Actor Yash: ಯಶ್ ಎಂದು ಬದಲಾಗಲ್ಲ, ಯಶ್ ಬಗ್ಗೆ ಸಹನಟ ಗಿರೀಶ್ ಶಿವಣ್ಣ ನೇರ ಮಾತು

Advertisement
ನಟ ಯಶ್ (Yash).. ಸದ್ಯ ಕನ್ನಡ ಈ ನಟ ಇದೀಗ ಅಂತರರಾಷ್ಟ್ರೀಯ ನಟನಾಗಿ(National Star) ಬೆಳೆದು ನಿಂತಿದ್ದು ತಮ್ಮದೇ ಆದ ಬ್ರಾಂಡ್ (Brand) ಸೃಷ್ಟಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಬ್ಯಾಗ್ರೌಂಡ್(Background) ಇಲ್ಲದೇ ಬೆಳೆಯಲಿ ಸಾಧ್ಯವಿಲ್ಲ ಎಂಬ ಪದವನ್ನು ಇದೀಗ ಯಶ್ ಅಳಿಸಿ ಹಾಕಿದ್ದು ಸಾಧಾರಣ ಬಿ ಎಂ ಟಿ ಸಿ(BMTC) ಬಸ್ ಡ್ರೈವರ್ ಮಗ ಇದೀಗ ಭಾರತ ಚಿತ್ರರಂಗ ಸೂಪರ್ ಸ್ಟಾರ್ (Super Star) ಆಗಿದ್ದಾರೆ ಎಂದರೆ ನಿಜಕ್ಕೂ ಮೆಚ್ಚುವ ವಿಚಾರ.
ಅವಕಾಶವಿಲ್ಲದೇ ತಿನ್ನಲು ಊಟವಿಲ್ಲದೆ ಮಲಗಲು ಜಾಗವಿಲ್ಲದೇ ಮೆಜೆಸ್ಟಿಕ್ (Mejestic) ಬಸ್ ಸ್ಟಾಂಡ್ ನಲ್ಲಿ ಮಲಗಿದ್ದ ಹುಡುಗ ಇಂದು ಅದೇ ಮೆಜೆಸ್ಟಿಕ್ ನಲ್ಲಿ ಎತ್ತರದ ಕಟೌಟ್ ಹಾಕಿಸಿಕೊಂಡಿದ್ದಾರೆ ಎಂದರೆ ನಿಜಕ್ಕೂ ಇದು ಸಾಧನೆಯೇ ಸರಿ.. ಇನ್ನು ಧಾರಾವಾಹಿಗಳು (Serials) ಹಾಗೂ ಮೊಗ್ಗಿನ ಮನಸ್ಸು (Moggina Manassu) ಸಿನಿಮಾಗಿಂದ ಪ್ರಾರಂಭವಾದ ಇವರ ಜರ್ನಿ ಇದೀಗ ಇಡೀ ಪ್ರಪಂಚವೇ ಕೊಂಡಾಡಿದ ಕೆಜಿಎಫ್ (KGF)ವರೆಗೂ ಬಂದು ನಿಂತಿದೆ..
ಯಶ್ ವೃತ್ತಿ ಬದಕಿನಲ್ಲಿ ಮಾಸ್ ಇಮೇಜ್ ತಂದುಕೊಟ್ಟ ಸಿನಿಮಾ ಯಾವುದು?
ನಟ ರಾಕಿಂಗ್ ಸ್ಟಾರ್ ವೃತ್ತಿ ಜೀವನದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ಸಿನಿಮಾ ಎಂದರೆ ಅದು ರಾಜಾಹುಲಿ (Rajahuli) ಸಿನಿಮಾ. ಹೌದು ಗೂಗ್ಲಿ(Googly) ಚಿತ್ರದವರೆಗೂ ಕೂಡ ಲವರ್ ಬಾಯ್ ಇಮೇಜ್‌ನಲ್ಲಿದ್ದ ಯಶ್‌ಗೆ ಮಾಸ್ ಇಮೇಜ್ ತಂದುಕೊಟ್ಟಿದ್ದು ಈ ರಾಜಾಹುಲಿ. ಹೌದು ಕನ್ನಡ ರಾಜ್ಯೋತ್ಸವದ ಪ್ರಯುಕ್ತವಾಗಿ 2013ರ ನವೆಂಬರ್ 1 ರಂದು ರಾಜಾಹುಲಿ ಸಿನಿಮಾ ಬಿಡುಗಡೆಯಾಗಿದ್ದು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು.
ರಾಜಾಹುಲಿ ಸ್ವಮೇಕ್ ಅಲ್ಲ ರೀಮೇಕ್ !
ಗುರುದೇಶಪಾಂಡೆ (Gurudeahpande) ಯವರ ನಿರ್ದೇಶನದ ಈ ಸಿನಿಮಾದಲ್ಲಿ ಮೇಘನಾ ರಾಜ್ (Meghana Raj) ರವರು ನಾಯಕಿಯಾಗಿ ನಟಿಸಿದ್ದು ಯಶ್ ಜೊತೆ ಹರ್ಷ (Harsha) ವಸಿಷ್ಠ (Vasista Simha) ಚಿಕ್ಕಣ್ಣ (Chikkanna) ಗಿರೀಶ್ (Girish) ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇನ್ನು ತಮಿಳಿನ ಸುಂದರಪಾಂಡಿಯನ್ ಚಿತ್ರದ ರೀಮೇಕ್ ಇದಾಗಿದ್ದು ತಮಿಳಿನಲ್ಲಿ ಶಶಿಕುಮಾರ್ ರವರು ನಿರ್ವಹಿಸಿದ್ದ ಪಾತ್ರವನ್ನ ಕನ್ನಡದಲ್ಲಿ ಯಶ್ ಮಾಡಿದ್ದರು.
