Sapthami Gowda: ಸಪ್ತಮಿ ಗೌಡ ವಿರುದ್ಧ ಆಕ್ರೋಶಗೊಂಡ ಕನ್ನಡಿಗರು! ನಿಜವಾದ ಕಾರಣ ಇಲ್ಲಿದೆ.

Advertisement
ನಟಿ ಸಪ್ತಮಿ ಗೌಡ ಕನ್ನಡ ಚಿತ್ರರಂಗದ ಯುವ ಉದಯೋನ್ಮುಖ ನಟಿ. ಕಾಂತಾರ(Kantara) ಸಿನಿಮಾಗೂ ಮುನ್ನ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು ಕೂಡ ಸಪ್ತಮಿ ಗೌಡ(Sapthami Gowda) ಅವರಿಗೆ ಯಾವುದು ದೊಡ್ಡ ಮಟ್ಟದ ಹೆಸರನ್ನು ನೀಡಿರಲಿಲ್ಲ. ಆದರೆ ಕಾಂತಾರ ಸಿನಿಮಾದ ಲೀಲ ಪಾತ್ರ ಎನ್ನುವುದು ಅವರಿಗೆ ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಪರಭಾಷೆಗಳಿಂದ ಕೂಡ ಆಫರ್ ಗಳು ಹುಡುಕಿಕೊಂಡು ಬರುವುದಕ್ಕೆ ಕಾರಣವಾಗಿದೆ. ಆದರೆ ಇದರಿಂದ ನಟಿ ಸಪ್ತಮಿ ಗೌಡ ಅವರು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗುವ ಕಾರಣವನ್ನು ಕೂಡ ನೀಡಿದೆ.
ಕಾಂತಾರ ಸಿನಿಮಾದ ಯಶಸ್ಸಿನ ನಂತರ ದೊಡ್ಮನೆಯ ಮೂರನೇ ಜನರೇಶನ್ ಕುಡಿ ಆಗಿರುವಂತಹ ಯುವರಾಜ್ ಕುಮಾರ್(Yuvarajkumar) ನಟನೆಯ ಯುವ ಸಿನಿಮಾದಲ್ಲಿ ಕೂಡ ಸಪ್ತಮಿ ಗೌಡ ಅವರಿಗೆ ಅವಕಾಶ ಹುಡುಕಿಕೊಂಡು ಬರುತ್ತದೆ. ಇದಾದ ನಂತರ ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಬಾಲಿವುಡ್ ಚಿತ್ರರಂಗದಿಂದಲೂ ಕೂಡ ಸಿನಿಮಾ ಅವಕಾಶ ಸಪ್ತಮಿ ಗೌಡ ಅವರನ್ನು ಹುಡುಕಿಕೊಂಡು ಬಂದಿದ್ದು ಇದಕ್ಕೆ ಕಾರಣ ಆಗಿರೋದು ಕಾಂತಾರ ಸಿನಿಮಾ ಹಾಗೂ ರಿಶಬ್ ಶೆಟ್ಟಿ(Rishab Shetty).
ಕಾಶ್ಮೀರಿ ಫೈಲ್ ಖ್ಯಾತಿಯ ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿ ಹೋತ್ರಿ ಅವರು ನಿರ್ದೇಶಿಸಲಿರುವ The Vaccine War ಸಿನಿಮಾದಲ್ಲಿ ಸಪ್ತಮಿ ಗೌಡ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿ ರಿಷಭ್ ಶೆಟ್ಟಿ ಅವರ ಬಳಿಯಿಂದ ಫೋನ್ ನಂಬರ್ ತೆಗೆದುಕೊಂಡು ಸಿನಿಮಾಗೆ ಒಪ್ಪಿಸಿದ್ದಾರಂತೆ. ಈಗಾಗಲೇ ಸ್ಕ್ರಿಪ್ ಕೂಡ ಬಂದಿದ್ದು ಸಪ್ತಮಿ ಗೌಡ ಅವರು ಕೂಡ ಸಿನಿಮಾ ವನ್ನು ಒಪ್ಪಿಕೊಂಡು ಚಿತ್ರೀಕರಣಕ್ಕೆ ಸಿದ್ದರಾಗಿದ್ದಾರಂತೆ. ಮುಂದಿನ ದಿನಗಳಲ್ಲಿ ಹಿಂದಿಯಲ್ಲಿ ಅವಕಾಶ ಹುಡುಕಿಕೊಂಡು ಬಂದರೆ ಸಿನಿಮಾ ಮಾಡ್ತೀರಾ ಎಂಬ ಪ್ರಶ್ನೆಗೆ ಒಳ್ಳೆಯ ಕಥೆ ಇದ್ರೆ ಖಂಡಿತವಾಗಿ ಮಾಡ್ತೀನಿ ಆದರೆ ನನ್ನ ಪ್ರಥಮ ಆದ್ಯತೆ ಕನ್ನಡ ಸಿನಿಮಾ ಎಂಬುದಾಗಿ ಹೇಳಿದ್ದಾರೆ. ಕೆಲವರು ಮೊದಲನೇ ಉತ್ತರಕ್ಕೆ ಆಕ್ರೋಶವನ್ನು ವ್ಯಕ್ತಪಡಿಸಿದರೆ 2ನೇ ಉತ್ತರಕ್ಕೆ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