Karnataka Times
Trending Stories, Viral News, Gossips & Everything in Kannada

Radhika Pandit: ರಾಧಿಕಾ ಪಂಡಿತ್ ರನ್ನು ನೇರವಾಗಿ ಪ್ರಶ್ನೆ ಮಾಡಿದ ಅಭಿಮಾನಿಗಳು..ಆಗಿದ್ದೇ ಬೇರೆ

Advertisement

ರಾಧಿಕಾ ಪಂಡಿತ್(Radhika Pandit) ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ರಾಕಿಂಗ್ ಸ್ಟಾರ್ ಯಶ್(Rocking Star Yash) ರವರ ಜೊತೆಗೆನೇ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಕಾಲಿಡುತ್ತಾರೆ. ಇಬ್ಬರು ಒಟ್ಟಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಈಗ ಇಬ್ಬರೂ ಒಟ್ಟಾಗಿ ಬಹಳ ಪಯಣದ ಎರಡನೇ ವಿನ್ನಿಂಗ್ಸ್ ಅನ್ನು ಕೂಡ ಪ್ರಾರಂಭಿಸಿ ಹಲವಾರು ವರ್ಷಗಳೇ ಕಳೆದು ಹೋಗಿದೆ. ಇಂದಿಗೂ ಕೂಡ ಇಬ್ಬರು ಪ್ರತಿಯೊಬ್ಬರು ಮೆಚ್ಚುವಂತೆ ಮಾದರಿ ದಂಪತಿಗಳಾಗಿ ಜೀವನ ನಡೆಸುತ್ತಿದ್ದಾರೆ. ಇನ್ನು ರಾಧಿಕಾ ಪಂಡಿತ್ ಅವರ ಫೋಟೋಗೆ ಯಶ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುವಂತಹ ಕಾಮೆಂಟ್ ಮಾಡಿ ಸುದ್ದಿಯಾಗಿದ್ದಾರೆ.

ನಿಮಗೆಲ್ಲರಿಗೂ ನೆನಪಿರಬಹುದು ರಾಕಿಂಗ್ ಸ್ಟಾರ್ ಯಶ್ ರವರ ಕೊನೆಯ ಚಿತ್ರ ಕೆಜಿಎಫ್ ಚಾಪ್ಟರ್ 2(KGF Chapter 2) ಭರ್ಜರಿ ಒಂದು ವರ್ಷದ ಹಿಂದೆ ಬಿಡುಗಡೆಯಾಗಿತ್ತು ಅದಾದ ನಂತರ ಬೇರೆ ಸಿನಿಮಾದ ರಿಲೀಸ್ ಇರಲಿ ಅದರ ಅಪ್ಡೇಟ್ ಕೂಡ ಹೊರಬಂದಿಲ್ಲ. ಸಾಕಷ್ಟು ಸಮಯಗಳಿಂದ ಯಶ್ ಅಭಿಮಾನಿಗಳು ತಾಳ್ಮೆಯಿಂದಲೇ ತಮ್ಮ ನೆಚ್ಚಿನ ನಟನ ಮುಂದಿನ ಸಿನಿಮಾ ಯಾವುದು ಎನ್ನುವುದಾಗಿ ಕಾಯುತ್ತಿದ್ದರು. ಆದರೆ ಗಾಳಿ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದವೇ ವಿನಹ ಅಧಿಕೃತ ಸುದ್ದಿಗಳು ಮಾತ್ರ ಕೇಳಿ ಬರಲೇ ಇಲ್ಲ. ಇನ್ನು ಇತ್ತೀಚಿಗಷ್ಟೇ ನಾಟಿ ರಾಧಿಕಾ ಪಂಡಿತ್(Radhika Pandit) ತಮ್ಮ ಪತಿ ಯಶ್ ಅವರ ಜೊತೆಗೆ ವಿದೇಶಿ ಪ್ರವಾಸದಲ್ಲಿದ್ದಾರೆ.

ಈ ಸಂದರ್ಭದಲ್ಲಿ ಅಲ್ಲಿಗೆ ಹೋಗಿರುವಂತಹ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ರಾಧಿಕಾ ಪಂಡಿತ್(Radhika Pandit) ರವರು ಪೋಸ್ಟ್ ಮಾಡಿದ್ದರು. ಇದರ ಕಾಮೆಂಟ್ ಬಾಕ್ಸ್ ನಲ್ಲಿ ಯಶ್ ಅಭಿಮಾನಿಗಳು ” ಯಶ್ ಬಾಸ್ ರವರ 19ನೇ ಸಿನಿಮಾದ ಬಗ್ಗೆ ಅಪ್ಡೇಟ್ ನೀಡಿ ಇಲ್ಲ ಅಂದ್ರೆ ನಿಮ್ಮ ಮನೆ ಮುಂದೆ ಸ್ಟ್ರೈಕ್ ಮಾಡ್ತೀವಿ ” ಎಂಬುದಾಗಿ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯಶ್ ಅಭಿಮಾನಿಗಳ ಸೋಶಿಯಲ್ ಮೀಡಿಯಾದಲ್ಲಿ ಯಶ್ ಅವರ ಮುಂದಿನ ಸಿನಿಮಾದ ಅಪ್ಡೇಟ್ ಕುರಿತಂತೆ ಸಾಕಷ್ಟು ಅಭಿಯಾನಗಳನ್ನು ಮಾಡುತ್ತಿದ್ದು ಇದು ಅವರ ಸಹನೆಯ ಕಟ್ಟೆ ಒಡೆದಿದೆ ಎಂದು ಹೇಳಬಹುದಾಗಿದೆ. ಯಶ್ ಅವರ ಮುಂದಿನ ಸಿನಿಮಾದ ಬಗ್ಗೆ ನಿಮಗಿರುವಂತಹ ನಿರೀಕ್ಷೆಗಳನ್ನು ನಮ್ಮೊಂದಿಗೆ ಕಾಮೆಂಟ್ ಮೂಲಕ ಹಂಚಿಕೊಳ್ಳಬಹುದಾಗಿದೆ.

Leave A Reply

Your email address will not be published.