Karnataka Times
Trending Stories, Viral News, Gossips & Everything in Kannada

Neethu Shetty: ವಿಚಿತ್ರವಾಗಿ ಏಪ್ರಿಲ್ ಫುಲ್ ಸರ್ಪ್ರೈಸ್ ಕೊಟ್ಟ ಗಾಳಿಪಟ ಖ್ಯಾತಿಯ ನೀತು ಶೆಟ್ಟಿ!

Advertisement

ನಮ್ಮ ಕನ್ನಡ ಚಿತ್ರರಂಗದ ಸಾಕಷ್ಟು ನಟಿಯರು ಇತ್ತೀಚಿನ ವರ್ಷಗಳಲ್ಲಿ ಸಂಪೂರ್ಣವಾಗಿ ಚಿತ್ರರಂಗವನ್ನು ಬಿಟ್ಟು ಹೋಗಿದ್ದಾರೆ ಎನ್ನಬಹುದಷ್ಟು ಕನ್ನಡ ಚಿತ್ರರಂಗದ ಪ್ರೇಕ್ಷಕರ ಮನಸಿನಿಂದ ದೂರವಾಗಿದ್ದಾರೆ ಅವರಲ್ಲಿ ಗಾಳಿಪಟ ಖ್ಯಾತಿಯ ನೀತು ಶೆಟ್ಟಿ(Neethu Shetty) ಕೂಡ ಒಬ್ಬರು. ಯೋಗರಾಜ್ ಭಟ್(Yogaraj Bhat) ನಿರ್ದೇಶನದಲ್ಲಿ ಮೂಡಿಬಂದಿರುವಂತಹ ಗಾಳಿಪಟ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಅವರು ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.

ಆದರೆ ಅವರ ಯಾವ ಸಿನಿಮಾ ಕೂಡ ಗಾಳಿಪಟ ಸಿನಿಮಾದ ಪಾತ್ರವನ್ನು ಸರಿದೂಗಿಸಲು ಸಾಧ್ಯವಾಗಲಿಲ್ಲ ಎಂದು ಹೇಳಬಹುದು. ಕೇವಲ ಇಷ್ಟೇ ಯಾಕೆ ಮಲಯಾಳಂನಲ್ಲಿ ಲೆಜೆಂಡರಿ ನಟ ಆಗಿರುವಂತಹ ಮೋಹನ್ ಲಾಲ್(Mohan Lal) ನಟನೆಯ ಫೋಟೋಗ್ರಾಫರ್ ಎನ್ನುವ ಸಿನಿಮಾದಲ್ಲಿ 2006ರಲ್ಲಿ ನಾಯಕ ನಟಿಯಾಗಿ ಕೂಡ ಕಾಣಿಸಿಕೊಂಡಿದ್ದರು ಕನ್ನಡತಿ ನೀತು ಶೆಟ್ಟಿ. ಇನ್ನು ಸಾಕಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗದಿಂದ ದೂರವಿದ್ದ ನೀತು ಶೆಟ್ಟಿ, ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗುವ ಮೂಲಕ ಕನ್ನಡ ವೀಕ್ಷಕರ ಮನಸ್ಸಿಗೆ ಹತ್ತಿರವಾಗುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಇನ್ನು ಇತ್ತೀಚಿಗಷ್ಟೇ ತಮ್ಮ ಫೇಸ್ ಬುಕ್ ಖಾತೆಯಲ್ಲಿ ನನ್ನ ಮದುವೆ ವಿಡಿಯೋ ನಿಮಗಾಗಿ ಎನ್ನುವುದಾಗಿ ಹೇಳಿ youtube ಲಿಂಕ್ ಒಂದನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು. ಎಲ್ಲಾ ನೆಟ್ಟಿಗರು ಕೂಡ ಕಾತರದಿಂದ ಲಿಂಕನ್ನು ಕ್ಲಿಕ್ ಮಾಡಿದಾಗ ತಿಳಿಯಿತು ಅವತ್ತು ಏಪ್ರಿಲ್ 1 ಮೂರ್ಖರ ದಿನ ಹಾಗೂ ನೀತು ಶೆಟ್ಟಿ(Neethu Shetty) ಅವರು ನಮ್ಮನ್ನೆಲ್ಲ ಮೂರ್ಖರನ್ನಾಗಿ ಮಾಡಿದ್ದಾರೆ ಎಂಬುದು. ಈ ರೀತಿ ಕೂಡ ಏಪ್ರಿಲ್ ಫೂಲ್ ಮಾಡಬಹುದು ಎಂಬುದನ್ನು ಆವತ್ತು ಆ ಪೋಸ್ಟ್ ಮೂಲಕ ನೀತು ಶೆಟ್ಟಿ ಎಲ್ಲರಿಗೂ ತಿಳಿಸಿಕೊಟ್ಟಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

 

Leave A Reply

Your email address will not be published.