Actress Samantha: ಪರೋಕ್ಷವಾಗಿ ನಾಗಚೈತನ್ಯ ಬಗ್ಗೆ ಮಾತಾಡಿದ ಸಮಂತಾ, ಹೇಳಿದ್ದೇ ಬೇರೆ

Advertisement
ತೆಲುಗು ಚಿತ್ರರಂಗದಲ್ಲಿ (Telugu Film Industry) ಕ್ಯೂಟ್ ಜೋಡಿ (Cute Couple) ಎಂದೇ ಹೆಸರು ಪಡೆದಿದ್ದ ನಟಿ ಸಮಂತಾ (Samantha) ಹಾಗೂ ನಟ ನಾಗಚೈತನ್ಯ (Nagachaitanya) ಇದೀಗ ದೂರ ಆಗಿರುವುದು ತಮಗೆಲ್ಲಿರಿಗೂ ಸಹ ತಿಳಿದಿರುವ ವಿಚಾರವಾಗಿದೆ. ಇನ್ನು ಮಯೋಸೈಟಿಸ್ (Myositis)ಎಂಬುವಂತಹ ಅಪರೂಪ ಹಾಗೂ ವಿಚಿತ್ರ ಕಾಯಿಲಿಗೆ ನಟಿ ಸಮಂತಾ ತುತ್ತಾಗಿದ್ದರು.
ಸದ್ಯ ಈ ಕಾರಣದಿಂದಾಗಿ ಅವರ ಸಿನಿಮಾ ವೃತ್ತಿ ಜೀವನ (Career life)ಕೂಡ ಕೊಂಚ ಹಿನ್ನಡೆಯಾಗಿತ್ತು ಎನ್ನಬಹುದು. ಸದ್ಯ ಈ ನಡುವೆ ಟಾಲಿವುಡ್ (Tollywood) ಅಂಗಳದಲ್ಲಿ ನಟ ನಾಗಚೈತನ್ಯ ಯುವ ನಟಿ ಜೊತೆ ಡೇಟಿಂಗ್ (Dating) ನಲ್ಲಿದ್ದಾರೆ ಎಂಬುವಂತಹ ಸುದ್ದಿ ಹರಿದಾಡುತ್ತಿದ್ದು ಸದ್ಯ ಇದೀಗ ನಟಿ ಸಮಂತಾ ಈ ಕುರಿತು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನಾಗಚೈತನ್ಯ ಯಾರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಗೊತ್ತಾ?
ನಟ ನಾಗಚೈತನ್ಯಾ ರವರು ಶೋಭಿತಾ (Shobhita) ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದ್ದು ಸದ್ಯ ಬಗ್ಗೆ ಸ್ಯಾಮ್ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ ಎಂದು ವರದಿಯಾಗಿತ್ತು. ಹೌದು ಇದೇ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ಸದ್ದು ಮಾಡುತ್ತಿಡು ಯಾರು ಯಾರ ಜೊತೆ ರಿಲೇಷನ್‌ಶಿಪ್‌ನಲ್ಲಿ ಇದ್ದರೆ ನನಗೇನು? ಪ್ರೀತಿಯ ಮೌಲ್ಯವನ್ನು ತಿಳಿಯದವರು ಎಷ್ಟು ಜನರೊಟ್ಟಿಗೆ ಡೇಟ್ ಮಾಡಿದರೂ ಕಣ್ಣೀರು ಹಾಕುತ್ತಾರೆ. ಕನಿಷ್ಠ ಆ ಹುಡುಗಿಯಾದರೂ ಕೂಡ ಸಂತೋಷವಾಗಿರಬೇಕು. ಅವರು ತಮ್ಮ ನಡವಳಿಕೆ ಬದಲಾಯಿಸಿಕೊಂಡು ಆ ಹುಡುಗಿಯನ್ನು ನೋಯಿಸದಂತೆ ನೋಡಿಕೊಂಡರೆ ಎಲ್ಲರಿಗೂ ಒಳ್ಳೆಯದು ಎಂದು ಸಮಂತಾ ಹೇಳಿರುವುದಾಗಿ ಸುದ್ದಿಯಾಗಿತ್ತು.
ನಿಜಕ್ಕೂ ಸಮಂತಾ ಹೀಗೇ ಹೇಳಿದ್ದಾರ?
ಸದ್ಯ ಈ ಕುರಿತು ಪ್ರತಿಕ್ರಿಯಿಸಿರುವ ಸಮಂತಾ ನಾನು ಈ ರೀತಿ ಹೇಳಲಿಲ್ಲ ಎಂದು ಟ್ವಿಟ್ಟರ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಹೌದು ಸದ್ಯ ಇದೀಗ ಗ್ರೇಟ್ ಆಂಧ್ರ ವೆಬ್‌ಸೈಟ್ ಮಾಡಿರುವ ಪೋಸ್ಟ್ ರೀಟ್ವೀಟ್ ಮಾಡಿ ಸಮಂತಾ ರವರು ನಾನು ಈ ರೀತಿ ಹೇಳಲೇ ಇಲ್ಲ ಎಂದು ಕಾಮೆಂಟ್ ಮಾಡಿದ್ದು ಸದ್ಯ ಸ್ಯಾಮ್ ಟ್ವೀಟ್ ವೈರಲ್ ಆಗುತ್ತಿದೆ.
ಹೌದು ಬಹಳ ದಿನಗಳಿಂದ ನಾಗಚೈತನ್ಯಾ ಮತ್ತು ಶೋಭಿತಾ ಧುಲೀಪಲ ನಡುವೆ ಸಂಥಿಂಗ್ ನಡಿಯುತ್ತಿದೆ ಎಂಬುವಂತಹ ಮಾತುಗಳು ಕೇಳಿಬರುತ್ತಿದ್ದು ಚೈಸ್ಯಾಮ್ ಲವ್ ಮಾಡಿ ಮದುವೆ ಆಗಿದ್ದರು. ಆದರೆ ಮಾತ್ರ ಕೆಲ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ಸಹ ದೂರಾಗುವ ನಿರ್ಧಾರಕ್ಕೆ ಬಂದಿದ್ದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಈ ವಿಚಾರವನ್ನು ಬಹಿರಂಗಪಡಿಸಿದ ಮೇಲೆ ಇಬ್ಬರು ತಮ್ಮ ತಮ್ಮ ದಾರಿ ನೋಡಿಕೊಂಡಿದ್ದರು. ಇನ್ಮುಬಡಿವೋರ್ಸ್ ಬಗ್ಗೆ ಹೆಚ್ಚು ಮಾತನಾಡುವ ಗೋಜಿಗೆ ಹೋಗಿರಲಿಲ್ಲ.