Samantha-Nagachaitanya: 1 ವರ್ಷದ ಬಳಿಕ ಹೊರಬಂತು ಸಮಂತಾ ಗೆ ನಾಗಚೈತನ್ಯ ಡಿವೋರ್ಸ್ ಕೊಡಲು ನಿಜವಾದ ಕಾರಣ.
ನಟಿ ಸಮಂತ(Actress Samantha) ಅವರು ನಾಗಚೈತನ್ಯ(Naga chaithanya) ನಟನೆಯ ಏ ಮಾಯೇ ಚೇಸಾವೇ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಾರೆ. ಒಮ್ಮೆ ಚಿತ್ರರಂಗಕ್ಕೆ ಕಾಲಿಟ್ಟ ನಂತರ ಮತ್ತೆ ಸಮಂತ ಹಿಂದಿರುಗಿ ನೋಡಿದ್ದೇ ಇಲ್ಲ. ಸದ್ಯಕ್ಕೆ ಈಗ ಇಬ್ಬರೂ ಕೂಡ ವಿವಾಹ ವಿಚ್ಛೇದನವನ್ನು ಪಡೆದುಕೊಂಡು ಬೇರೆ ಬೇರೆ ಆಗಿರುವಂತಹ ವಿಚಾರ ನಿಮಗೆಲ್ಲರಿಗೂ ತಿಳಿದೇ ಇದೆ. 13 ವರ್ಷದ ಪ್ರೀತಿಯನ್ನು ಇವರಿಬ್ಬರೂ ಕೂಡ ಒಂದೇ ಕ್ಷಣ ಬಿಟ್ಟು ಹೋಗಿದ್ದು ಪ್ರತಿಯೊಬ್ಬರಿಗೂ ಕೂಡ ಆಶ್ಚರ್ಯ ಹಾಗೂ ಬೇಸರ ಎರಡನ್ನು ಕೂಡ ಉಂಟು ಮಾಡಿತ್ತು. ಪ್ರತಿಯೊಬ್ಬರೂ ಕೂಡ ಈ ಬಿರುಕಿನ ಬಗ್ಗೆ ತಿಳಿಯಲು ಸಾಕಷ್ಟು ಪ್ರಯತ್ನ ಪಟ್ಟಿದ್ದರು.
2019ರಲ್ಲಿ ಮೊದಲ ಬಾರಿಗೆ ಸಮಂತಾ(Samantha) ಅವರು ತಮ್ಮ ಸೋಶಿಯಲ್ ಮೀಡಿಯಾದ ಹೆಸರಿನಲ್ಲಿ ಅಕ್ಕಿನೇನಿ(Akkineni) ನಾಮಪದವನ್ನು ರಿಮೂವ್ ಮಾಡಿದ ಕೂಡಲೇ ಈ ಸುದ್ದಿಗಳು ಗಾಳಿ ಸುದ್ದಿಯಾಗಿ ಓಡಾಡಲು ಆರಂಭವಾಗಿದ್ದವು. ಇದಾದ ನಂತರ ಇಬ್ಬರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಈ ಕುರಿತಂತೆ ಹಂಚಿಕೊಳ್ಳುವ ಮೂಲಕ ಈ ಗಾಳಿ ಸುದ್ದಿ ನಿಜವಾಗುವಂತೆ ಮಾಡುತ್ತಾರೆ. ಇನ್ನು ಇವರಿಬ್ಬರ ಸಂಬಂಧವನ್ನು ಸರಿ ಮಾಡಲು ನಾಗ ಚೈತನ್ಯ ಅವರ ತಂದೆ ನಾಗಾರ್ಜುನ(Nagarjuna) ಸಾಕಷ್ಟು ಪ್ರಯತ್ನ ಪಟ್ಟರು ಕೂಡ ಅದು ಫಲಕಾರಿಯಾಗಲಿಲ್ಲ.
ಇನ್ನು ಇವರಿಬ್ಬರ ವಿವಾಹ ವಿಚ್ಛೇದನದ ಕುರಿತಂತೆ ಸಾಕಷ್ಟು ಗಾಳಿ ಸುದ್ದಿಗಳು ಬಂದರೂ ಕೂಡ ಯಾವ ಕಾರಣಕ್ಕೆ ಈ ಕೆಲಸ ಮಾಡಿಕೊಂಡಿದ್ದಾರೆ ಎನ್ನುವ ಸರಿಯಾದ ನಿಖರ ಮಾಹಿತಿ ಸಿಕ್ಕಿರಲಿಲ್ಲ. ಈಗ ವಿದೇಶಿ ಭಾರತೀಯ ಸಿನಿಮಾಗಳ ಸೆನ್ಸಾರ್ ಮಂಡಳಿಯ ಸದಸ್ಯ ಆಗಿರುವ Umair Sandhu ರವರು ಈ ಕುರಿತಂತೆ ಯಾರಿಗೂ ತಿಳಿಯದ ರಹಸ್ಯವನ್ನು ಬಿಚ್ಚಿಟ್ಟಿದ್ದು, ನಾಗ ಚೈತನ್ಯ ಅವರು ಸಮಂತ ಅವರಿಗೆ ಸಾಕಷ್ಟು ಕಿ’ ರುಕುಳವನ್ನು ನೀಡಿದ್ದು ಮಗು ಕೂಡ ಅ’ ಬಾರ್ಷನ್ ಮಾಡಿಸಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಈ ಸುದ್ದಿ ಎಷ್ಟರಮಟ್ಟಿಗೆ ಸತ್ಯವೂ ಇಲ್ಲವೋ ಗೊತ್ತಿಲ್ಲ ಆದರೆ ಇತ್ತೀಚಿಗಷ್ಟೇ ನಟ ನಾಗ ಚೈತನ್ಯ ಮತ್ತೊಬ್ಬ ನಟಿ ಆಗಿರುವಂತಹ Shobitha Dullipala ಅವರ ಜೊತೆಗೆ ವಿದೇಶಿ ರೆಸ್ಟೋರೆಂಟ್ ನಲ್ಲಿ ಡೇಟಿಂಗ್ ನಡೆಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಫೋಟೋಗಳ ಮುಖಾಂತರ ತಿಳಿದು ಬಂದಿದೆ.