Sushma K Rao: ಜೀವನದ ದೊಡ್ಡ ನಿರ್ಧಾರ ತಗೆದುಕೊಂಡ ಕಿರುತೆರೆ ನಟಿ ಸುಷ್ಮಾ, ಹೊರಟಿದೆಲ್ಲಿಗೆ ಗೊತ್ತಾ?

Advertisement
ಕಿರುತೆರೆಯಲ್ಲಿ ಬಹಳ ಫೇಮಸ್ (Famous) ಆಗಿರುವ ನಟಿ ಸುಷ್ಮಾ (Sushma K Rao) ಅವರು ಭಾರೀ ಟ್ಯಾಲೆಂಟ್ ಲೆಡಿ ಎನ್ನಬಹುದು , ಆ್ಯಕರಿಂಗ್ ಮಾಡುವುದ್ರಲ್ಲೂ ಸೈ, ಡ್ಯಾನ್ ನಲ್ಲಿಯು ಸೈ, ಅನುಶ್ರೀ ನಂತರ ಪಟಪಟನೆ ಮಾತನಾಡಿ ಎಲ್ಲರ ಮನ ಗೆದ್ದ ನಿರೂಪಕಿ ಸುಷ್ಮಾ, ಗುಪ್ತಾಗಾಮಿನಿ ಧಾರಾವಾಹಿಯಲ್ಲಿ ಭಾವನಾ ಪಾತ್ರದಲ್ಲಿ ಮಿಂಚಿ ತಮ್ಮ ಪೇಮ್ ನ್ನು ಮತ್ತಷ್ಟು ಹೆಚ್ಚಿಸಿಕೊಂಡರು.
ನೆಟ್ಟಿಗರ ಕಾಮೆಂಟ್ ಏನು?:
ಹೌದು ನಟಿ ಸುಷ್ಮಾ, ಕಾಶಿ ಯಾತ್ರೆ ಗೆ (Kashi Yathra) ತೆರಳಿದ್ದಾರೆ, ತಾವು ಕಾಶಿಯಲ್ಲಿ ಇರುವ ವಿಡಿಯೋವನ್ನು ಸುಷ್ಮಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈಗ ಬೆಳಗ್ಗೆ 4 ಗಂಟೆ, ಕಾಶಿಯಲ್ಲಿದ್ದೇನೆ ಎಂದು ಸುಷ್ಮಾ ವಿಡಿಯೋ ಮಾಡಿ ಹಾಕಿದ್ದರು ಈ ವಿಡಿಯೋ ತುಣುಕನ್ನು ನೋಡಿ ನೆಟ್ಟಿಗರು ಏನ್ ಮೇಡಂ ಇಷ್ಟು ಬೇಗ ಕಾಶಿಯಾತ್ರೆಗೆ ಹೋಗಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಭಾಗ್ಯ ಲಕ್ಷ್ಮಿ ಸಿರಿಯಲ್ ನಲ್ಲಿ ನಟನೆ:
ಕಿರುತೆರೆಯಲ್ಲಿ ಜನಪ್ರಿಯ ರಾಗಿರುವ ಸುಷ್ಮಾ ಅವರು ಗುಪ್ತಗಾಮಿನಿ, ಯಾವ ಜನ್ಮದ ಮೈತ್ರಿಯೋ, ಸಿರಿಯಲ್ ನಲ್ಲಿ ನಟಿಸಿದ್ದರು, ಹೀಗೆ ಹಲವು ಸಿರಿಯಲ್ ಮೂಲಕ ನಟಿಸಿ ಜನಮನ್ನಣೆ ಪಡೆದರು, ಇದೀಗ ಭಾಗ್ಯಲಕ್ಷ್ಮಿ (Bhagya Lakshmi) ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ, ಈ ಸಿರಿಯಲ್ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಅಕ್ಕತಂಗಿಯ ಬಾಂಧವ್ಯದ ಕಥೆ ಹೊಂದಿರುವ ಈ ಧಾರಾವಾಹಿಯಲ್ಲಿ ನಿರೂಪಕಿ ಸುಷ್ಮಾ ಕಥಾ ನಾಯಕಿಯಾಗಿ ನಟಿಸುತ್ತಿದ್ದು ಎಲ್ಲರ ಮೆಚ್ಚುಗೆ ಪಡೆದಿದ್ದಾರೆ, ಅಕ್ಕ ಮತ್ತು ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನೇ ಮಾಡಲು ಅಕ್ಕ ರೆಡಿ ಇದ್ದಾಳೆ. ಅಕ್ಕ ಹೇಳಿದ ಹಾಗೇ ತಂಗಿ ಲಕ್ಷ್ಮಿ. ಹೀಗೆ ಅಕ್ಕತಂಗಿಯರ ಕಥೆಯಲ್ಲಿ ಸುಷ್ಮ ಮಿಂಚುತ್ತಿದ್ದಾರೆ.
ಬಹುಮುಖ ಪ್ರತಿಭೆ:
ಚಿಕ್ಕಮಗಳೂರಿನವರಾದ ಸುಷ್ಮಾ ರಾವ್, ಕಂಪ್ಯೂಟರ್ ಸೈನ್ಸ್ (Computer science) ಪದವೀಧರೆ. ಭರತನಾಟ್ಯ ನೃತ್ಯಗಾರ್ತಿ. ಆದರೆ ಸುಷ್ಮಾ ರಾವ್ ಡ್ಯಾನ್ಸರ್ ಎಂಬ ವಿಚಾರ ಹಲವರಿಗೆ ತಿಳಿದಿಲ್ಲ. ಸೊಸೆ ತಂದ ಸೌಭಾಗ್ಯ ದಲ್ಲಿ ಇವರಪಾತ್ರ ವಿಭಿನ್ನವಾಗಿತ್ತು,ಹೀಗೆ ಎಲ್ಲ ಕ್ಷೇತ್ರದಲ್ಲೂ ಇವರು ತಮ್ಮನ್ನು ತಾವು ತೊಡಗಿಸಿಕೊಂಡವರು ಎನ್ನಬಹುದು. ಗುಪ್ತಗಾಮನಿಯ ಭಾವನಾ ಆಗಿ ಅಭಿಮಾನಿಗಳ ಮನಸ್ಸು ಗೆದ್ದಿದ್ದ ಸುಷ್ಮಾ ರಾವ್ ಈಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಭಾಗ್ಯ ಪಾತ್ರ ನಿರ್ವಹಿಸಿ ಎಲ್ಲರ ಮನಸ್ಸು ಗೆದ್ದಿದ್ದಾರೆ ಎನ್ನಬಹುದು