ಕನ್ನಡ ಚಿತ್ರರಂಗದಲ್ಲಿ (KFI) ಅಭಿನಯ ಭಾರ್ಗವ ಡಾ ವಿಷ್ಣುವರ್ಧನ್ (Dr Vishnuvardhan) ಹಾಗೂ ರೆಬಲ್ ಸ್ಟಾರ್ ಅಂಬರೀಷ್ (Ambreesh) ಅವರೊಂದಿಗೆ ಮೊದಮೊದಲಿಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಈ ನಟ ಚಿತ್ರಗಳಲ್ಲಿ (Movies) ಹೆಚ್ಚಾಗಿ ಕೇವಲ ಹಾಸ್ಯ (Comdey) ಕಲಾವಿದರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಸದ್ಯ ನಾವಿಂದು ಮಾತನಾಡುತ್ತಿರುವುದು ನವರಸ ನಾಯಕ ಜಗ್ಗೇಶ್ (Jahgesh) ಅವರ ಸಹೋದರನಾಗಿರುವ ನಟ ಕೋಮಲ್ (Komal) ಅವರ ಬಗ್ಗೆ. ಇನ್ನು ನಟ ಜಗ್ಗೇಶ್ ಹಾಗೂ ನಟ ಕೋಮಲ್ ಅವರು ಒಟ್ಟಿಗೆ ಸಾಕಷ್ಟು ಸಿನಿಮಾಗಳನ್ನು ಅಭಿನಯ ಮಾಡಿದ್ದಾರೆ.
ಚಿತ್ರರಂಗಕ್ಕೆ Komal ಕೊಡುಗೆ:
ನಟ ಕೋಮಲ್ (Komal) ರವರು ನಾಯಕ ನಟನಾಗಿಯೂ ಕೂಡ ಹಲವು ಸಿನಿಮಾಗಳಲ್ಲಿ ಅಭಿನಯ ಮಾಡಿ ಸೈ ಎನಿಸಿಕೊಂಡಿದ್ದು ನಟ ಕೋಮಲ್ ಅವರ ಕಾಮಿಡಿ ನೋಡುವುದಕ್ಕಾಗಿ ಸಪರೇಟ್ ಫ್ಯಾನ್ ಬೇಸ್ (Fan Base) ಕೂಡ ಇತ್ತು ಎನ್ನಬಹುದು. ಅಣ್ಣನ ಮುದ್ದು ತಮ್ಮನಾಗಿರುವ ನಟ ಕೋಮಲ್ ಕನ್ನಡ ಸಿನಿಮಾ ರಂಗ ಹೊರತುಪಡಿಸಿ ಬೇರೆ ಯಾವ ಭಾಷೆಗಳಲ್ಲಿಯೂ ಕೊಡ ಅಭಿನಯಿಸಲ್ಲ. ಆದರೆ ಕನ್ನಡಾಭಿಮಾನವನ್ನು ಅಪಾರ ಹೊಂದಿರುವ ನಟ ಕೋಮಲ್ ಅವರು ಇತ್ತೀಚೆಗೆ ಯಾವ ಸಿನಿಮಾಗಳಲ್ಲಿಯೂ ಸಹ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಇದೀಗ ಅವರ ಹೊಸ ಸಿನಿಮಾ ಬಿಡುಗಡೆ ಬಂದಿದೆ. ಇನ್ನು ಸಾಕಷ್ಟು ಸಿನಿಮಾಗಳಲ್ಲಿ ಜನರನ್ನ ನಕ್ಕು ನಲಿಸಿರುವ ನಟ ಕೋಮಲ್ ಅವರ ಕೊಡುಗೆ ಸಿನಿಮಾರಂಗಕ್ಕೆ ಅಪಾರ ಎನ್ನಬಹುದು.
