Actor Yash: ಯಶ್ ಕುಟುಂಬದಿಂದ ಅತಿ ಶೀಘ್ರದಲ್ಲೇ ಸಿಹಿ ಸುದ್ದಿ! ಕಾತುರದಲ್ಲಿ ಅಭಿಮಾನಿಗಳು

Advertisement
ರಾಕಿಂಗ್ ಸ್ಟಾರ್ ಯಶ್(Rocking Star Yash) ಈಗಾಗಲೇ ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ರಾಕಿಂಗ್ ಸ್ಟಾರ್ ಆಗಿದ್ದವರು ಈಗ ಗ್ಲೋಬಲ್ ಸ್ಟಾರ್ ಆಗಿದ್ದಾರೆ. ತಮ್ಮ ಸಿನಿಮಾಗಳು ಹೇಗೆ ಇರಬೇಕು ಎನ್ನುವುದನ್ನು ಪ್ರತಿಯೊಂದು ಸಿನಿಮಾದಿಂದ ಮತ್ತೊಂದು ಸಿನಿಮಾ ಗೆ ಇನ್ನೂ ಏನಾದರೂ ಸಾಧನೆ ಮಾಡಬೇಕು ಎನ್ನುವ ಮನೋ ದೃಷ್ಟಿಯಿಂದಲೇ ಮಾಡಿಕೊಂಡು ಬಂದವರು. ಅದಕ್ಕೆ ಇಲ್ಲಿಯವರೆಗೂ ಅವರು ಮಾಡಿಕೊಂಡು ಬಂದಿರುವ ಸಾಧನೆಗಳ ಉದಾಹರಣೆಯಾಗಿದೆ.
ಇನ್ನು ಎಲ್ಲಕ್ಕಿಂತ ಪ್ರಮುಖವಾಗಿ ಅವರು ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ತಾವು ಅಂದುಕೊಂಡಿದ್ದನ್ನು ಸಾಧನೆ ಮಾಡಿರುವಂತಹ ಸಾಧಕ. ನಟಿ ರಾಧಿಕಾ ಪಂಡಿತ್(Radhika Pandit) ಅವರ ಜೊತೆಗೆ ಸಿನಿಮಾ ರಂಗಕ್ಕೆ ಕಾಲಿಟ್ಟು ಇಬ್ಬರೂ ಕೂಡ ಪರಸ್ಪರ ಪ್ರೀತಿಸಿ ಜೀವನದಲ್ಲಿ ತಾವೊಂದುಕೊಂಡಿದ್ದನ್ನು ಸಾಧಿಸಿದ ನಂತರ ಮನೆಯವರ ಒಪ್ಪಿಗೆ ಮೇರೆಗೆ ಅದ್ದೂರಿಯಾಗಿ ಮದುವೆಯಾಗುವ ಮೂಲಕ ಈ ವಿಚಾರದಲ್ಲಿ ಕೂಡ ಯುವ ಜನತೆಗೆ ಅವರು ಸ್ಪೂರ್ತಿಯಾಗಿದ್ದಾರೆ. ಇನ್ನು ಅಪ್ಡೇಟ್ ಗಾಗಿ ಕಾಯುತ್ತಿರುವ ಯಶ್ ಅಭಿಮಾನಿಗಳಿಗೆ ರಾಕಿಂಗ್ ಸ್ಟಾರ್ ಯಶ್ ರವರ ಕುಟುಂಬ ಹೊಸ ಸಿಹಿ ಸುದ್ದಿ ನೀಡುವ ಕಾತುರತೆಯಲ್ಲಿ ಇದೆ. ಅಷ್ಟಕ್ಕೂ ಆ ಸಿಹಿ ಸುದ್ದಿ ಏನು ಎಂಬುದನ್ನು ತಿಳಿಯೋಣ ಬನ್ನಿ.
ಹೌದು ಗೆಳೆಯರೇ ಯಶ್ ಅವರ 19ನೇ ಸಿನಿಮಾ ಅಂದರೆ ಮುಂದಿನ ಸಿನಿಮಾ ಯಾವುದು ಎನ್ನುವ ಕಾತುರತೆಯಲ್ಲಿರುವ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಸೋಶಿಯಲ್ ಮೀಡಿಯಾ ಮುಖಾಂತರ ದೊರಕಿದೆ. ಮೂಲೆಗಳ ಪ್ರಕಾರ ಯಶ್ ಅವರ ಮುಂದಿನ ಸಿನಿಮಾದ ನಿರ್ದೇಶನವನ್ನು ಮಹಿಳಾ ನಿರ್ದೇಶಕಿ ಒಬ್ಬರು ಮಾಡಲಿದ್ದು ಅದು ಬೇರೆ ಯಾರು ಅಲ್ಲ ಅವರ ಪತ್ನಿ ಆಗಿರುವ ರಾಧಿಕಾ ಪಂಡಿತ್(Radhika Pandit) ರವರೆ ಎಂಬುದಾಗಿ ತಿಳಿದು ಬಂದಿದ್ದು ಇದು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವುದನ್ನು ನಾವು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ. ಈಗಾಗಲೇ ಹಾಲಿವುಡ್ ತಂತ್ರಜ್ಞರನ್ನು ಕೂಡ ತನ್ನ ಮುಂದಿನ ಸಿನಿಮಾಗೆ ಹಾಕಿಕೊಳ್ಳುತ್ತಿರುವ ಯಶ್ ಏನೋ ದೊಡ್ಡದನ್ನೇ ಪ್ಲಾನ್ ಮಾಡಿದ್ದಾರೆ ಅನ್ನುವುದಂತೂ ನಿಜ.