ಕನ್ನಡ ಬಿಗ್ ಬಾಸ್ ಸೀಸನ್ 11 (BBK S11) ಆರಂಭವಾಗಿ ಇನ್ನು ಒಂದು ವಾರವು ಕಳೆದಿಲ್ಲ ಆಗಲೇ ಮನೆ ರಣರಂಗವಾಗಿದೆ. ಸ್ವರ್ಗವಾಸಿಗಳು ಮತ್ತು ನರಕವಾಸಿಗಳು ಎಂದು ಎರಡು ತಂಡಗಳನ್ನು ಬಿಗ್ಬಾಸ್ ಮಾಡಿದ್ದು, ನರಕವಾಸಿಗಳ ನಡುವೆಯೇ ಒಳಜಗಳ ಆರಂಭವಾಗಿದೆ.
ಸದ್ಯ ಮಾನಸ ಮತ್ತು ಚೈತ್ರ ಕುಂದಾಪುರ (Chaithra Kundapura) ಅವರ ಜೊತೆಗೆ ಕಿರಿಕ್ ಮಾಡಿಕೊಂಡಿದ್ದು ಧ್ಯಾನ ಮಾಡುತ್ತಿರುವವರ ಮೇಲೆ ಅನುಮಾನ ಎನ್ನುವ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಇದರಿಂದ ಟ್ರಿಗರ್ ಆಗಿರುವ ಚೈತ್ರ ಕುಂದಾಪುರ ಮಾನಸ (Tukali Manasa) ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ದಿನದಿಂದ ಚೈತ್ರ ಕುಂದಾಪುರ ಮನೆಯಲ್ಲಿ ಇರುವ ಇತರ ಸ್ಪರ್ಧಿಗಳ ಜೊತೆಗೆ ಮಾತಿನ ಚಕಮಕಿ ನಡೆಸಿದ್ದಾರೆ. ಚೈತ್ರ ಕುಂದಾಪುರ ಮತ್ತು ಮಾನಸ ಇಬ್ಬರೂ ನರಕವಾಸಿಗಳಾಗಿದ್ದು, ಸಣ್ಣ ವಿಷಯಕ್ಕೆ ಇವರಿಬ್ಬರ ನಡುವೆ ದೊಡ್ಡ ಬೆಂಕಿ ಹೊತ್ತಿಕೊಂಡಿದೆ. ಚೈತ್ರ ಕುಂದಾಪುರ ಕುಳಿತಲ್ಲೇ ಧ್ಯಾನ ಮಾಡುತ್ತಿರುವುದನ್ನು ನೋಡಿದ ಮಾನಸ, “ಈ ಧ್ಯಾನ ಮಾಡುತ್ತಿರುವವರನ್ನು ನೋಡಿದರೆ ನನಗೆ ಸಣ್ಣ ಅನುಮಾನ. ಅವರು ಧ್ಯಾನ ಮಾಡುತ್ತಿದ್ದಾರೋ ಅಥವಾ ನಿದ್ದೆ ಮಾಡುತ್ತಿದ್ದಾರೆ” ಎಂದು ಸ್ಟೇಟ್ಮೆಂಟ್ ನೀಡಿದ್ದಾರೆ.
ಬಹುಶಃ ಇದನ್ನು ಕೇಳಿಸಿಕೊಂಡಿರುವ ಚೈತ್ರ ಕುಂದಾಪುರ, ಮಾನಸ ಅವರ ಮೇಲೆ ಕಿಡಿಕಾರಿದ್ದಾರೆ. ‘ನಿಮಗೆ ವಿಷಯದ ಬಗ್ಗೆ ಜ್ಞಾನ ಇಲ್ಲದೆ ಇದ್ದರೆ ಮಾತನಾಡಬಾರದು. ನಾನು ಏನು ಮಾಡಿದರು ತಪ್ಪು ಎನ್ನುವಂತೆ ನೀವು ಮಾತನಾಡಬೇಡಿ’ ಎಂದು ವಾರ್ನ್ ಮಾಡಿದ್ದಾರೆ.
ಮಾನಸ ಕೂಡ ತಾನು ಏನೂ ಕಡಿಮೆ ಇಲ್ಲ ಎನ್ನುವಂತೆ ’ಹೌದು. ನಾನು ಅಲ್ಪಜ್ಞಾನಿ’ ಎಂದು ಹೇಳಿ ಮತ್ತೆ ಚೈತ್ರ ಅವರ ಜೊತೆಗೆ ಜಗಳ ಮುಂದುವರಿಸಿದ್ದಾರೆ. ಅವರ ಜೊತೆಗೆ ಇದ್ದ ಇತರ ಸದಸ್ಯರು ಇವರಿಬ್ಬರ ನಡುವಿನ ಜಗಳವನ್ನು ತಡೆಯಲು ಪ್ರಯತ್ನಿಸಿದರೂ ಸಾಕಷ್ಟು ಸಮಯದವರೆಗೆ ಮಾತಿಗೆ ಮಾತು ಬೆಳೆಯುತ್ತಲೆ ಇತ್ತು. ಬಿಗ್ ಬಾಸ್ ಶುರುವಾದ ದಿನದಿಂದಲೇ ಸ್ಪರ್ಧಿಗಳ ಕಾದಾಟ ಆರಂಭವಾಗಿದ್ದು, ಕೆಲವರು ಟ್ರೋಲ್ ಆಗಿದ್ದಾರೆ.