Toby Movie: ಟೋಬಿ ಸಿನೆಮಾ ನೋಡಿದ ಜನ ಏನಂದ್ರು! ಹೇಗಿದೆ ಜನರ ರಿಯಾಕ್ಷನ್

Advertisement
ಮಂಗಳೂರು ಮೂಲದ ರಾಜ್ ಬಿ. ಶೆಟ್ಟಿ (Raj B. Shetty) ಅವರು ಹೀರೋ ಆಗಿ ಬೆಳೆದುಬಂದ ಆ ಪರಿಯೇ ವಿಚಿತ್ರ. ಒಂದು ಮೊಟ್ಟೆ ಕಥೆ ಮೂಲಕ ನ್ಯಾಚುರಲ್ ಆ್ಯಕ್ಟಿಂಗ್ ಮೂಲಕ ಫೇಮಸ್ ಆಗಿದ್ದರು ಅಮ್ಮಚ್ಚಿ ನೆನಪು ಸಿನೆಮಾದಲ್ಲಿ ಟಫ್ ಆಗೇ ನಿಭಾಯಿಸಿದ್ದರು ಸಾಫ್ಟ್ ಆ್ಯಕ್ಟ್ (Soft Act) ಅಂದು ಕೊಂಡಿದ್ದ ಜನಕ್ಕೆ ಗರುಡಗಮನ ವೃಷಭ ವಾಹನ ಸಿನೆಮಾ ಮೂಲಕ ಧೈರ್ಯದ ಪಾಠ ಕೂಡ ಹೇಳಿದರು ಇದೀಗ ಅವರ ಒಂದು ಸಿನೆಮಾ ರಿಲೀಸ್ ಆಗಿದ್ದು ಈ ಬಗ್ಗೆ ಪ್ರೇಕ್ಷಕರ ಅಭಿಪ್ರಾಯ ಏನೆಂಬುದು ಈ ಲೇಖನದಲ್ಲಿ ಇದೆ.
ರಾಜ್ ಬಿ ಶೆಟ್ಟಿ ಅವರು ಡಿಫರೆಂಟ್ ಮ್ಯಾನರ್ (Different Manor) ವ್ಯಕ್ತಿಯಾಗಿದ್ದು ಅವರು ಏನೆ ನೀಡಿದರು ಅದು ವಿಭಿನ್ನ ಅನ್ನಿಸಬೇಕು ಎಂಬ ಆಸೆ ಇಟ್ಟವರಾಗಿದ್ದಾರೆ. ಕೆಲ ತಿಂಗಳ ಹಿಂದೆ ಟೋಬಿ ಪೋಸ್ಟರ್ (Toby Movie Poster) ವೈರಲ್ ಆಗಿತ್ತು. ಒಂದು ಕುರಿ ಕೆಂಗಣ್ಣ ಕೋಪದಿಂದ ದೃಷ್ಟಿ ಇಡುವ ಪೋಸ್ಟ್ ಸಾಕಷ್ಟು ಸಂಚಲನ ಮೂಡಿಸಿತ್ತು ಈಗ ಆ ಸಿನೆಮಾ ರಿಲೀಸ್ ಆಗಿದ್ದು ಜನರಿಗೆ ಇದು ರೀಚ್ ಆಗಿದ್ಯಾ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

ಇಂದೊಂದು ಫ್ಯಾಮಿಲಿ ಎಂಟಟೈನ್ ಮೆಂಟ್ ಆಗಿದ್ದು ಟೋಬಿ ಸಿನೆಮಾ (Toby Movie) ಕ್ಕೆ ಟಿ.ಕೆ. ದಯಾನಂದ್ (TK Dayanand) ಅವರು ಕತೆ ಬರೆದಿದ್ದಾರೆ. ಅಗಸ್ತ್ಯ ಫಿಲಂಸ್ (Agastya Films), ಕಾಫಿ ಗ್ಯಾಂಗ್ (Coffee Gang) ಮತ್ತು ಲೈಟರ್ ಬುದ್ಧ ಫಿಲಂಸ್ (Lighter Buddha Films), ಸ್ಮೂತ್ ಸೈಲರ್ಸ್ (Smooth Sailors) ಲಾಂಛನದ ಅಡಿಯಲ್ಲಿ ಈ ಸಿನೆಮಾ ರಿಲೀಸ್ ಆಗಲಿದ್ದು ರವಿ ರೈ ಕಳಸ (Producer Ravi Rai Kailasa) ಈ ಸಿನೆಮಾಕ್ಕೆ ನಿರ್ಮಾಪಕರಾಗಿದ್ದಾರೆ. ಶಾಮಿಲ್ ಬಂಗೇರ ಈ ಸಿನೆಮಾದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಸಿನೆಮಾ ನಾಯಕಿಯಾಗಿ ಸಂಯುಕ್ತ ಹೊರನಾಡು, ಚೈತ್ರಾ ಆಚಾರ್ ನಟಿಸಿದ್ದಾರೆ. ಮಾರಿ ಮಾರಿ ಮಾರಿಗೆ ದಾರಿ ಅನ್ನೊ ಅಡಿಬರಹ ಪೋಸ್ಟರ್ ನಲ್ಲಿ ಮೊದಲು ಇದ್ದಯ ನಿರೀಕ್ಷೆ ಹೆಚ್ಚಾಗಿತ್ತು ಆದರೆ ಪ್ರೇಕ್ಷಕರ ನಿರೀಕ್ಷೆ ತಲುಪಿದೆಯಾ ಎಂಬ ಅನುಮಾನ ಸಹ ವ್ಯಕ್ತವಾಗುತ್ತಿದೆ.
