Rashmika Mandanna: ವಿಜಯ್ ದೇವರ ಕೊಂಡ ಮತ್ತು ರಶ್ಮಿಕಾ ನಡುವಿನ ಮತ್ತೊಂದು ವಿಷಯ ಬಯಲಿಗೆ

Advertisement
ಗೀತಾಗೋವಿಂದ ಸಿನೆಮಾ ಯಶಸ್ಸಿನ ಬಳಿಕ ಹಿಟ್ ಆದ ಪೇರ್ ಎಂದರೆ ಅದು ನಟ ವಿಜಯ್ ದೇವರ ಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ (Vejay Devrakonda and Rashmika Mandana) ಈ ಪೇರ್ ಒಟ್ಟಾಗಿ ಸೇರಿ ಸಿನೆಮಾ ಮಾಡಿದ್ದರು, ಇವರ ಜೋಡಿ ಸೂಪರ್ ಇದೆ ಎಂದೆ ಎಲ್ಲೆಡೆ ಮಾತು ಕೂಡ ಕೇಳಿಬಂತು. ಈ ಮೂಲಕ ಎಲ್ಲ ಕಾರ್ಯಕ್ರಮ, ಸಂದರ್ಶನ , ವಿದೇಶ ಪ್ರವಾಸಕ್ಕೆ ಈ ಜೋಡಿ ಒಟ್ಟಾಗಿ ಹೋಗುತ್ತಿದ್ದಾರೆ ಇಬ್ಬರ ನಡುವೆ ಏನೊ ಇದೆ ಎಂದೆಲ್ಲ ಗಾಸಿಫ್ ಆರಂಭವಾಯಿತು, ಸಿನೆಮಾರಂಗದಲ್ಲಿ ಲವ್ ಬರ್ಡ್ಸ್ ಎಂದು ಸಹ ಕರೆಸಿಕೊಂಡರು.
ಮದುವೆಯಾಗ್ತಾರಂತೆ?
ರಶ್ಮಿಕಾ (Rashmika) ಅವರು ಈ ವಿಚಾರ ಕಿವಿ ಮೇಲೆ ಬೀಳುತ್ತಲೇ ಹಾಗೇನು ಇಲ್ಲ ನಾವಿಬ್ರು ಒಳ್ಳೆ ಸ್ನೇಹಿತರಷ್ಟೇ. ನಮ್ಮ ನಡುವೆ ಸ್ನೇಹವೊಂದೆ ಇದ್ದದ್ದು ಎಂದು ಪ್ರತಿ ಬಾರಿ ಹೇಳಿದರೂ ಯಾರು ಅವರನ್ನು ನಂಬದೆ ಇದ್ದ ಸುದ್ದಿಯೇ ನಿಜ ಎಂದು ಎಲ್ಲರನ್ನು ನಂಬಿಸಲು ನೆಟ್ಟಿಗರು ಮುಂದಾದರು. ಈ ಮೂಲಕ ರಶ್ಮಿಕಾ ವಿಜಯ್ ಅವರನ್ನು ಮದುವೆ ಆಗ್ತಾರೆ ಎಂಬ ಸುದ್ದಿ ಸಹ ಸಾಕಷ್ಟು ಹರಿದಾಡಿತ್ತು. ಆದರೆ ಇದಕ್ಕೆಲ್ಲ ಈಗ ಒಂದು ಉತ್ತರ ದೊರೆತಿದೆ.
ಈಗ ಒಟ್ಟಿಗೆ ಕಾಣಿಸಿ ಕೊಳ್ಳುವುದು ಕಡಿಮೆ:
ಜೊತೆಯಲ್ಲಿ ಸಿನೆಮಾ ಮಾಡುವಾಗ ಅವರೊಂದಿಗೆ ಅಲಲ್ಲಿ ಕಾಣಸಿಗುವುದು ಕಾಮನ್. ಇತ್ತೀಚೆಗಂತೂ ಇವರಿಬ್ಬರು ಎಲ್ಲೂ ಒಟ್ಟಾಗಿ ಕಾಣ ಸಿಕ್ಕಿಲ್ಲ, ಕಾಣಸಿಗುತ್ತಿಲ್ಲ ಕೂಡ ಹಾಗಾಗಿ ಇಬ್ಬರ ನಡುವೆ ಏನೊ ತಕರಾರೆಬ್ಬಿದೆ ಎನ್ನಲಾಗಿದೆ. ಈ ವಿಚಾರಕ್ಕೆ ಸರಿಯಾಗಿ ರಶ್ಮಿಕಾ ಕೂಡ ವಿಜಯ್ ಜೊತೆ ಹೆಚ್ಚು ಒಡನಾಟ ಬೆರೆಸದೆ ಅವರ ಹುಟ್ಟುಹಬ್ಬಕ್ಕೂ ವಿಶ್ ಮಾಡದೆ ಮತ್ತಷ್ಟು ಅನುಮಾನಕ್ಕೆ ಕಾರಣವಾಗುವ ನಡವಳಿಕೆಯನ್ನು ಮುಂದುವರಿಸಿದ್ದಾರೆ. ಟಾಲಿವುಡ್ ನ ನಟ ಬೆಲ್ಮಕೊಂಡ ಶ್ರೀನಿವಾಸ (Bellamkonda Sai Sreenivas)ಜೊತೆ ಟ್ರಿಪ್ ಹೋಗುತ್ತಿದ್ದಾರೆ ಅವರೊಂದಿಗೆ ರಶ್ಮಿಕಾ ರಿಲೇಶನ್ ಶಿಪ್ ನಲ್ಲಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ಇಬ್ಬರು ಡೇಟಿಂಗ್ ನಲ್ಲಿದ್ದಾರೆ. ರಶ್ಮಿಕಾ ವಿಜಯ್ ಗೆ ಟಾಟಾ ಹೇಳಿದ್ದಾರೆ ಎಂದೆಲ್ಲ ಟ್ರೋಲಿಗರು ಟ್ರೋಲ್ ಮಾಡುತ್ತಿದ್ದಾರೆ.
ರಾಶ್ಮೀಕಾ ಮತ್ತಷ್ಟು ಟ್ರೋಲ್:
ಈ ಮೂಲಕ ಮೊದಲು ರಕ್ಷಿತ್ ಈಗ ವಿಜಯ್ ದೇವರಕೊಂಡ ಎಲ್ಲರಿಗೂ ಕೈಕೊಡ್ತಾಳೆ ಈ ಕಿರಿಕ್ ರಾಣಿ ಎಂದೆಲ್ಲ ಟ್ರೋಲಿಗರು ಟ್ರೋಲ್ ಮಾಡುತ್ತಿದ್ದಾರೆ. ಈ ಮೂಲಕ ರಶ್ಮಿಕಾ ಏನು ಮಾಡಿದರೂ ಸುದ್ದಿಯಾಗೋ ಈ ಕಾಲದಲ್ಲಿ ಇದಕ್ಕೆ ಅವರು ಪ್ರತಿಕ್ರಿಯೆ ಹಾಗೂ ಸ್ಪಷ್ಟನೆ ನೀಡುತ್ತಾರಾ ಎಂದು ಕಾದು ನೋಡಬೇಕು.