನಿಗೆ ಬೈರನ ಕರೆ..
ಸದ್ಯ ತಾಯಿಗೆ ಏನೇನೋ ಕಥೆಗಳನ್ನ ಹೇಳಿ ಹೊರ ಹೋಗುವಷ್ಟರಲ್ಲಿ ಬೈರನ ಕರೆ ಬಂಗಾರಮ್ಮಗೆ ಬಂದುಬಿಡುತ್ತದೆ. ಇಲ್ಲಿ ಮಾತನಾಡುವುದು ಬೇಡ ಎಂದು ನಿರ್ಧರಿಸಿ ತೋಟದ ಕಡೆ ಹೋಗಿ ಅಲ್ಲಿ ಮಾತನಾಡೋಣ ಎಂದು ಹೇಳುತ್ತಾಳೆ. ಈ ಮಾತು ಕೇಳಿದ ಬೈರ ಆಯ್ತು ಎಂದು ತೋಟದ ಬಳಿ ಬರುತ್ತಾನೆ. ಇನ್ನ ಬಂಗಾರಮ್ಮ ತೋಟದ ಬಳಿ ಬೈರ ಬಂದಿರುವುದನ್ನು ನೋಡಿ ಆತನ ಕ್ಷೇಮ ಸಮಾಚಾರ ತಿಳಿದುಕೊಳ್ಳುತ್ತಾಳೆ. ಈ ಸಂದರ್ಭದಲ್ಲಿ ಬೈರ ಮುಂಬೈನಲ್ಲಿ ನೆಲೆಸಿರುವುದು ಗೊತ್ತಾಗುತ್ತದೆ. ಆನಂತೆ ಆಕೆ ಬಂದ ಕಾರಣ ತಿಳಿಸಿದ್ದು ಕಂಠಿಯನ್ನು ಹಿಂಬಾಲಿಸ ಬೇಕು ಹಾಗು ಯಾವ ಹುಡುಗಿ ಜೊತೆ ಸುತ್ತಾಡುತ್ತಿದ್ದಾನೆ ಎಂಬುವುದನ್ನು ತಿಳಿಯಬೇಕು ಎನ್ನುತ್ತಾಳೆ. ಇದನ್ನು ಕೇಳಿದ ಬೈರ ಬಹಳ ಸಿಟ್ಟಿಗೊಳಗಾಗಿದ್ದು ಆ ನಂತರ ಬಂಗಾರಮ್ಮ ವಹಿಸಿಕೊಟ್ಟ ಕೆಲಸ ಮಾಡಲು ಮುಂದಾಗುತ್ತಾನೆ .
ಪುಟ್ಟಕ್ಕನ ಕಿವಿಮಾತು..
ಇತ್ತ ಕಂಠಿ ನೇರವಾಗಿ ಸ್ನೇಹಾ ಮನೆಗೆ ಹೋಗಿದ್ದು ಈ ಸಂಧರ್ಭದಲ್ಲಿ ಸುಮಾ ಕಂಠಿ ಕಾಲು ಎಳೆಯುತ್ತಲೇ ಇರುತ್ತಾಳೆ. ಹೌದು ಈ ವರುಷ ನಮ್ಮಿಬ್ಬರ ವಿವಾಹ ಎಂದೆಲ್ಲ ಹೇಳಿದ್ದು ಈ ಮಾತಿಗೆ ಸ್ನೇಹಾ ನಾಚಿ ನೀರಾಗುತ್ತಾಳೆ. ಇನ್ನು ಕಂಠಿ ಮಾತನ್ನ ಕೇಳಿ ಚಂದ್ರು ಹೊರಗೆ ಬಂದಿದ್ದು ಚಂದ್ರುವನ್ನು ನೋಡಿದ ಕಂಠಿ ಸುಮ್ಮನಾಗುತ್ತಾನೆ. ಇನ್ನು ಸ್ನೇಹಾ ಕಂಠಿಯನ್ನು ನೋಡಿದ ಬಳಿಕ ಚಂದ್ರು ಬಳಿ ಅಣ್ಣ ನಿನ್ನ ಜೊತೆ ನಾನು ಮಾತನಾಡಬೇಕಿದ್ದು ನೀನು ಇಲ್ಲಿಯೇ ಕುಳಿತಿರು ಸಹನಳನ್ನು ಕರೆದುಕೊಂಡು ಬರುತ್ತೇವೆ ಎಂದು ಹೇಳಿ ಹೊರಡುಲು ಮುಂದಾದಾಗ ಅಲ್ಲಿಗೆ ಬಂದ ಪುಟ್ಟಕ್ಕ ಬೀಗರು ಏನಾದರು ಹೇಳಿದರೆ ಅವರಿಗೆ ಎದುರು ಆಡಬೇಡ ಎಂದು ಹೇಳುತ್ತಾಳೆ. ತದನಂತರ ಅಮ್ಮನನ್ನು ಸತೈಸಿ ಅಲ್ಲಿಂದ ಹೊರಡುತ್ತಾರೆ. ತದನಸಂತರ ರಸ್ತೆಯುದ್ದಕ್ಕೂ ಕೂಡ ಸ್ನೇಹಾ ಮತ್ತು ಕಂಠಿ ಪ್ರೀತಿಯ ಮಾತುಕತೆಗಳನ್ನು ಆಡುತ್ತಾ ತೆರೆಳುತ್ತಾರೆ.