Karnataka Times
Trending Stories, Viral News, Gossips & Everything in Kannada

Kantara 2: ಈ ಬಲವಾದ ಕಾರಣಕ್ಕೆ ರಿಷಬ್ ಬಳಿ ಕಾಂತಾರ 2 ಮಾಡಲೇಬೇಡಿ ಎಂದ ಮಂಗಳೂರಿಗರು.

Advertisement

ನಟ, ನಿರ್ದೇಶಕ, ರಿಷಭ್ ಶೆಟ್ಟಿ‌ (Rishab shetty) ಅವರು ಕಾಂತಾರ (Kantara) ಸಿನೆಮಾ ಮಾಡಿದ ಬಳಿಕ ಡಿವೈನ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಉಳಿದ ಪ್ಯಾನ್ ಇಂಡಿಯಾ ಮಟ್ಟದ ಸಿನೆಮಾಕ್ಕೆ ಹೋಲಿಸಿದರೆ ಲೋ ಬಜೆಟ್ ಸಿನೆಮಾವಾದರೂ ಈ ಸಿನೆಮಾ ಗಳಿಸಿಕೊಟ್ಟ ಯಶಸ್ಸು ಮಾತ್ರ ಎಲ್ಲದಕ್ಕೂ ಹೈ ಆಗಿತ್ತು. ಕರಾವಳಿ ತೀರದ ಸಂಪ್ರದಾಯ, ದೈವ ನಂಬಿಕೆಯನ್ನು ಲೋಕಕ್ಕೆ ಪರಿಚಯಿಸಿ ಹಲವಾರು ಪ್ರಶಸ್ತಿಯನ್ನು ಸಹ ಈ ಸಿನೆಮಾ ಗೆದ್ದುಕೊಂಡಿತ್ತು‌.

ಜನರ ವಿರೋಧಕ್ಕೆ ಕಾರಣವೇನು:

ಕಾಂತಾರ ಸಿನೆಮಾವನ್ನು ಮನಸಾರೆ ಅಪ್ಪಿಕೊಂಡ ಜನತೆ ಬಳಿಕ ಕಾಂತಾರ ಭಾಗ ಎರಡು ಬರುತ್ತದೆ ಎಂದು ಪಿಸು ಮಾತನಾಡಲು ಪ್ರಾರಂಭಿಸಿಬಿಟ್ಟಿದ್ದರು. ಆದರೆ ಈ ಸಿನೆಮಾ ಇಲ್ಲಿಗೆ ನಿಂತರೆ ಉತ್ತಮ ಎಂಬ ಅಭಿಪ್ರಾಯ ಸಹ ಕೇಳಿಬರುತ್ತಿದೆ. ಹಾಗಾದರೆ ಪಾರ್ಟ್ 2‌ (Part2) ಬರಲು ಈ ಜನತೆ ವಿರೋಧ ಮಾಡಲು ಅಸಲಿ ಕಾರಣ ಏನೆಂದು ಈ ಲೇಖನ‌ದ ಮೂಲಕ ತಿಳಿಯಿರಿ.

ಕರಾವಳಿಗರ ಮನವಿ:

ಕರಾವಳಿಯ ದೈವಕಲೆಯನ್ನು ಆಧಾರವಾಗಿಟ್ಟು ನಡೆಸಿದ ಈ ಸಿನೆಮಾವು ಬಹುತೇಕ ಸೂಪರ್ ಹಿಟ್ ಆಯಿತು‌. ಇತ್ತ ಕಡೆ ಕಾಂತಾರ ಭಾಗ 2. (Kanthara Part 2) ರ ಫ್ರಿಕ್ವೆಲ್ ಗೆ ರಿಷಭ್ ಶೆಟ್ಟಿ ಅವರು ಕಥೆ ರೆಡಿ‌ಮಾಡುತ್ತಿದ್ದಾರೆ ಎನ್ನೊ ಮಾತು ಬರುತ್ತಿದ್ದಂತೆ ಕೆಲವರಲ್ಲಿ ಖುಷಿ ಭಾವನೆ ಕಂಡರೆ ಇನ್ನು ಕೆಲವರು ಇದು ಪಾರ್ಟ್ ಒನ್ ನಲ್ಲೇ ಮುಕ್ತಾಯವಾಗೊದೇ ಸರಿ ಯಾಕೆಂದರೆ ಮತ್ತೆ ಅಲ್ಲಿ ತೋರಿಸುವ ವಿಷಯಗಳನ್ನು ಜನರು ತುಲನೆ ಮಾಡಿ ನೋಡುತ್ತಾರೆ , ಅನೇಕರಿಗೆ ಇದು ದೊಡ್ಡ ಸಮಸ್ಯೆಯಾಗೇ ಉಳಿಯುತ್ತದೆ ಸಿನೆಮಾ ಚೆನ್ನಾಗಿಲ್ಲ ಅಂತಾರೆ ಎಂದು ರಿಷಭ್ ಅಭಿಮಾನಿಗಳು ಹೇಳುತ್ತಿದ್ದಾರೆ.

