ಇದೇ ಶುಕ್ರವಾರ ಅಂದರೆ ಏಪ್ರಿಲ್ 7ರಂದು ಪೆಂಟಗನ್ (Pentagon) ಎಂಬುವಂತಹ ಕನ್ನಡ ಚಿತ್ರವೊಂದು (Kannada Movie) ತೆರೆ ಕಾಣುತ್ತಿದೆ. ಇನ್ನು ಈ ಚಿತ್ರದಲ್ಲಿ ಕಿರುತೆರೆ ಲೋಕದ (Television) ಖ್ಯಾತ ನಟಿ ತನಿಷಾ ಕುಪ್ಪಂಡ (Tanisha Kuppanda) ರವರು ಬಹಳಾನೇ ಬೋಲ್ಡ್ (Bold) ಆಗಿ ಅಭಿನಯಿಸಿದ್ದಾರೆ. ಸದ್ಯ ಈಗಾಗಲೇ ಈ ಬಗ್ಗೆ ಅವರು ಸಾಕಷ್ಟು ಸಿನಿಮಾ ಸಂದರ್ಶನಗಳಲ್ಲಿ (Interview) ಮಾತನಾಡುತ್ತಿದ್ದು ಇನ್ನು ಇದೆಲ್ಲದರ ನಡುವೆ ಒರ್ವ ಯೂಟ್ಯೂಬರ್ (Youtuber) ಒಬ್ಬ ನಟಿಯ ಜೊತೆಗೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಹೌದು ಸಿನಿಮಾದಲ್ಲಿ ಇಷ್ಟು ಬೋಲ್ಡ್ ಆಗಿ ನಟಿಸಿದ್ದೀರಲ್ಲ ಬೇರೆ ರೀತಿಯ ಸಿನಿಮಾದಲ್ಲಿ ನಟಿಸ್ತೀರಾ? ಎಂದು ಕೇಳಿದ್ದಾನೆ.
ತನಿಷಾ.. ಆ ಚಿತ್ರಗಳಲ್ಲಿ ನಟಿಸ್ತೀರಾ !?
ಹೌದು ಈ ರೀತಿಯ ಪ್ರಶ್ನೆ ಕೇಳಿದ ಕೂಡಲೇ ನಟಿ ಬಹಳಾನೇ ಗರಂ ಆಗಿದ್ದು ತಕ್ಷಣ ಪ್ರತಿಕ್ರಿಯಿಸಿದ ಅವರು ಹಾಗಿದ್ದರೆ ನಾನು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇರಬಾರದಿತ್ತು. ಬೇರೆ ವಯಸ್ಕರ ಚಿತ್ರದ ಸಿನಿಮಾ ಇಂಡಸ್ಟ್ರಿಯಲ್ಲೇ ಇರಬೇಕಿತ್ತು ಎಂದು ರೊಚ್ಚಿಗೆದ್ದಿದ್ದಾರೆ. ಬೋಲ್ಡ್ ಆಗಿ ನಟಿಸಿದ ಮಾತ್ರಕ್ಕೆ ಇಂತಹ ಪ್ರಶ್ನೆ ಕೇಳುವುದರಲ್ಲಿ ಅರ್ಥವಿಲ್ಲ ಎಂದಿರುವ ಅವರು ವಯಸ್ಕರ ಚಿತ್ರದ ತಾರೆಯರು ಬೇಕಾದ ಹಾಗೆ ನಟಿಸುತ್ತಾರೆ. ಆದರೆ ನಾನು ಅಂತಹ ಚಿತ್ರದ ತಾರೆಯಲ್ಲ. ಯಾಕೆ ಈ ರೀತಿಯ ಪ್ರಶ್ನೆಗಳನ್ನು ಮಾಡ್ತಿದ್ದೀರಾ.? ಪ್ರಶ್ನೆ ಮಾಡುವುದಕ್ಕು ಮೊದಲು ಕಾಮನ್ ಸೆನ್ಸ್ ಇರಬೇಕು. ಕನ್ನಡ ಚಿತ್ರರಂಗದಲ್ಲಿ ಯಾರು ಆ ರೀತಿ ಸಿನಿಮಾ ಮಾಡ್ತಿದ್ದಾರೆ? ಯಾಕೆ ಈ ರೀತಿ ಅಸಭ್ಯವಾಗಿ ಪ್ರಶ್ನೆಯನ್ನ ಕೇಳುತ್ತಿದ್ದೀರಾ? ಎಂದು ಕೆಂಡಾಮಂಡಕವಾದರು. ನಂತರ ಚಿತ್ರರಂಗದ ಕೆಲವು ಯೂಟ್ಯೂಬರ್ ಗೆ ಉಗಿದು ಉಪ್ಪಿನಕಾಯಿ ಹಾಕಿದ್ದಾರೆ.
ರಾಜಹುಲಿ ಖ್ಯಾತ ನಟನಿಂದ ಕೂಡ ಇದೇ ಪ್ರಶ್ನೆ..
ಹೌದು ನೀವು ಆ ಮಾದರಿಯ (ವಯಸ್ಕರ) ಚಿತ್ರಗಳನ್ನು ಮಾಡುತ್ತೀರಾ ಎಂದು ಪ್ರಶ್ನಿಸಿದ್ದಕ್ಕೆ ನಟಿ ಆತನ ಮೇಲೆ ಗರಂ ಆಗಿದ್ದರು. ಇದೀಗ ಇದೇ ವಿಚಾರವಾಗಿ ರಾಜಹುಲಿ (Rajahuli) ಖ್ಯಾತಿಯ ಸಹ ನಟರಾದ ಹರ್ಷ (Harsha) ತಮ್ಮ ಇನ್ ಸ್ಟಾಗ್ರಾಂನಲ್ಲಿ (Instagram) ನಟಿಗೆ ನೀವು ಆ ಫಿಲ್ಮ್ ಮಾಡ್ತೀರಾ ಎಂದು ಪ್ರಶ್ನಿಸಿದ್ದು ಈ ಸಂಬಂಧ ನಟಿ ಸುದ್ಗಿಗೋಷ್ಠಿ ನಡೆಸಿ ನಟನ ಬಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಓರ್ವ ಸಹ ನಟನಾಗಿ ಈ ರೀತಿ ಪ್ರಶ್ನೆ ಕೇಳಬಹುದೇ ಎಂದು ಪ್ರಶ್ನಿಸಿದ್ದು ನಾವು ಚಿತ್ರರಂಗದ ಒಂದೇ ಕುಟುಂಬದಲ್ಲಿ ಇರುವಂತವರು. ಹೀಗಿದ್ದರು ಕೂಡ ಹರ್ಷ ನನಗೆ ಈ ರೀತಿ ಪ್ರಶ್ನಿಸಿರುವುದು ಎಷ್ಟು ಸರಿ ಎಂದು ಕೇಳುತ್ತಾ ಬಹಳಾನೇ ಕಣ್ಣೀರು ಹಾಕಿದ್ದಾರೆ. ಸದ್ಯ ಮಾಧ್ಯಮ ಮಿತ್ರರು ಕೂಡ ನಟಿ ಬೆಂಬಲ ಸೂಚಿಸಿದ್ದಾರೆ.