Karnataka Times
Trending Stories, Viral News, Gossips & Everything in Kannada

Ramesh Aravind: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ರಮ್ಯಾ ಇಂಗ್ಲಿಷ್ ಮಾತಾಡಿದ್ದಕ್ಕೆ ರಮೇಶ್ ಅಭಿಪ್ರಾಯ ಇಲ್ಲಿದೆ

Advertisement

ಇತ್ತೀಚಿಗಷ್ಟೇ ಪ್ರಾರಂಭವಾಗಿದ್ದ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದ ಮೊದಲ ಎಪಿಸೋಡ್ ನಲ್ಲಿ ಅತಿಥಿಯಾಗಿ ನಟಿ ರಮ್ಯಾ ಅವರು ಕಾಣಿಸಿಕೊಂಡಿದ್ದರು. ಮೊದಲ ಎಪಿಸೋಡ್ ನಲ್ಲಿ ರಮ್ಯ(Ramya) ಅವರು ಬಂದಿದ್ದು ಸಾಕಷ್ಟು ಟೀಕೆಗೆ ಒಳಗಾಗಿತ್ತು ಅದರ ಕಾರಣ ಕೂಡ ನಿಮಗೆ ತಿಳಿದಿದೆ. ರಮ್ಯಾ ಅವರು ಈ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಿದ್ದ ಕಾರಣಕ್ಕಾಗಿ ವೀಕೆಂಡ್ ವಿತ್ ರಮೇಶ್ ಶೋ ಕುರಿತಂತೆ ಹಾಗೂ ರಮ್ಯಾ ಅವರ ಕುರಿತಂತೆ ಮಾತ್ರವಲ್ಲದೆ ನಿರೂಪಕ ರಮೇಶ್ ಅರವಿಂದ್ ಅವರ ಕುರಿತಂತೆ ಕೂಡ ಟ್ರೋಲ್ ಮಾಡಲಾಗಿತ್ತು.

ಇದರ ಕುರಿತಂತೆ ಇತ್ತೀಚಿಗಷ್ಟೇ ನಡೆದಿರುವ ಸಂದರ್ಶನ ಒಂದರಲ್ಲಿ ರಮೇಶ್ ಅರವಿಂದ್ ರವರ ಬಳಿ ಇದರ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ಉತ್ತರ ನೀಡುತ್ತಾರೆ ರಮೇಶ್ ಅರವಿಂದ್ ರವರು ಈ ರೀತಿ ಯಾವುದೇ ನಮ್ಮ ಕಾರ್ಯಕ್ರಮದಲ್ಲಿ ತಪ್ಪು ನಡೆದಿದ್ದಲ್ಲಿ ಪ್ರೇಕ್ಷಕರಿಂದ ಅದರ ಬಗ್ಗೆ ಪ್ರತಿಕ್ರಿಯೆ ಬಂದಿದ್ದಲ್ಲಿ ನಾವು ಖಂಡಿತವಾಗಿ ಅದನ್ನು ಸರಿಪಡಿಸಿಕೊಳ್ಳುವ ಸಂಪೂರ್ಣ ಪ್ರಯತ್ನವನ್ನು ಮಾಡುತ್ತೇವೆ ಎಂಬುದಾಗಿ ರಮೇಶ್ ಅರವಿಂದ್(Ramesh Aravind) ಹೇಳಿದ್ದಾರೆ. ಇಂತಹ ತಪ್ಪುಗಳನ್ನು ನಮಗೆ ತಪ್ಪು ಎಂದು ಅನಿಸಿದ ಮೇಲೂ ಕೂಡ ಅದನ್ನು ತಿದ್ದಿಕೊಳ್ಳದಿದ್ದರೆ ನಮಗಿಂತ ಮೂರ್ಖರು ಯಾರು ಇಲ್ಲ ಎಂಬುದಾಗಿ ಹಾಸ್ಯಾಸ್ಪದವಾಗಿಯೇ ಮಾತನಾಡಿದ್ದಾರೆ.

ಇನ್ನು ಇದಾದ ನಂತರ ತಮ್ಮ ಮುಂದಿನ ಸಿನಿಮಾಗಳ ಕುರಿತಂತೆ ಏಪ್ರಿಲ್ 14ರ ನಂತರ ಅನೌನ್ಸ್ ಮಾಡುವುದಾಗಿ ರಮೇಶ್ ಅರವಿಂದ ರವರು ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಒಟ್ಟಾರೆಯಾಗಿ ರಮ್ಯ ಅವರ ವಿರುದ್ಧ ಕೇಳಿ ಬಂದಿರುವ ಕೂಗು ರಮೇಶ್ ಅರವಿಂದ್ ರವರನ್ನು ಕೂಡ ತಲುಪಿದೆ ಎಂದು ಹೇಳಬಹುದಾಗಿದೆ. ಈ ವಿಚಾರದ ಬಗ್ಗೆ ರಮೇಶ್ ಅರವಿಂದ್(Ramesh Aravind) ಪ್ರತಿಕ್ರಿಯಿಸಿರುವ ರೀತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.