ಏನಂದ್ರು ಪ್ರೇಕ್ಷಕರು?
ಈ ಬಗ್ಗೆ ಕೆಲ ಮಾಧ್ಯಮದವರು ಥಿಯೇಟರ್ ನಲ್ಲಿ ಬಂದು ಜನರ ಅಭಿಪ್ರಾಯ ಸಂಗ್ರಹಿಸಲು ಹೋಗಿದ್ದಾರೆ. ಆಗ ಕೆಲವರು ಸಿನೆಮಾ (Toby Movie) ಚೆನ್ನಾಗಿದೆ, ಒಳ್ಳೆ ಆ್ಯಕ್ಟಿಂಗ್ ಎಂದರೆ ಇನ್ನು ಕೆಲವರು ಎಲ್ಲೂ ಬೋರ್ ಹೊಡೆಸಿಲ್ಲ ಒಳ್ಳೆ ಸಿನೆಮಾ ಎಂದು ಪಾಸಿಟಿವ್ ಹೇಳಿದ್ದಾರೆ ಆದರೆ ಕೆಲ ವೀಕ್ಷಕರು ಸಿನೆಮಾ ಚೆನ್ನಾಗಿಲ್ಲ, ಸ್ಕ್ರೀನ್ ಪ್ಲೇ ಇನ್ನೂ ಉತ್ತಮ ಮಾಡಬಹುದಿತ್ತು ತುಂಬಾ ಸ್ಲೋ ಇದೆ. ಹೀರೋ ಎಂಟ್ರಿ ಎಲ್ಲ ಮಾಮೂಲಿ ಆಗಿತ್ತು ನಾವು ನಿರೀಕ್ಷೆ ಮಾಡಿದ್ದ ಲೆವೆಲ್ ರೀಚ್ ಆಗಿಲ್ಲ ಎಂದು ಪ್ರೇಕ್ಷಕರು ದೂರಿದ್ದಾರೆ.
ಒಟ್ಟಾರೆಯಾಗಿ ಈ ಸಿನೆಮಾ (Toby Movie) ಬಗ್ಗೆ ಗಾಂಧಿನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಇನ್ನು ಸಿನೆಮಾ ಚೆನ್ನಾಗಿ ಮಾಡಬಹುದಿತ್ತು ಎಂಬ ಸಲಹೆ ಕೂಡ ಕೇಳಿ ಬಂದಿದೆ. ಈ ಎಲ್ಲ ಅಂಶಗಳ ನಡುವೆ ರಾಜ್ ಬಿ ಶೆಟ್ಟಿ ಫ್ಯಾನ್ಸ್ (Raj B. Shetty Fans) ಮಾತ್ರ ಅಣ್ಣ ಅಲ್ಪಿಮೇಟ್ ಸಿನೆಮಾ ಕನ್ನಡದ್ದು ಅದನ್ನು ಮೆರೆಸಿ ಎಂದು ಸಿನೆಮಾ ಬೆಂಬಲಿಸುತ್ತಲೇ ಇದ್ದಾರೆ.
Know what people said after watching toby movie