ಚಾರ್ಲಿ (Charli 777) ಸಿನೆಮಾ ಬಂದ ಬಳಿಕ ಬಹುತೇಕರಿಗೆ ಶ್ವಾನದ ಮೇಲೆ ಪ್ರೀತಿ ಹೆಚ್ಚಾಗಿದ್ದು ಎಲ್ಲೆಡೆ ಬೀದಿ ನಾಯಿಗಳಿಗೆ ಆಸರೆ ಇನ್ನು ಅನೇಕ ಕಾರ್ಯ ನಡೆಯುತ್ತಿದೆ. ನಿಯತ್ತಿಗೆ ಇನ್ನೊಂದು ಹೇಸರೇ ನಾಯಿ ಈ ಮೂಲಕ ಅದಕ್ಕೆ ನಾವು ನೀಡುವ ಪ್ರೀತಿಗೆ ಪ್ರೀತಿಯೊಂದೆ ಅದರ ಪ್ರತ್ಯೂಪಕಾರ ಎನ್ನಬಹುದು.
ಲಕ್ಕಿ ಸಿನಿಮಾದಲ್ಲಿ ನಟಿ ರಮ್ಯ ನಟನೆ
ಇದೇ ತರದ ಇನ್ನೊಂದು ಸಿನೆಮಾ ಎಂದರೆ ಅದು ಲಕ್ಕಿ (lucky) ಇದರಲ್ಲಿ ಸ್ಯಾಂಡಲ್ ವುಡ್ ನ ಪದ್ಮಾವತಿ ನಾಯಕಿಯಾಗಿ ತನ್ನ ಜೀವನಕ್ಕೆ ಅತ್ಯಂತ ಸ್ವಾಮಿಪ್ಯ ಇರುವ ನಟನೆಯನ್ನೇ ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಈ ಮೂಲಕ ಇತ್ತೀಚೆಗಷ್ಟೇ ಮೋಹಕ ತಾರೆ ರಮ್ಯಾ ಅವರ ವೀಕೆಂಡ್ ವಿತ್ ರಮೇಶ್ ಶೋ ನಲ್ಲೂ ಸಹ ಶ್ವಾನದ ಬಗ್ಗೆ ಮಾತಾಡಿದ್ದ ವೀಡಿಯೋ ವೈರಲ್ ಆಗಿತ್ತು. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿಯಾಗಿ ರಮ್ಯಾ ಅವರು ಆಗಮಿಸಿದ್ದು ಅವರ ಕಂಪ್ಲೀಟ್ ಬದುಕಿನ ಚಿತ್ರಣ ವೀಕ್ಷಕರ ಮುಂದೆ ಅನಾವರಣ ಆಗಿದೆ. ಅಷ್ಟೆ ಅಲ್ಲ ಟ್ರೋಲ್ ಪೇಜ್ ಮೂಲಕ ಇವರಿಗೆ ಕನ್ನಡ ಬರೊಲ್ಲ ಎಂದೆಲ್ಲ ಸಿಕ್ಕಾಪಟ್ಟೆ ಪೋಸ್ಟರ್ ವೈರಲ್ ಆಗಿತ್ತು.
ಬ್ರಾಂಡಿ (Brandi) ಎಂದ್ರೆ ತುಂಬಾ ಇಷ್ಟ
ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ತಮ್ಮ ತಂದೆ ಬಗ್ಗೆ, ಬೇಸರದ ವಿಚಾರ ಬಗ್ಗೆ, ನಂತರ ಮಾನಸಿಕವಾಗಿ ಕುಗ್ಗಿದ್ದ ಇವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂತೈಸಿದ್ದ ರೀತಿ ಇನ್ನು ಅನೇಕ ವಿಚಾರದ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ. ಅದೇ ರೀತಿ ಪ್ರೀತಿಯಿಂದ ಸಾಕಿದ್ದ ಶ್ವಾನಗಳ ಬಗ್ಗೆ ಮಾತಾಡಿದ್ದಾರೆ ನಟಿ ರಮ್ಯ, ಬ್ರಾಂಡಿ (Brandi) ಎಂಬ ಶ್ವಾನವನ್ನು ರೆಬೆಲ್ ಸ್ಟಾರ್ ಅಂಬರೀಶ್ ಉಡುಗೊರೆಯಾಗಿ ನೀಡಿದ್ದರು. ಆ ಶ್ವಾನ ಎಂದರೆ ನಂಗೆ ತುಂಬಾನೆ ಇಷ್ಟ ಅಂದಿದ್ದಾರೆ.
ಶ್ವಾನಗಳೇ ನಮ್ಮ ಮನೆಯ ಮಕ್ಕಳು
ಕಳೆದ ವರ್ಷ ಮಾರ್ಚ್ 14ರಂದು ಬ್ರಾಂಡಿ ನಮ್ಮನ್ನೆಲ್ಲ ಬಿಟ್ಟು ಹೋದಳು. ಐ ಮಿಸ್ಡ್ ಯು ಸೋ ಮಚ್ ಡಾರ್ಲಿಂಗ್. ನನ್ನ ಬಳಿ 16ವರ್ಷದ ಚಾಂಪಿ ಅನ್ನೊ ನಾಯಿ ಇದೆ. ಅದಕ್ಕೂ ಹೃದಯ ಸಂಬಂಧಿತ ಕಾಯಿಲೆ ಇದೆ. ಇನ್ನೊಂದು ರಾಣಿ ಅನ್ನೊ ನಾಯಿ ಇದೆ ಅದು ಗೋವಾದಲ್ಲಿ ಅಪಘಾತ ಸಹ ಮಾಡಿಕೊಂಡ ಕಹಾನಿಯನ್ನು ಸಹ ತಿಳಿಸಿದ್ದಾರೆ. ಈ ಮೂಲಕ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ನಮ್ಮ ಮನೆಯಲ್ಲಿ ಮಕ್ಕಳು ಇಲ್ಲ ಶ್ವಾನಗಳೆ ನಮ್ಮ ಮನೆಯ ಮಕ್ಕಳಿದ್ದಂತೆ ಎಂದು ಮನುಷ್ಯರಷ್ಟೇ ಶ್ವಾನಕ್ಕೆ ಅವರು ಪ್ರಾತಿನಿಧ್ಯ ನೀಡಿದ್ದನ್ನು ಕಾಣಬಹುದು.