ರಾಜಾಹುಲಿ ಸಿನಿಮಾದಲ್ಲಿ ಟ್ವಿಸ್ಟ್ ಕೊಟ್ಟಿದ್ದ ಪಾತ್ರ ಯಾವುದು?
ರಾಜಾಹುಲಿ ಸಿನಿಮಾದಲ್ಲಿ ಹಾಸ್ಯ ನಟ ಗಿರೀಶ್ ರವರ ಚೆಲುವರಾಜ ರವರ ಪಾತ್ರ ಸಿನಿಮಾ ಕಥೆಯಲ್ಲಿ ಬಹಳ ಟ್ವಿಸ್ಟ್ ಕೊಟ್ಟಿದ್ದು ಚೆಲುವರಾಜ ಪ್ರಾಣತೆಗೆದಿದ್ದು ರಾಜಾಹುಲಿ ಎಂದು ಜೈಲಿಗೆ ಕಳುಹಿಸಲಾಗುತ್ತದೆ. ಚೆಲುವರಾಜನ ಪ್ರಾಣ ತೆಗೆದ ಹಾಗೂ ತಾವು ಪ್ರತಿಸುತ್ತಿದ್ದ ಹುಡುಗಿಯನ್ನು ರಾಜಾಹುಲಿ ಮದುವೆಯಾಗುತ್ತಿದ್ದಾನೆ ಎಂದು ಅವನನ್ನು ಹೊಡೆಯಲು ಮೂರು ಜನ ಸ್ನೇಹಿತರು ಸ್ಕೆಚ್ ಹಾಕುತ್ತಾರೆ. ಇನ್ನು ಸಿನಿಮಾ ನೋಡುವ ವೀಕ್ಷಕರು ಕೂಡ ಚೆಲುವರಾಜನನ್ನ ಕೊಂದಿದ್ದು ರಾಜಾಹುಲಿನೇ ಎಂದು ಭಾವುಸಿರುತ್ತಾರೆ. ಆದೇ ಸಿನಿಮಾ ಮುಕ್ತಾಯದ ವೇಳೆ ಟ್ವಿಸ್ಟ್ ಸಿಕ್ಕಿದ್ದು ರಾಜಾಹುಲಿ ಚೆಲುವರಾಜನ ಪ್ರಾಣ ತೆಗೆದಿರುವುದಿಲ್ಲ.
ರಾಜಹುಲಿ ಹಿಟ್ ಆದ್ಮೇಲರ ಗೊತ್ತಾಯ್ತು ಟ್ವಿಸ್ಟ್ ಎನ್ನುತ್ತಾರೆ ಗಿರೀಶ್..
ಸದ್ಯ ಸಂದರ್ಶನವೊಂದರಲ್ಲಿ ಕಾಣಿಸಿಕೊಂಡಿರುವ ರಾಜಾಹುಲಿ ಪಾತ್ರಧಾರಿ ಗಿರೀಶ್ ರವರು ಸಿನಿಮಾ ಬಗ್ಗೆ ಮಾತನಾಡುತ್ತಾ ಸಿನಿಮಾದಲ್ಲಿ ನಂದೇ ಟ್ವಿಸ್ಟ್ ಅಂತ ನನಗೆ ಗೊತ್ತಿರಲಿಲ್ಲ.. ಸಿನಿಮಾ ಹಿಟ್ ಆದ್ಮೇಲೆ ಗೊತ್ತಾಯ್ತು ಎಂದಿದ್ದಾರೆ. ಮುಂದುವರೆದು ಮಾತನಾಡಿದ ಅವರು ಯಶ್ ಫೋನ್ ಮಾಡಿ ತುಂಬಾ ಚೆನ್ನಾಗಿ ಬಂದಿದೆ ಕಣೋ.. ಒಳ್ಳೆ ಟ್ವಿಸ್ಟ್ ಎಂದರು.. ಆಗ ಫುಲ್ ಶಾಕ್ ಆಯ್ತು ಎಂದಿದ್ದಾರೆ. ನನಗೆ ಟ್ವಿಸ್ಟ್ ಅಂತ ಯಾಕೆ ಗೊತ್ತಾಗಲಿಲ್ಲ ಅಂದರೆ ನಾನು ಯಾವಾಗಲು ನನ್ನ ಹಾಗೂ ನನ್ನ ಪಾತ್ರ ಬಗ್ಗೆ ಮಾತ್ರ ಯೋಚನೆ ಮಾಡ್ತಿನಿ. ಅಕ್ಕ ಪಕ್ಕ ಎಲ್ಲಾ ತಿಂಕ್ ಮಾಡಲ್ಲ. ಪಾತ್ತ ಹೇಗೆ ಚೆನ್ನಾಗಿ ಮಾಡಬಹುದು ಎಂಬುದು ಮಾತ್ರ ತಲೆಲಿರುತ್ತದೆ ಎಂದು ಗಿರೀಶ್ ಟ್ವಿಸ್ಟ್ ಗಳ ಬಗ್ಗೆ ಗೊತ್ತಿರುವುದಿಲ್ಲ ಎಂದಿದ್ದಾರೆ.