ಐಪಿಎಲ್ ನಲ್ಲೂ ದೈವ ನರ್ತನದ ವೇಷ:

ಐಪಿಎಲ್ ಇದೀಗ ಆರಂಭವಾಗಿದ್ದು ಅದಕ್ಕೆ ದೈವ ನರ್ತಕರ ವೇಷ ಹಾಕಿ ಆರ್ ಸಿಬಿ (RCB) ಅಭಿಮಾನಿ ಓರ್ವರು ಕುಣಿದಿದ್ದು ಸದ್ಯ ಇದು ದೈವಾರಾಧಕರಿಗೆ ಅವಮಾನ ಮಾಡಿದಂತೆ ಎಂದು ಜನರು ಹೇಳುತ್ತಿದ್ದಾರೆ. ಆರ್ ಸಿಬಿ ಫ್ಯಾನ್ ಮಾಡಿದ್ದ ದೈವ ನರ್ತನವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ಅದರಲ್ಲಿ ರಿಷಭ್ ಅವರನ್ನು ಟ್ಯಾಗ್ ಮಾಡಿ ದುರ್ಗಾದಾಸ್ ರಾಮದಾಸ್ ಕಟೀಲು (Durgadas Ramadas Katilu) ಅವರು ತಮ್ಮ ಬೇಸರವನ್ನು ತಿಳಿಸಿದ್ದಾರೆ. ಈಗ ದೈವ ನರ್ತನವನ್ನು ಫ್ಯಾಷನ್ ಮಾಡುತ್ತಿದ್ದೀರಿ ರಿಷಭ್ ಅವರೆ ನೀವು ಕಾಂತಾರ ಭಾಗ 2ಮಾಡೋದು ಬೇಡ ಎಂದು ಸಾಮಾಜಿಕ ಜಾಲತಾಣದಲ್ಲಿ ಬಹುತೇಕ ಕರಾವಳಿಗರು ಹಾಗೂ ಹೊರಗಿನವರು ಮನವಿ ಮಾಡಿದ್ದಾರೆ.

ಟ್ವಿಟ್ಟರ್ ಅಭಿಯಾನ:

ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಇನ್ನೊರ್ವ ಅಭಿಮಾನಿ ಗಣೇಶ್ (Ganesh) ಎನ್ನುವವರು ಇದು ಇಷ್ಟೋಂದು ಮಹಾತ್ಮ ಹೊಂದಿದ್ದ ದೈವವಾಗಿದ್ದರೆ ಮೊದಲ ಭಾಗ ಬರಲು ಬಿಡಬಾರದಿತ್ತು. ಜನರಿಗೆ ಕರಾವಳಿ ಸಂಪ್ರದಾಯ ತಿಳಿಸುವ ಪ್ರಯತ್ನಕ್ಕೆ ಬೆಂಬಲಿಗರಾಗೋಣ ಎಂದಿದ್ದು ರಿಷಭ್ ಕಾಂತಾರ ಭಾಗ ಎರಡು ಮಾಡಿದರೂ ಉತ್ತಮವೇ ಎಂಬ ಮಾತು ಕೇಳಿಬರುತ್ತಿದೆ‌‌. ಸುದೀಪ್ ಶೆಟ್ಟಿ (Sudeep shetty) ಅನ್ನುವವರು ಶೆಟ್ರೆ ಕರಾವಳಿಗರ ನಂಬಿಕೆಗೆ ಇನ್ನೂ ಜೀವ ಇದೆ ಭಾಗ ಎರಡು ಮಾಡಿ ಅದನ್ನು ಹಾಳು ಮಾಡಬೇಡಿ ಈಗ ಸಿಕ್ಕ ಯಶಸ್ಸಿನಲ್ಲೇ ಸಂತೃಪ್ತರಾಗಿ ಎಂದಿದ್ದಾರೆ. ಇದನ್ನು ಕಂಡ ಇನ್ನೋರ್ವ ವ್ಯಕ್ತಿ ದೈವಾರಾದನೆ ಎಂಬುದು ಜಾನಪದ ಕಲೆ ಅಲ್ಲ ಬದಲಾಗಿ ಅದು ಧಾರ್ಮಿಕ ನಂಬಿಕೆಯ ಭಾಗವಾಗಿದೆ. ಆ ನರ್ತನಕ್ಕೂ ಒಂದು ಮಹತ್ವವಿದೆ ಸುಮ್ಮನೆ ಅಗೌರವ ಸಲ್ಲಿಸಬೇಡಿ ಎಂದು ಕಮೆಂಟ್ ಮಾಡಿದ್ದಾರೆ.ಹೀಗೆ ಜನರು ತಮ್ಮ ಅಭಿಪ್ರಾಯ ಗಳ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ

Leave A Reply

Your email address will not be published.