Rashmika Mandanna: ಜಾಹಿರಾತು ಬ್ರಾಂಡ್ ಗಳಿಗೆ ರಶ್ಮಿಕಾ ಕೇಳುವ ಹಣ ಎಷ್ಟು ಗೊತ್ತೇ?

Advertisement
ದಶಕದ ಹಿಂದೆ ಪ್ರತಿ ಪಡ್ದೆ ಹುಡುಗರು ಗುನುಗುತ್ತಿದ್ದದ್ದು ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಎಂಬ ಹಾಡನ್ನ.. ಅಲ್ಲದೇ ಚಿತ್ರದ ಪಾತ್ರಧಾರಿ ಸಾನ್ವಿ (Saanvi) ಎಲ್ಲರ ಕಥೆ (Story) ಪುಟದಲ್ಲಿ ಅವಳೇ ರಾರಾಜಿಸುತ್ತಿದ್ದಳು. ಅಂದವಾದ ಮುಖ ಸೌಂದರ್ಯ (Beauty) ರಾಶಿ ಮುದ್ದು ಮುದ್ದು ಕೆನ್ನೆ ಜೇನಿನಂತಹ ತುಟಿ ಕೋಮಲವಾದ ನಯನ ಆ ನಯನಕ್ಕೊಂದು ಕನ್ನಡಕ.. ಹೀಗೆ ಚಿತ್ರದಲ್ಲಿ ಸಾನ್ವಿ ಸೀರೆಯುಟ್ಟು(Saree) ಕಾಲೇಜಿಗೆ (College) ಬಂದರೆ ಹೇಗೆ ಹುಡುಗರೆಲ್ಲ ಅವಳಿಂದೆ ಇರುತ್ತಿದ್ದರೋ ತೆರೆಯ ಆಚೆ ಕೂಡ ದೊಡ್ಡ ಅಭಿಮಾನಿ (Fans) ಬಳಗ ನಿರ್ಮಾಣ ವಾಯಿತು. ನೋಡು ನೋಡುತ್ತಿದ್ದಲೇ ಸಾನ್ವಿ ಚಿತ್ರರಂಗದ ಪಟ್ಟದರಸಿ ಕರ್ನಾಟಕದ ಕ್ರಶ್ (Karnataka Crush) ಆಗಿದ್ದಳು. ಸದ್ಯ ನಾವು ಯಾವ ಸಿನಿಮಾ ಹಾಗೂ ಯಾವ ನಟಿ ಬಗ್ಗೆ ಮಾತಾನಾಡುತ್ತಿದ್ದೇವೆ ಎಂಬುದು ತಮಗೆ ತಿಳಿದಿದೆ ಅನಿಸುತ್ತದೆ. ಹೌದು ಇದೀಗ ನ್ಯಾಷನಲ್ ಕ್ರಶ್ ಪಟ್ಟ ಅಲಂಕಂರಿಸಿರುವ ರಶ್ಮಿಕಾ ಮಂದಣ್ಣ (Rashmika Mandanna) ರವರ ಬಗ್ಗೆ.. ಹಾಗೂ ಅವರ ಮೊದಲ ಚಿತ್ರ ಕಿರಿಕ್ ಪಾರ್ಟಿ (Kirik Party) ಬಗ್ಗೆ..
ಮೊದಲ ಸಿನಿಮಾಗೆ Rashmika ಪಡೆದ ಸಂಭಾವನೆ ಎಷ್ಟು ಗೊತ್ತಾ:
ಕಿರಿಕ್ ಪಾರ್ಟಿ (Kirik Party) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ. ಇನ್ನು ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಎಂಬ ಜನಪ್ರಿಯ ಹಾಡಿನಿಂದಲೇ ಖ್ಯಾತಿ ಗಳಿಸಿದ ರಶ್ಮಿಕಾ ರವರು ಇದೀಗ ರಾಷ್ಟ್ರಮಟ್ಟದಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಕನ್ನಡ ಸೇರಿದಂತೆ ತೆಲುಗುಬತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ (Rashmika Mandanna) ಬಾಲಿವುಡ್ ಚಿತ್ರರಂಗವನ್ನೂ ಪ್ರವೇಶಿಸಿದ್ದಾರೆ. ಇನ್ನು ಕಿರಿಕ್ ಪಾರ್ಟಿ ಸಿನಿಮಾಗೆ 5 ರಿಂದ 10 ಲಕ್ಷ ಸಂಭಾವನೆ ಪಡೆದಿದ್ದ ರಶ್ಮಿಕಾ ಮಂದಣ್ಣ ಇವತ್ತಿನ ರೆಮ್ಯೂನರೇಷನ್ ಕೇಳಿ ಇಡೀ ದಕ್ಷಿಣ ಭಾರತದ ನಿರ್ಮಾಪಕರು ಶಾಕ್ ಆಗಿದ್ದಾರೆ ಎನ್ನಬಹುದು.
Rashmika Mandanna ಸದ್ಯದ ಸಂಭಾವನೆ ಎಷ್ಟು:
ಸದ್ಯ ರಶ್ಮಿಕಾ ಮಂದಣ್ಣ (Rashmika Mandanna) ಅವರು ಬಹುಭಾಷೆಯಲ್ಲಿ ಮಿಂಚುತ್ತಿದ್ದಾರೆ. ಹೌದು ಪುಷ್ಪ ಸಿನಿಮಾ ಗೆದ್ದ ಬಳಿಕ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫೇಮಸ್ ಆಗಿದ್ದು ಈಗ ಅವರಿಗೆ ಬಾಲಿವುಡ್ನಲ್ಲೂ ಕೂಡ ಹಲವು ಅವಕಾಶಗಳು ಹರಿದುಬರುತ್ತಿವೆ. ಪ್ರತಿ ಸಿನಿಮಾಗೆ ಅವರು 3 ಕೋಟಿ (3 crores) ರೂಪಾಯಿಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂದು ಇದೀಗ ವರದಿ ಆಗಿದೆ.
Rashmika Mandanna ಜಾಹೀರಾತು ಸಂಭಾವನೆ ಎಷ್ಟು:
ಸದ್ಯ ನಟನೆಯ ಹೊರತಾಗಿ ಜಾಹೀರಾತು ಉದ್ಯಮದಲ್ಲಿ ರಶ್ಮಿಕಾ ರವರು ಜನಪ್ರಿಯ ಮುಖವಾಗಿದ್ದು ಅವರು ವಿವಿಧ ಬ್ರ್ಯಾಂಡ್‌ಗಳು (Brand) ಹಾಗೂ ಚಿಕಿತ್ಸೆಯ ಅನುಮೋದನೆಗಳು ಹಾಗೂ ಅನುಮೋದನೆಗಳಿಗಾಗಿ ಹೆಚ್ಚು ಬೇಡಿಕೆಯಿರುವ ಸೆಲೆಬ್ರಿಟಿಗಳಲ್ಲಿ ಒಬ್ಬರು ಎನ್ನಲಾಗಿದೆ. ಸದ್ಯ ಮೂಲಗಳ ಪ್ರಕಾರವಾಗಿ ರಶ್ಮಿಕಾ ಮಂದಣ್ಣ (Rashmika Mandanna) ರವರು ಪ್ರತಿ ಜಾಹೀರಾತಿಗೆ ಸುಮಾರು 4 ರಿಂದ 5 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ ಎನ್ನಲಾಗಿದ್ದು ಇದು ದೊಡ್ಡ ಮೊತ್ತವಾಗಿದೆ.