ಸುಮಾರು ಎರಡು ದಶಕಗಳ ತನ್ನ ವಿಭಿನ್ನ ನಟನೆ ಮೂಲಕ ವಿವಿಧ ಭಾಷೆಗಳಲ್ಲಿ ಕೆಲಸ ಮಾಡಿದ ನಟಿ ನಯನತಾರಾ (Actress Nayanthara) ಈಗಲೂ ಬಹು ಬೇಡಿಕೆಯ ನಟಿ ಯಾಗಿದ್ದಾರೆ. ತಮ್ಮ ಅದ್ಭುತ ನಟನೆಯ ಮೂಲಕ ಅಭಿಮಾನಿಗಳನ್ನು ಗಳಿಸಿ ಕೊಂಡಿದ್ದಾರೆ, ನಯನತಾರ, ವಿಘ್ನೇಶ್ (Vighnesh) ಮದುವೆ ಹಿನ್ನೆಲೆ ಸಾಕಷ್ಟು ಸುದ್ದಿ ಮಾಡಿತ್ತು, ಬಳಿಕ ಬಾಡಿಗೆ ತಾಯಿ ಆಗ್ತೀರೋ ವಿಚಾರವು ಭಾರೀ ಸುದ್ದಿ ಮಾಡಿತ್ತು.
ಬಾಡಿಗೆ ತಾಯ್ತಿತನದ ಮೂಲಕ ಅವಳಿ ಮಕ್ಕಳು:
ಮದುವೆ ಬಳಿಕ ಭಾರೀ ಸುದ್ದಿಯಲ್ಲಿತ್ತು ಈ ಜೋಡಿ, ಹೌದು ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದ ನಯನತಾರಾ ಇದೀಗ ನಟನೆಗೆ ಗುಡ್ ಬೈ ಹೇಳ್ತಾರೆ ಅನ್ನುವ ಸುದ್ದಿ ಕೂಡ ಹರಿದಾಡುತ್ತಿದೆ, ಮದುವೆಗೂ ಮುನ್ನ ಬಾಡಿಗೆ ತಾಯಿಯನ್ನು ಫಿಕ್ಸ್ ಮಾಡಿಯೇ ಮದುವೆ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅವಳಿ ಮಕ್ಕಳ ದಂಪತಿ ಆಗುವ ಮೂಲಕ ಖುಷಿ ಯಲ್ಲಿದ್ದಾರೆ, ಬಾಡಿಗೆ ತಾಯಿ ಅನ್ನುವ ವಿಚಾರ ತಮಿಳುನಾಡು ಸರ್ಕಾರ ಇವರ ತನಿಖೆಗೆ ಆದೇಶ ಕೂಡ ನೀಡಿತ್ತು, ಆದರೆ ಅದೆಲ್ಲಾ ನಿಯಮವನ್ನು ಪಾಲಿಸಿಕೊಂಡು ಅವಳಿ
ಮಕ್ಕಳ ಲಾಲನೆ ಪಾಲನೆಯಲ್ಲಿ ತೊಡಗಿಕೊಂಡಿದ್ದಾರೆ
ಅವಳಿ ಮಕ್ಕಳ ಹೆಸರೇನು:
ನಟಿ ನಯನ ತನ್ನ ಮಕ್ಕಳ ಪೂರ್ಣ ಹೆಸರನ್ನು ಬಹಿರಂಗ ಪಡಿಸಿದ್ದಾರೆ, ಚೆನ್ನೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಪತ್ರಕರ್ತರೊಬ್ಬರು ಮಕ್ಕಳ ಬಗ್ಗೆ ಪ್ರಶ್ನೆ ಕೇಳಿದರು, ಮಕ್ಕಳ ಪೂರ್ಣ ಹೆಸರು ಏಂದು ಕೇಳಿದ ಪ್ರಶ್ನೆಗೆ ನನ್ನ ಮೊದಲ ಮಗನ ಹೆಸರು ಉಯಿರ್ ರುದ್ರೋನೀಲ್ ಎನ್. ಶಿವನ್ ಹಾಗೂ ನನ್ನ ಎರಡನೇ ಮಗನ ಹೆಸರು ಉಳಗ್ ದೈವಗನ್ ಎನ್. ಶಿವನ್ ಎಂದು ರಿವೀಲ್ ಮಾಡಿದ್ದಾರೆ, ಈ ಮೂಲಕ ತನ್ನ ಮಕ್ಕಳ ಹೆಸರನ್ನು ಸೃಷ್ಟವಾಗಿ ತಿಳಿಸಿದ್ದಾರೆ, ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ
ಲೇಡಿ ಸೂಪರ್ ಸ್ಟಾರ್:
ನಟಿ ನಯನ ವೈವಿಧ್ಯಮಯ ಪಾತ್ರಗಳನ್ನು ಮಾಡುತ್ತಾ ಅಭಿಮಾನಿಗಳನ್ನು ತನ್ನತ್ತ ಸೆಳೆಯುತ್ತಾ ನಂಬರ್ ಒನ್ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಈಗಲೂ ಇವರ ಚಿತ್ರಕ್ಕಾಗಿ ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ, 2003 ರಲ್ಲಿ ಮಲಯಾಳಂ ಚಿತ್ರ ಮನಸ್ಸಿನಕ್ಕರೆ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಬಳಿಕ ತಮಿಳಿನ ಅಯ್ಯ, ತೆಲುಗಿನ ಲಕ್ಷ್ಮಿ ಸಿನಿಮಾದಲ್ಲಿ ನಟಿಸಿ ಫೇಮ್ ಕ್ರಿಯೇಟ್ ಮಾಡಿಕೊಂಡರು, ಹೆಚ್ಚಿನ ಅವಕಾಶಗಳು ದೊರೆತಂತೆ ಲೇಡಿ ಸೂಪರ್ ಸ್ಟಾರ್ ಎನಿಸಿಕೊಂಡರು.