Actress Tamannaah: ಕಷ್ಟ ಇದ್ದಾಗ ಸಮಂತಾ ಮಾಡಿದ ಆ ಸಹಾಯ ನೆನಪಿಸಿಕೊಂಡ ನಟಿ ತಮನ್ನಾ

Advertisement
ಮಿಲ್ಕಿ ಬ್ಯುಟಿ ತಮನ್ನಾ (Actress Tamannaah) ಹಾಗೂ ಸಮಂತಾ (Samantha) ಅವರು ಸಿನೆಮಾ ರಂಗದಲ್ಲಿ ಹೆಚ್ಚು ಮಿಂಚುತ್ತಿರುವ ನಟಿಗಳು, ಅದೇ ರೀತಿ ಇವರ ನಡುವೆ ಸಂಬಂಧ ಉತ್ತಮವಾಗಿ ಇದೆ ಎನ್ನಬಹುದು. ಸಿನೆಮಾ ರಂಗದ ಬೆಸ್ಟ್ ಫ್ರೆಂಡ್ಸ್ (Film Industry Best Friends) ಪಟ್ಟಿಯಲ್ಲಿ ಇವರಿಬ್ಬರು ಸೇರಿದ್ದಾರೆ. ಈ ಮೂಲಕ ಮಿಲ್ಕಿ ಬ್ಯುಟಿ ತಮನ್ನಾ (Milky Beauty Tamannaah) ಅವರು ತಮ್ಮ ನೆಚ್ಚಿನ ಸ್ನೇಹಿತೆ ಸಮಂತಾ ಅವರ ಬಗ್ಗೆ ಮನದಾಳದ ಮಾತನ್ನು ಹೊರ ಹಾಕಿದ್ದರೆ.
ಏನಂದ್ರು ಮಿಲ್ಕಿ ಬ್ಯುಟಿ Tamannaah:
ತಮನ್ನಾ ಅವರು ತಮ್ಮ ಸ್ನೇಹಿತೆ ಸಮಂತಾ ಬಗ್ಗೆ ಮಾತಾಡಿದ್ದಾರೆ. ನಾವಿಬ್ಬರು ಸಿನೆಮಾ ರಂಗದಲ್ಲಿ ಬೆರೆತದ್ದು ಹೀರೋಯಿನ್ ಗಳಾಗಿ ಆದರೂ ನಮ್ಮ ನಡುವೆ ಒಂದು ಒಳ್ಳೆ ಬಾಂಡಿಂಗ್ ಇದೆ. ನಾವು ದಿನ ನಿತ್ಯ ಫೋನ್ ಮಾಡಿ , ಮೀಟ್ ಮಾಡಿ ಎಲ್ಲ ಮಾತನಾಡಲಾರೆವು ಹಾಗೆಂದು ಕಾರ್ಯಕ್ರಮಗಳಿಗೆ ಸಿಕ್ಕರೆ ಸಂಪೂರ್ಣ ಮಾತು ಮುಗಿಯೊವರೆಗೂ ಮಾತನಾಡ್ತೇವೆ. ಹಾಗೆಂದು ನಾವು ಸಿನೆಮಾ ವಿಚಾರ ಮಾತನಾಡ್ತೇವೆ ಎಂದಲ್ಲ ಬದಲಾಗಿ ಹಲವಾರು ವಿಚಾರ ಮಾತನಾಡಲು ಸಿಗುತ್ತದೆ. ಸಮಂತಾ ಅವರಂತೆ ಕಾಜಲ್ ಕೂಡ ನಂಗೆ ಗುಡ್ ಫ್ರೆಂಡ್. ನಾವು ಅನೇಕ ಶೋ, ಖಾಸಗಿ ಕಾರ್ಯಕ್ರಮದಲ್ಲಿ ಒಟ್ಟಾಗಿ ಕಾಣಿಸಿದ್ದೇವೆ. ಹೀರೋಯಿನ್ ಗಳಲ್ಲು ಹೀರೋವಿಸಂ ಇರುತ್ತದೆ. ಹೇಗೆ ಹುಡುಗರು ಸ್ನೇಹಿತರಿಗೆ ಇಂಪಾರ್ಟೆಂಟ್ ನೀಡುತ್ತಾರೆ ಹಾಗೆ ಮಹಿಳೆಯರಲ್ಲೂ ಒಂದು ಬಾಂಡಿಂಗ್ ಇರುತ್ತದೆ. ನಮ್ಮ ಉದ್ದೇಶ ಜನರಿಗೆ ಸಿನೆಮಾ ಮನೋರಂಜನೆ ನೀಡುವುದು ಅದರ ಹೊರತು ನಾವೆಲ್ಲ ಸಮಾನ ಮನಸ್ಕರ ಸ್ನೇಹಿತೆಯರು ಎಂದು ಹೇಳಿದ್ದಾರೆ.