Komal ಹೀರೋ ಆಗಿದ್ದೆ ತಪ್ಪಾಯ್ತ:
ಹೌದು ಈ ವಿಚಾರ ದಶಕದಿಂದ ಚಿತ್ರರಂಗದಲ್ಲಿ ಕೇಳಿಬರುತ್ತಿದೆ. ಕೋಮಲ್ (Komal) ಹೀರೋ ಆಗದಿದ್ದರೆ ಇದೀಗ ಚಿತ್ರರಂಗದ ಬೇಡಿಕೆಯ ಹಾಸ್ಯನಟರಾಗುತ್ತಿದ್ದರು ಎಂಬ ಮಾತು ಕೇಳುತ್ತಲೇ ಇರುತ್ತದೆ. ಇದನ್ನ ಕೋಮಲ್ (Komal) ಅವರಿಗೇನೆ ಕೇಳಿದರೆ ಅವರು ಹೇಳೋದು ಹೀಗೆ.. ಸದ್ಯ ಈಗ ನಾನು ಸುಮಾರು ಆರು ಚಿತ್ರಕ್ಕೆ ಸಹಿ ಹಾಕಿದ್ದೇನೆ.. ನನ್ನ ಇಷ್ಟ ಪಡುವುದಕ್ಕೆ ತಾನೆ ಇಷ್ಟು ಸಿನಿಮಾ ಬಂದಿದೆ. ಈ ಆರು ಸಿನಿಮಾ ಜೊತೆ ಇನ್ನು ನಾಲ್ಕು ಸಿನಿಮಾ ವನ್ನ ಸ್ಟಾಪ್ ಕೂಡ ಮಾಡಿದ್ದೇನೆ. ಕಾರಣ ಮೊದಲ ಬಾರಿಗೆ ತಮಿಳಿನಲ್ಲಿ ಸಿನಿಮಾ ಮಾಡುತ್ತಿದ್ದು ಮೂರು ತಿಂಗಳು ಡೇಟ್ ಕೊಟ್ಟಿದ್ದೇನೆ. ಪ್ರೀತಿ ಇರುವುದಕ್ಕೆ ಇಷ್ಟ್ ಸಿನಿಮಾ ಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ಇನ್ನು ತಮಗೆ ಡಿಮ್ಯಾಂಡ್ (Demand) ಇದೆ ಕಡಿಮೆಯಾಗಿಲ್ಲ ಎನ್ನುತ್ತಾರೆ ಕೋಮಲ್(Komal)
ಹೊಸ ಸನಿಮಾ Release ಯಾವಾಗ:
ಸದ್ಯ ಇದೀಗ ಹಾಸ್ಯ ನಟ ಕೋಮಲ್ (Komal) ಕುಮಾರ್ ಅಭಿನಯದ ಉಂಡೆನಾಮ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಹೌದು ಹರೀಶ್ ರಾಜ್ (Harish Raj) ಮತ್ತು ಕೋಮಲ್ ಜೋಡಿಯ ಈ ಚಿತ್ರ ಇದೇ ವರ್ಷ April-14 ರಂದು ರಿಲೀಸ್ ಆಗುತ್ತಿದೆ. ಸದ್ಯ ಉಂಡೆನಾಮ ಚಿತ್ರ ತನ್ನ ಶೀರ್ಷಿಕೆಯಿಂದಲೇ ಗಮನ ಸೆಳೆದಿದ್ದು ಹಾಸ್ಯ ಅನ್ನುವುದು ಈ ಒಂದು ಟೈಟಲ್‌ನಲ್ಲಿ ಕಂಡು ಬರುತ್ತಿದೆ. ಇನ್ನು ಕೋಮಲ್ ಅಭಿನಯದಲ್ಲಿ ವಿಶೇಷ ಹಾಸ್ಯ ಇದ್ದೇ ಇರುತ್ತದೆ. ಉಂಡೆನಾಮ ಚಿತ್ರದಲ್ಲೂ ಅದನ್ನ ನಿರೀಕ್ಷೆ ಮಾಡಬಹುದಾಗಿದ್ದು ಕೋಮಲ್ ಜೊತೆಗೆ ಹರೀಶ್ ರಾಜ್ (Harish Raj) ಅಲ್ಲದೇ ತಬಲಾ ನಾಣಿ ಧನ್ಯ ಬಾಲಕೃಷ್ಣ ಅಭಿನಯಿಸಿದ್ದಾರೆ.