ಸಮಂತಾ ಬಗ್ಗೆ ಏನಂದ್ರು:
ಸಮಂತಾ ಮೈ ಡಿಯರೆಸ್ಟ್ ಫ್ರೆಂಡ್ ಕೊರೊನಾ ಖಾಯಿಲೆ ಬಂದಾಗ ಸ್ಟೀರಾಯ್ಡ್ ಮೆಡಿಸಿನ್ ಸೇವಿಸಿದ್ದ ಪರಿಣಾಮ ದಪ್ಪವಾಗಿ ಬಿಟ್ಟಿದ್ದೆ. ಹೀಗಾಗಿ ತುಂಬಾ ನೆಟ್ಟಿಗರು ಬಾಡಿ ಶೇಮಿಂಗ್ ಮಾಡಿ ಟ್ರೋಲ್ ಮಾಡಿದ್ದರು. ಆಗ ನನಗೆ ಡುಮ್ಮಿ ಎಂದೆಲ್ಲ ಕಮೆಂಟ್ ಮಾಡುತ್ತಿದ್ದರು ಆದರೆ ನಾನು ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ. ನನಗೆ ಈ ವಿಚಾರ ಬೇಸರ ತರಿಸುತ್ತದೆ ಎಂದು ಸಮಂತಾ ಅವರಿಗೂ ಗೊತ್ತಿತ್ತು ಹಾಗಾಗಿ ಯಾಕೆ ಸುಮ್ಮನಿರುವೆ ಏನಾದರೂ ಸರಿಯಾಗೆ ತಿರುಗೇಟು ನೀಡು ಎಂದೆಲ್ಲ ಆ ಸಮಯದಲ್ಲಿ ನನ್ನನ್ನು ಆಕೆ ಸಂತೈಸಿದ್ದಾಳೆ.
ಆಕೆ ಯಾರಿಗೂ ಯಾವುದಕ್ಕೂ ಕೇರ್ ಮಾಡೊಲ್ಲ. ಇದ್ದದ್ದನ್ನು ಇದ್ದ ಹಾಗೆ ಹೇಳುವ ನೇರ ವ್ಯಕ್ತಿತ್ವ ಅವಳದ್ದು. ಆಕೆಗೆ ತುಂಬಾ ಧೈರ್ಯ ಇದೆ. ಹಾಗಾಗಿ ಎಲ್ಲ ಕಲಾವಿದರಿಗೂ ಕಷ್ಟದಲ್ಲಿ ಧ್ವನಿಯಾಗೋ ಮನಸ್ಸು ಕೂಡ ಆಕೆಗಿದೆ. ಅವಳಿಗೆ ಖಾಯಿಲೆ ಬಂದಿದೆ ಎಂದು ತಿಳಿದಾಗ ತುಂಬಾ ದಿನ ನಾನು ಟೆಕ್ಷನ್ ಆಗಿದ್ದೆ . ಆ ವಿಚಾರ ನನಗೆ ತುಂಬಾ ನೋವು ಕೊಟ್ಟಿತು ಆದಷ್ಟು ಬೇಗ ಎಲ್ಲ ಸಮಸ್ಯೆ ಯಿಂದ ಗೆಳತಿ ಪುನಃ ಸಿನೆಮಾ ರಂಗಕ್ಕೆ ಬಂದು ಇನ್ನಷ್ಟು ಮಿಂಚಬೇಕು ಎಂದು ಹೇಳಿದ್ದಾರೆ.